ರಾಜಕೀಯ ವೈಷಮ್ಯಕ್ಕೆ ಬಲಿಯಾದ ಜಾತ್ರೆ

ಶನಿವಾರ, ಜೂಲೈ 20, 2019
22 °C

ರಾಜಕೀಯ ವೈಷಮ್ಯಕ್ಕೆ ಬಲಿಯಾದ ಜಾತ್ರೆ

Published:
Updated:

ಆಳಂದ: ತಾಲ್ಲೂಕಿನ ಮಾಡಿಯಾಳ ಗ್ರಾಮದಲ್ಲಿ ಬುಧವಾರ ರಾತ್ರಿ ಬಾದಮಿ ಅಮಾವಾಸ್ಯೆಯಂದು ಜರಗುವ ಸುಪ್ರಸಿದ್ಧ ಶ್ರೀ  ಅಮೋಘಸಿದ್ದೆೀಶ್ವರ ಜಾತ್ರಾ ಸಮಯದಲ್ಲಿ ಪೂಜಾರಿಗಳ ಹಾಗೂ ಭಕ್ತಾದಿಗಳ ನಡುವೆ ವಾಗ್ವಾದ ನಡೆದು ಗೊಂದಲದ ನಡುವೆ ಜಾತ್ರೆ ಜರುಗಿತು.ಜಾತ್ರೆಯ ನಿಮಿತ್ತ ಇಬ್ಬರು ಪೂಜಾರಿಗಳಿಗೆ ಮಖಾಗಳನ್ನು ಕಟ್ಟಿ ಗ್ರಾಮದಲ್ಲಿ ರಾತ್ರಿಯೆಲ್ಲ ಮೆರವಣಿಗೆ ಮಾಡಿ ಬೆಳಗಿನ ಜಾವ ದೇವಸ್ಥಾನದ ಆವರಣದಲ್ಲಿ ಬಂದು ಪ್ರಸಕ್ತ ಹಂಗಾಮಿನ ಮಳೆ, ಬೆಳೆಗಳ ಕುರಿತು ಹೇಳಿಕೆಗಳು ನುಡಿಯುವರು.ಕೆಲವು ವರ್ಷಗಳಿಂದ ಹಿರಿಯ ಪೂಜ್ಯರಾದ ರೇವಪ್ಪ ಪೂಜಾರಿಯವರಿಗೆ ಹೇಳಿಕೆ ಹೇಳುವ ಮಖಾ ಕಟ್ಟುತ್ತಿದ್ದರು. ಕಿರಿಯ ಪೂಜ್ಯರಿಗೆ ಮೂಕ ಮಖಾ ಕಟ್ಟುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ. ಮೂರ‌್ನಾಲ್ಕು ವರ್ಷಗಳ ಹಿಂದೆ ಹಿರಿಯ ಪೂಜ್ಯರಾದ ರೇವಪ್ಪ ಇವರ ಬಾಯಿಂದ ಬರುವ ಮಾತುಗಳು ಏಕಾಎಕಿ ನಿಲ್ಲಿಸಿದ ಕಾರಣ ಮಖಾ ಕಟ್ಟುವ ಸಮಸ್ಯೆ ಗ್ರಾಮದಲ್ಲಿ ಉದ್ಭವಿಸಿದೆ.ಮಾಡಿಯಾಳ ಅಮೋಘಸಿದ್ಧನ ಹೇಳಿಕೆ ಮೂಲಕ ಈ ಭಾಗದ ಕೃಷಿ ಚಟುವಟಿಕೆಗಳು ಪ್ರಾರಂಭವಾಗುತ್ತವೆ.  ಮುಂಗಾರು- ಹಿಂಗಾರು ಮಳೆ-ಬೆಳೆ ಬಗೆಗೆ ಅವರ ಭವಿಷ್ಯವಾಣಿ ನಂಬಿ ರೈತರು ತಮ್ಮ ಕೃಷಿ ಕಾರ್ಯಗಳನ್ನು ಆರಂಭಿಸುತ್ತಾರೆ. ಈ ಸಲದ ಗದ್ದಲದ ವಾತಾವರಣ ಸುತ್ತಲಿನಿಂದ ಬಂದ ಸಾವಿರಾರು ರೈತರು ಮಧ್ಯದಲ್ಲಿ ತಮ್ಮ ತಮ್ಮ ಗ್ರಾಮಗಳಿಗೆ ಹೋಗುವಂತಾಯಿತು.ಗ್ರಾಮದ ರಾಜಕೀಯ ವೈಷಮ್ಯಗಳು ಜಾತ್ರಾ ಅಂಗಳದಲ್ಲಿ ತಂದು ಪೂಜಾರಿಗಳ ಪರವಿರೋಧವಾಗಿ ಮಖಾ ಕಟ್ಟುವ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ಪ್ರಾರಂಭವಾಯಿತು. ಗ್ರಾಮಸ್ಥರ ಪಂಚಾಯಿತಿಯು ಫಲನೀಡದೇ ವಾದವಿವಾದ ನಡುವೆ ಪ್ರಭುರಾವ ಪೂಜಾರಿಯವರೆ ಹೇಳಿಕೆ ಹೇಳಿದರು.ಪಲ್ಲಕ್ಕಿ ಮೆರವಣಿಗೆ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಖಾರದ ಪುಡಿ ಎರಚಿದ್ದರಿಂದ ಉದ್ವಗ್ನ ವಾತಾವರಣ ಕಂಡು ಬಂತು. ಪೊಲೀಸ್ ಬಂದೋಬಸ್ತ್ ಮಧ್ಯೆ ಮೆರವಣಿಗೆ ಸಾಗಿ ದೇವಸ್ಥಾನಕ್ಕೆ ಬಂದು ತಲುಪಿತು. ಗೊಂದಲದ ವಾತಾವರಣದಿಂದಾಗಿ ಯಾವ ಹೇಳಿಕೆಗಳು ಭಕ್ತರಿಗೆ ಸರಿಯಾಗಿ ಕೇಳಿಸಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry