ಗುರುವಾರ , ನವೆಂಬರ್ 14, 2019
19 °C

ಭೀಮಾ ಬ್ಯಾರೇಜ್‌ನಿಂದ ನೀರು ಬಿಡಲು ಆಗ್ರಹ

Published:
Updated:

ಅಫಜಲಪುರ: ತಾಲ್ಲೂಕಿನಲ್ಲಿ ಹರಿಯುವ ಭೀಮಾ ನದಿಗೆ 4 ಬ್ಯಾರೇಜ್‌ಗಳಲ್ಲಿ ನೀರು ನಿಲ್ಲಿಸಲಾಗಿದೆ. ಆದರೆ ಬ್ಯಾರೇಜ್‌ನ ಕೆಳ ಭಾಗದ ಭೀಮಾ ನದಿ ಬತ್ತಿ ಹೋಗಿದ್ದು, ಕುಡಿಯುವ ನೀರಿಗಾಗಿ ಜನ, ಜಾನುವಾರುಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ನದಿ ಪಾತ್ರದ ರೈತರು ಆತಂಕವ್ಯಕ್ತಪಡಿಸಿದ್ದಾರೆ.ಸೊನ್ನ ಹತ್ತಿರ ನಿರ್ಮಾಣವಾಗಿರುವ ಭೀಮಾ ಬ್ಯಾರೇಜ್‌ನಲ್ಲಿ ನೀರು ಸಂಗ್ರಹಿಸಲಾಗಿದ್ದು, ಬ್ಯಾರೇಜ್‌ನಿಂದ ನೀರು ಬಿಟ್ಟರೆ ಕೆಳಗಿನ ಭಾಗದ ರೈತರಿಗೆ ಅನುಕೂಲವಾಗುತ್ತದೆ. ಈಗಾಗಲೆ ಮಳೆಗಾಲ ಆರಂಭವಾಗಿದ್ದು, ಅಲ್ಲಲ್ಲಿ ಮಳೆಯಾಗುತ್ತಿದೆ. ಬ್ಯಾರೇಜ್‌ನಲ್ಲಿ ನೀರು ಮಲೀನವಾಗಿದ್ದು ಭೀಮಾ ಏತ ನೀರಾವರಿ ಅಧಿಕಾರಿಗಳು ಬ್ಯಾರೇಜ್‌ನಿಂದ ನೀರು ಬಿಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

 

ಪ್ರತಿಕ್ರಿಯಿಸಿ (+)