ಪತ್ನಿ ಆತ್ಮಹತ್ಯೆ: ಪತಿ, ಅತ್ತೆಗೆ 3 ವರ್ಷ ಸಜೆ

7

ಪತ್ನಿ ಆತ್ಮಹತ್ಯೆ: ಪತಿ, ಅತ್ತೆಗೆ 3 ವರ್ಷ ಸಜೆ

Published:
Updated:

ಚಾಮರಾಜನಗರ: ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದ ಪತಿ ಹಾಗೂ ಅತ್ತೆಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ. 

ಗುಂಡ್ಲುಪೇಟೆ ತಾಲ್ಲೂಕಿನ ಸೋಮಹಳ್ಳಿ ಗ್ರಾಮದ ಗೋಪಾಲಸ್ವಾಮಿ ಹಾಗೂ ಆತನ ತಾಯಿ ಚಿನ್ನಮ್ಮ ಶಿಕ್ಷೆಗೆ ಗುರಿಯಾದವರು. ಇಬ್ಬರು ಅಪರಾಧಿಗಳಿಗೆ ₹20 ಸಾವಿರ ದಂಡವನ್ನೂ ವಿಧಿಸಲಾಗಿದೆ.

ಘಟನೆ ವಿವರ: ಗೋಪಾಲಸ್ವಾಮಿಯು ತ್ರಿವೇಣಿ ಎಂಬಾಕೆಯನ್ನು ಮದುವೆಯಾಗಿದ್ದ. ಪತ್ನಿಗೆ ಅಸಭ್ಯ ಪದಗಳಿಂದ ಬೈದು, ಸದಾ ಜಗಳ ಮಾಡುತ್ತಿದ್ದ. ತ್ರಿವೇಣಿ ಒಂದು ಮಗುವನ್ನೂ ಹೆತ್ತಿದ್ದಳು. ಆದರೆ, ಆ ಮಗುವಿಗೆ ತಾನು ತಂದೆಯಲ್ಲ ಎಂದು ಹೇಳುತ್ತಿದ್ದ. ತ್ರಿವೇಣಿಯ ಶೀಲ ಶಂಕಿಸಿದ್ದ ಆತ ಮಾನಸಿಕ ಹಾಗೂ ದೈಹಿಕವಾಗಿ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.

ಇದರಿಂದ ಮನನೊಂದಿದ್ದ ಆಕೆ 2014ರ ಮಾರ್ಚ್‌ 29ರಂದು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಅತ್ಮಹತ್ಯೆಗೆ ಯತ್ನಿಸಿದ್ದಳು. ತೀವ್ರವಾಗಿ ಗಾಯಗೊಂಡಿದ್ದ ತ್ರಿವೇಣಿಯನ್ನು ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದೆ ಏಪ್ರಿಲ್‌ 2ರಂದು ಮೃತಪಟ್ಟಿದ್ದಳು.

ಈ ಸಂಬಂಧ ತೆರಕಣಾಂಬಿ ಪೊಲೀಸ್‌ ಠಾಣೆಯಲ್ಲಿ ಗೋಪಾಲಸ್ವಾಮಿ ಹಾಗೂ ಚಿನ್ನಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ಇಬ್ಬರೂ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಆರೋಪ ಸಾಬೀತಾಗಿರುವುದರಿಂದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ. ವಿನಯ್‌ ಅವರು ಜನವರಿ 7ರಂದು ಇಬ್ಬರಿಗೂ ಮೂರು ವರ್ಷಗಳ ಸಾದಾ ಸಜೆ ಮತ್ತು ₹20 ಸಾವಿರ ದಂಡ ವಿಧಿಸಿದ್ದಾರೆ.  

ಸರ್ಕಾರದ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎಂ.ಎಸ್‌.ಉಷಾ ಅವರು ವಾದ ಮಂಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !