2.9 ಕೋಟಿ ಬಳಕೆದಾರರ ಮಾಹಿತಿಗೆ ಕನ್ನ

7

2.9 ಕೋಟಿ ಬಳಕೆದಾರರ ಮಾಹಿತಿಗೆ ಕನ್ನ

Published:
Updated:

ಸ್ಯಾನ್‌ ಫ್ರ್ಯಾನ್ಸಿಸ್ಕೊ: ಸುಮಾರು 2.9 ಕೋಟಿ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಹ್ಯಾಕರ್‌ಗಳು ಕದ್ದಿದ್ದಾರೆ ಎಂದು ಫೇಸ್‌ಬುಕ್‌ ಶುಕ್ರವಾರ ತಿಳಿಸಿದೆ.

ಈ ಮೊದಲು 5 ಕೋಟಿ ಬಳಕೆದಾರರ ಮಾಹಿತಿಗೆ ಕನ್ನ ಹಾಕಲಾಗಿದೆ ಎಂದು ಫೇಸ್‌ಬುಕ್‌ ತಿಳಿಸಿತ್ತು.

’ನಾವು ಅಂದಾಜು ಮಾಡಿದ್ದಕ್ಕಿಂತ ಕಡಿಮೆ ಬಳಕೆದಾರರ ಮೇಲೆ ಪರಿಣಾಮ ಬೀರಿದೆ. ಕನ್ನ ಹಾಕಿದವರ ಮಾಹಿತಿ ಪತ್ತೆಯಾಗಿಲ್ಲ. 1.5 ಕೋಟಿ ಬಳಕೆದಾರರ ಹೆಸರು, ದೂರವಾಣಿ ಸಂಖ್ಯೆ, ಇ–ಮೇಲ್‌ ವಿಳಾಸಗಳನ್ನು ಕದಿಯಲಾಗಿದೆ. ಉಳಿದ 1.4 ಕೋಟಿ ಬಳಕೆದಾರರಿಗೆ ಹೆಚ್ಚು ಹಾನಿಯಾಗುವ ರೀತಿಯಲ್ಲಿ ಮಾಹಿತಿ ಪಡೆದಿದ್ದಾರೆ. ಸೈಬರ್‌ ದಾಳಿ ಮಾಡಿದವರು ಇತರ ಮಾಹಿತಿಗಳ ಜತೆಯಲ್ಲಿ ಲಿಂಗ, ಧರ್ಮ, ಜನ್ಮಸ್ಥಳ, ವಾಸ ಇರುವ ಸ್ಥಳ ಮತ್ತು ಇತ್ತೀಚೆಗೆ ಭೇಟಿ ನೀಡಿದ ಸ್ಥಳಗಳ ಮಾಹಿತಿಯನ್ನು ಕದ್ದಿದ್ದಾರೆ’ ಎಂದು ಫೇಸ್‌ಬುಕ್‌ ಉಪಾಧ್ಯಕ್ಷ ಗುಯ್‌ ರೋಸೆನ್‌ ತಿಳಿಸಿದ್ದಾರೆ.

ಮಾಹಿತಿಗೆ ಕನ್ನ ಹಾಕಿರುವುದನ್ನು ಸೆ.25ರಂದು ಎಂಜಿನಿಯರ್‌ಗಳು ಪತ್ತೆ ಮಾಡಿದ್ದಾರೆ. 5ಕೋಟಿ ಬಳಕೆದಾರರ ಖಾತೆ ಮರುಹೊಂದಾಣಿಕೆ ಮಾಡಲಾಗಿದೆ. ಇದರಿಂದಾಗಿ ಬಳಕೆದಾರರು ಹೊಸದಾಗಿ ಪಾಸ್‌ವರ್ಡ್‌  ಉಪಯೋಗಿಸಬೇಕಾಗುತ್ತದೆ.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !