ಅವಧಿ ಒಂದೇ, ಡಿಗ್ರಿ ಎರಡು ನ್ಯಾಯ ಕೇಳಿ ಜೂನ್ 9ರಂದು ಉಪವಾಸ

ಬುಧವಾರ, ಜೂಲೈ 17, 2019
25 °C

ಅವಧಿ ಒಂದೇ, ಡಿಗ್ರಿ ಎರಡು ನ್ಯಾಯ ಕೇಳಿ ಜೂನ್ 9ರಂದು ಉಪವಾಸ

Published:
Updated:

ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಕಾನೂನು ಬಾಹಿರವಾಗಿ ಒಂದೇ ಶೈಕ್ಷಣಿಕ ವರ್ಷದಲ್ಲಿ ಎರಡು ಪದವಿ ಪಡೆದುಕೊಂಡಿದ್ದಲ್ಲದೆ, ಬಿಪಿಎಡ್ ಪದವಿ ಮೂಲಕ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಕಾನೂನಿನ ಅನ್ವಯ ಅಭ್ಯರ್ಥಿಯ ಎರಡೂ ಪದವಿಗಳನ್ನು ರದ್ದುಪಡಿಸಬೇಕೆಂದು ಉದ್ಯೋಗ ವಂಚಿತ ಶಿವಯೋಗಿ ಚಂದ್ರಾಮ ಆಗ್ರಹಿಸಿದ್ದಾರೆ.ಹಿನ್ನೆಲೆ: ಸಂಗನಬಸಪ್ಪ ಕಾಳಪ್ಪ ಎಂಬ ಅಭ್ಯರ್ಥಿ ಯಾದಗಿರಿಯ ಜವಾಹರ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ, ರಾಯಚೂರಿನ ಕನಿಷ್ಕಾ ಕಾಲೇಜಿನಲ್ಲಿ ಬಿಪಿಎಡ್ ಪದವಿ ಪಡೆಯುವ ಮೂಲಕ ವಿಶ್ವವಿದ್ಯಾಲಯದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.ಸುಮಾರು 11 ತಿಂಗಳಿನಿಂದ ದೈಹಿಕ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಸಂಗನಬಸಪ್ಪ, ಕಾನೂನಿನ ತೊಡಕು ಎದುರಾದ್ದರಿಂದ ಕಾನೂನು ಪದವಿಯನ್ನು ಹಿಂತೆಗೆದುಕೊಳ್ಳುವಂತೆ ವಿಶ್ವವಿದ್ಯಾಲಯಕ್ಕೆ ಮನವಿ ಮಾಡಿದ್ದರು.ಈ ಬಗ್ಗೆ ಸಿಂಡಿಕೇಟ್ ಸಭೆ ಸೇರಿ ಮಾನವೀಯ ದೃಷ್ಟಿಯಿಂದ ಸಂಗನಬಸಪ್ಪ ಅವರ ಕಾನೂನು ಪದವಿ ಹಿಂತೆಗೆದುಕೊಳ್ಳಲು ನಿರ್ಧರಿಸಿತು. ಆಗ ಉದ್ಯೋಗ ವಂಚಿತ ಶಿವಯೋಗಿ ಎಂಬುವವರು ಸಂಗನಬಸಪ್ಪ ಅವರು ಒಂದೇ ಅವಧಿಯಲ್ಲಿ ಒಂದೇ ವಿಶ್ವವಿದ್ಯಾಲಯದಿಂದ ಎರಡು ಪದವಿ ಪಡೆಯಲು ಹೇಗೆ ಸಾಧ್ಯ?ಎಂದು ಸಂಗನಬಸಪ್ಪ ಮಾಡಿರುವ ಪ್ರಮಾದವನ್ನು ಸರ್ಕಾರಕ್ಕೆ ತಿಳಿಸಿದ್ದರಿಂದ ರಾಜ್ಯಪಾಲರು ಈ ಬಗ್ಗೆ ತೆಗೆದುಕೊಂಡ ಕ್ರಮದ ಬಗ್ಗೆ ಕೇಳಿರುವುದರಿಂದ ವಿಶ್ವವಿದ್ಯಾಲಯಕ್ಕೆ ಮತ್ತೆ ಸಮಸ್ಯೆ ಎದುರಾಯಿತು.

ಏಪ್ರಿಲ್ 6, 2011ರಂದು ವಿಶ್ವವಿದ್ಯಾಲಯ ಈ ವಿಷಯವನ್ನು ಅಕಾಡೆಮಿಕ್ ಕೌನ್ಸಿಲ್‌ಗಮನಕ್ಕೆ ತಂದಾಗ ಸದಸ್ಯರಲ್ಲಿ ಒಮ್ಮತದ ಅಭಿಪ್ರಾಯ ಮೂಡಲಿಲ್ಲ.ಕೊನೆಗೆ ಸಭೆಯಲ್ಲಿದ್ದ 24 ಸದಸ್ಯರ ವೈಯಕ್ತಿಕ ಅಭಿಪ್ರಾಯವನ್ನು ಕೇಳಿದಾಗ ಅದರಲ್ಲಿ 15 ಜನ ಸದಸ್ಯರು ಸಂಗನಬಸಪ್ಪ ಅವರ ಒಂದೇ ಡಿಗ್ರಿಯನ್ನು ವಾಪಸ್ ಪಡೆಯಿರಿ ಎಂದರು. 6 ಜನ ಸದಸ್ಯರು ವಿಶ್ವವಿದ್ಯಾಲಯ ನಿಯಮಾವಳಿ ಪ್ರಕಾರ ಕ್ರಮ ತೆಗೆದುಕೊಳ್ಳಬಹುದು ಎಂದರು. ಇನ್ನೂ ಮೂರು ಜನ ಉತ್ತರಿಸಿರಲಿಲ್ಲ.ಆಗ್ರಹ: ವಿಶ್ವವಿದ್ಯಾಲಯದ ನಿಯಮಾವಳಿ ಪ್ರಕಾರ ಇಂಥ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಹಿಂದೆ ವಿಶ್ವವಿದ್ಯಾಲವೇ ತೆಗೆದುಕೊಂಡ ಕಠಿಣ ಕ್ರಮದಂತೆ ಸಂಗನಬಸಪ್ಪ ಕಾಳಪ್ಪ ಪ್ರಕರಣದಲ್ಲೂ ನಡೆದುಕೊಳ್ಳುವ ಮೂಲಕ ನ್ಯಾಯ ಎತ್ತಿ ಹಿಡಿಯಬೇಕು ಎಂದು ಶಿವಯೋಗಿ ಆಗ್ರಹಿಸಿದ್ದಾರೆ. ಕಾನೂನು ಅನ್ವಯ ಸದರಿ ವ್ಯಕ್ತಿಯ ಎರಡೂ ಹುದ್ದೆಗಳನ್ನು ರದ್ದುಪಡಿಸಲು ಆಗ್ರಹಿಸಿ ಜೂನ್ 9ರಂದು ವಿಶ್ವವಿದ್ಯಾಲಯದ ಆಡಳಿತ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಏಪ್ರಿಲ್ 7, 2011 `ಪ್ರಜಾವಾಣಿ~ಯಲ್ಲಿ ಅವಧಿ ಒಂದೇ, ಡಿಗ್ರಿ ಎರಡು: ಚರ್ಚೆಗೆ ಗ್ರಾಸ ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಕಟವಾಗಿರುವ ವರದಿಯನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry