ಆಹಾರ ಧಾನ್ಯ, ಸೀಮೆಎಣ್ಣೆ ಬಿಡುಗಡೆ

ಗುರುವಾರ , ಜೂಲೈ 18, 2019
23 °C

ಆಹಾರ ಧಾನ್ಯ, ಸೀಮೆಎಣ್ಣೆ ಬಿಡುಗಡೆ

Published:
Updated:

ಗುಲ್ಬರ್ಗ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಗುಲ್ಬರ್ಗ, (ಶಹಾಬಾದ, ವಾಡಿ ಸೇರಿದಂತೆ) ಜಿಲ್ಲೆಗೆ ಜೂನ್ ತಿಂಗಳಲ್ಲಿ ಪಡಿತರ ಚೀಟಿದಾರರಿಗೆ ವಿತರಣೆ ಮಾಡಲು ಆಹಾರ ಧಾನ್ಯಗಳನ್ನು ಬಿಡುಗಡೆ ಮಾಡಿದೆ. ಪ್ರತಿ ಕಾರ್ಡಿಗೆ ನಿಗದಿಪಡಿಸಿದ ಆಹಾರ ಧಾನ್ಯ ಪ್ರಮಾಣದ ವಿವರ ಇಂತಿದೆ.ಅಂತ್ಯೋದಯ ಅನ್ನ: ಅಕ್ಕಿ-29 ಕೆ.ಜಿ. ಮತ್ತು ದರ ಪ್ರತಿ ಕೆ.ಜಿ.ಗೆ 3 ರೂಪಾಯಿ ಹಾಗೂ ಗೋಧಿ-6 ಕೆ.ಜಿ. ಮತ್ತು ದರ ಪ್ರತಿ ಕೆ.ಜಿ.ಗೆ ರೂ. 2ಅಕ್ಷಯ: ಪ್ರತಿ ಯೂನಿಟ್ಟಿಗೆ ಅಕ್ಕಿ- ಕನಿಷ್ಟ 4 ಕೆ.ಜಿ. ಮತ್ತು ಗರಿಷ್ಟ 20 ಕೆ.ಜಿ. ಮತ್ತು ದರ ಪ್ರತಿ ಕೆ.ಜಿ.ಗೆ ರೂ. 3 ಹಾಗೂ ಪ್ರತಿ ಯೂನಿಟ್ಟಿಗೆ ಗೋಧಿ-ಕನಿಷ್ಠ 1 ಕೆ.ಜಿ. ಮತ್ತು ಗರಿಷ್ಟ 3 ಕೆ.ಜಿ. ಮತ್ತು ದರ ಪ್ರತಿ ಕೆ.ಜಿ.ಗೆ ರೂ. 3 ಅಕ್ಷಯ ಪಡಿತರ ಕಾರ್ಡುದಾರರಿಗೆ ಯೂನಿಟ್ ಆಧಾರದಲ್ಲಿ ಆಹಾರಧಾನ್ಯ ಬಿಡುಗಡೆ ಮಾಡಿದ ಪ್ರಮಾಣ ಇಂತಿದೆ.:1 ಯೂನಿಟ್-4 ಕೆ.ಜಿ. ಅಕ್ಕಿ ಮತ್ತು 1 ಕೆ.ಜಿ. ಗೋಧಿ. 2 ಯೂನಿಟ್-8 ಕೆ.ಜಿ. ಅಕ್ಕಿ ಮತ್ತು 1 ಕೆ.ಜಿ. ಗೋಧಿ. 3 ಯೂನಿಟ್-12 ಕೆ.ಜಿ. ಅಕ್ಕಿ ಮತ್ತು 2 ಕೆ.ಜಿ. ಗೋಧಿ. 4 ಯೂನಿಟ್-16 ಕೆ.ಜಿ. ಅಕ್ಕಿ ಮತ್ತು 3 ಕೆ.ಜಿ. ಗೋಧಿ. 5 ಯೂನಿಟ್ ಹಾಗೂ ಅದಕ್ಕಿಂತ ಹೆಚ್ಚು-20 ಕೆ.ಜಿ. ಅಕ್ಕಿ ಮತ್ತು 3 ಕೆ.ಜಿ. ಗೋಧಿ. ಅದೇ ರೀತಿ ಪ್ರತಿ ಅಂತ್ಯೋದಯ ಅನ್ನ, ಅಕ್ಷಯ ಹಾಗೂ ನೆಮ್ಮದಿ ಬಿ.ಪಿ.ಎಲ್. ಪಡಿತರ ಕಾರ್ಡುದಾರರಿಗೆ ತಲಾ ಒಂದು ಕೆ.ಜಿ. ಸಕ್ಕರೆ ಬಿಡುಗಡೆ ಮಾಡಲಾಗಿದೆ.ಭಾವಚಿತ್ರ ತೆಗೆಯಿಸಿಕೊಂಡಿರುವ ಅನಿಲರಹಿತ ಪಡಿತರ ಕೂಪನ್‌ಗಳಿಗೆ ಅನೌಪಚಾರಿಕ ಪಡಿತರ ಪ್ರದೇಶದಲ್ಲಿ 6 ಲೀಟರ್, ಪಟ್ಟಣ ಪ್ರದೇಶದಲ್ಲಿ 5 ಲೀಟರಿನಂತೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 3 ಲೀಟರಿನಂತೆ ಸೀಮೆ ಎಣ್ಣೆ ಬಿಡುಗಡೆ ಮಾಡಲಾಗಿದೆ.ಸರ್ಕಾರದಿಂದ ಭಾವಚಿತ್ರ ಹಾಗೂ ಜೀವಮಾಪಕ ನೀಡಿರುವ ಅನಿಲರಹಿತ ಪಡಿತರ ಕೂಪನ್‌ದಾರರಿಗೆ ಮಾತ್ರ ಸೀಮೆ ಎಣ್ಣೆ ಬಿಡುಗಡೆ ಮಾಡಲು ನಿರ್ದೇಶನಗಳಿರುವ ಹಿನ್ನೆಲೆಯಲ್ಲಿ ಭಾವಚಿತ್ರ ತೆಗೆಸಿಕೊಂಡಿರುವ ಅನಿಲರಹಿತ ಪಡಿತರ ಕೂಪನ್‌ದಾರರಿಗೆ ಹಾಗೂ ಪ್ರೀ ನೆಮ್ಮದಿ ಖಾಯಂ ಪಡಿತರ ಚೀಟಿ ಪಡೆದ ಗ್ರಾಹಕರಿಗೆ ಮಾತ್ರ ಸೀಮೆ ಎಣ್ಣೆ ತರಿಸಲಾಗುವುದು ಎಂದು ಆಹಾರ ಇಲಾಖೆಯ ಉಪನಿರ್ದೇಶಕ ಎ. ಟಿ. ಜಯಪ್ಪ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry