ಆನಿಮೇಶನ್ ಕ್ಷೇತ್ರದಲ್ಲಿ ವಿಲ ಅವಕಾಶ

ಬುಧವಾರ, ಜೂಲೈ 17, 2019
°C

ಆನಿಮೇಶನ್ ಕ್ಷೇತ್ರದಲ್ಲಿ ವಿಲ ಅವಕಾಶ

Published:
Updated:

ಗುಲ್ಬರ್ಗ: ವಿಶ್ವ ಮಾರುಕಟ್ಟೆಯಲ್ಲಿ ಆನಿಮೇಶನ್ ಲೋಕಕ್ಕೆ ಭಾರಿ ಬೇಡಿಕೆ ಇರುವುದರಿಂದ ಅಂತಹದೊಂದು ತರಬೇತಿ ಕೇಂದ್ರವನ್ನು ನಗರದಲ್ಲಿ ಪ್ರಾರಂಭಿಸಿ 20 ತಿಂಗಳಲ್ಲಿಯೇ ಇಲ್ಲಿನ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಟ್ಟಿರುವ ಕೀರ್ತಿ ಜಿಂಗಲ್ ಕಾರ್ಟೂನ್ಜ್ ಆನಿಮೇಶನ್ ಕೇಂದ್ರಕ್ಕೆ ಸಲ್ಲುತ್ತದೆ ಎಂದು ಪಾಲಿಕೆ ಮಾಜಿ ಉಪಮೇಯರ್ ನಾಗವೇಣಿ ಕಮಕನೂರ ಹೇಳಿದರು.ನಗರದ ಜಿಂಗಲ್ ಕಾರ್ಟೂನ್ಜ್ ಆನಿಮೇಶನ್ ಕೇಂದ್ರದಲ್ಲಿ ಬುಧವಾರ ನಡೆದ ಪ್ಲೇಸ್‌ಮೆಂಟ್ ಆದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.ಆನಿಮೇಶನ್ ಕ್ಷೇತ್ರದಲ್ಲಿ ಇಂದು 3 ಲಕ್ಷಕ್ಕೂ ಹೆಚ್ಚು ಉದ್ಯೋಗವಕಾಶಗಳಿವೆ. ಈ ಕೊರತೆಯನ್ನು ನೀಗಿಸಬೇಕಾದರೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರದತ್ತ ಗಮನಹರಿಸಬೇಕಾದ ಅವಶ್ಯಕತೆ ಇದೆ ಎಂದು ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಹೇಳಿದರು.ಅದೇಷ್ಟೊ ದೊಡ್ಡ ಸಂಸ್ಥೆಗಳು ನಗರದಲ್ಲಿ ಶಾಖೆ ಪ್ರಾರಂಭಿಸಿ ಕೈ ಸುಟ್ಟುಕೊಂಡಿರುವ ಘಟನೆಗಳ ಮಧ್ಯೆಯೂ ಹಿಂದುಳಿದ ಹೈದರಾಬಾದ್ ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಜಿಂಗಲ್ ಕಾರ್ಟೂನ್ಜ್ ಆನಿಮೇಶನ್ ಕೇಂದ್ರ ಮಾಡಿರುವ ಸಾಧನೆ ಅಮೋಘವಾದುದು ಎಂದರು.ಗುಲ್ಬರ್ಗ ವಿಶ್ವವಿದ್ಯಾಲಯ ಸಿಂಡಿಕೆಟ್ ಮಾಜಿ ಸದಸ್ಯ ಉಮಾಕಾಂತ ನಿಗ್ಗುಡಗಿ, ಹಿರಿಯ ಕಲಾವಿದ ಮೊಹನ್ ಸಿತನೂರ್, ಜೈ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅರುಣಕುಮಾರ ಪಾಟೀಲ ಮಾತನಾಡಿದರು.

ಸಂಸ್ಥೆಯ ನಿರ್ದೇಶಕ ಜೆ.ಎಸ್.ಕಾಟನೂರ್ ಅಧ್ಯಕ್ಷತೆ ವಹಿಸಿದ್ದರು.ಆರ್.ಕೆ.ಪುರಮಕರ್ ಸ್ವಾಗತಿಸಿದರು.  ಸೌಮ್ಯ ನಿರೂಪಿಸಿದರು. ಎಚ್.ಆರ್.ರಾಜಾಪುರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry