ಚಾಮರಾಜನಗರ 163, ಕೊಳ್ಳೇಗಾಲದಲ್ಲಿ 117 ಮಂದಿ ಉಮೇದುವಾರರು

7
ನಗರಸಭಾ ಚುನಾವಣೆ: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯ

ಚಾಮರಾಜನಗರ 163, ಕೊಳ್ಳೇಗಾಲದಲ್ಲಿ 117 ಮಂದಿ ಉಮೇದುವಾರರು

Published:
Updated:
Deccan Herald

ಚಾಮರಾಜನಗರ/ಕೊಳ್ಳೇಗಾಲ: ಜಿಲ್ಲೆಯ ಚಾಮರಾನಗರ ಮತ್ತು ಕೊಳ್ಳೇಗಾಲ ನಗರಸಭೆಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶನಿವಾರ ಕೊನೆಗೊಂಡಿದೆ.

ಚಾಮರಾಜನಗರದ ಎಲ್ಲ 31 ವಾರ್ಡ್‌ಗಳಿಂದ 163 ಮತ್ತು ಕೊಳ್ಳೇಗಾಲದ 31 ವಾರ್ಡ್‌ಗಳಿಂದ 117 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟಾರೆ 62 ವಾರ್ಡ್‌ಗಳಲ್ಲಿ 280 ಮಂದಿ ಉಮೇದುವಾರಿಕೆ ಸಲ್ಲಿಸಿದಂತೆ ಆಗಿದೆ. 

ಇದೇ 20ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಆಗಸ್ಟ್ 23 ಕೊನೆಯ ದಿನ.

ನಾಮಪತ್ರ ಸಲ್ಲಿಸಲು ಶನಿವಾರ ಕೊನೆಯ ದಿನವಾಗಿದ್ದರಿಂದ ನಾಮಪತ್ರ ಸ್ವೀಕರಿಸುವ ಸ್ಥಳಗಳಲ್ಲಿ ದಟ್ಟಣೆ ಕಂಡು ಬಂತು. ಮಧ್ಯಾಹ್ನ 3 ಗಂಟೆ ಒಳಗಾಗಿ ಸಲ್ಲಿಸಬೇಕಾಗಿದ್ದರಿಂದ ಸ್ಪರ್ಧಿಸಲು ಬಯಸುವವರು ಬೆಂಗಲಿಗರೊಂದಿಗೆ ಬೆಳಗ್ಗಿನಿಂದಲೇ ನಾಮಪತ್ರ ಸ್ವೀಕಾರ ಕೇಂದ್ರದತ್ತ ಜಮಾಯಿಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಬೆಂಬಲಿಗರೊಂದಿಗೆ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಚಾಮರಾಜನಗರ ನಗರಸಭೆಯ ವಾರ್ಡ್‌ಗಳ ಪೈಕಿ 15ನೇ ವಾರ್ಡ್‌ನಲ್ಲಿ (ಸಾಮಾನ್ಯ) ಅತಿ ಹೆಚ್ಚು ಅಂದರೆ 13 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಅತೀ ಕಡಿಮೆ ಕಡಿಮೆ ಅಂದರೆ ಏಳು ಮತ್ತು 22ನೇ ವಾರ್ಡ್‌ನಲ್ಲಿ ತಲಾ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಉಳಿದಂತೆ 3ನೇ ಮತ್ತು 12ನೇ ವಾರ್ಡ್‌ಗಳಲ್ಲಿ ತಲಾ 10 ಮಂದಿ ಉಮೇದುವಾರರಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಎಲ್ಲ ವಾರ್ಡ್‌ಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. 

ಕೊಳ್ಳೇಗಾಲದಲ್ಲಿ 18, 27ನೇ  ವಾರ್ಡ್‌ಗಳಿಂದ  ಅತಿ ಹೆಚ್ಚು ಅಂದರೆ ತಲಾ 7 ಮಂದಿ ನಾಮಪತ್ರ ಸಲ್ಲಿಸಿದ್ದರೆ, 3, 6, 15, 16, 22 ಮತ್ತು 30 ವಾರ್ಡ್‌ಗಳಲ್ಲಿ ತಲಾ ಇಬ್ಬರು ಉಮೇದುವಾರಿಕೆ ಸಲ್ಲಿಸಿದ್ದಾರೆ. ಕಾಂಗ್ರೆಸ್‌, ಬಿಎಸ್‌ಪಿ ಮತ್ತು ಬಿಜೆಪಿ ಕ್ರಮವಾಗಿ 31, 29 ಮತ್ತು 23 ವಾರ್ಡ್‌ಗಳಿಂದ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 

ಚಾಮರಾಜನಗರ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್‌ 1ರಿಂದ 16ರವರೆಗೆ ತಾಲ್ಲೂಕು ಪಂಚಾಯಿತಿ ಆವರಣದ ಸಾಮರ್ಥ್ಯ ಸೌಧ ಕಟ್ಟಡದಲ್ಲಿ ನಾಮಪತ್ರ ಸ್ವೀಕಾರ ಕೇಂದ್ರ ತೆರೆಯಲಾಗಿತ್ತು. ಉಳಿದ ವಾರ್ಡ್‌ಗಳಿಗೆ (17ರಿಂದ 24) ಸಿಡಿಎಸ್ ಸಮುದಾಯ ಭವನದಲ್ಲಿ ಕೇಂದ್ರ ತೆರೆಯಲಾಗಿತ್ತು.

ಕೊಳ್ಳೇಗಾಲ ನಗರಸಭೆಗೆ ಸಂಬಂಧಿಸಿದಂತೆ ವಾರ್ಡ್‌ 1ರಿಂದ 8ರವರೆಗೆ ತಾಲ್ಲೂಕು ಕಚೇರಿ ಕಟ್ಟಡ, ವಾರ್ಡ್ 9ರಿಂದ 16ರವರೆಗೆ –ತಾಲ್ಲೂಕು ಪಂಚಾಯಿತಿ ಸಭಾಂಗಣ, ವಾರ್ಡ್ 17 ರಿಂದ 24ರವರೆಗೆ ಸಿಡಿಎಸ್ ಭವನ ಮತ್ತು ವಾರ್ಡ್ 25 ರಿಂದ 31ರವರೆಗೆ ಎಪಿಎಂಸಿ ಕಚೇರಿಯಲ್ಲಿ ನಾಮಪತ್ರ ಸ್ವೀಕಾರಕ್ಕೆ ಸ್ಥಳ ನಿಗದಿ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !