ಕನ್ನಡ ಉದ್ಯೋಗ ಭಾಷೆಯಾಗಲಿ

ಸೋಮವಾರ, ಜೂಲೈ 22, 2019
27 °C

ಕನ್ನಡ ಉದ್ಯೋಗ ಭಾಷೆಯಾಗಲಿ

Published:
Updated:

ಗುಲ್ಬರ್ಗ(ಡಾ.ಎಂ.ಎಸ್. ಲಠ್ಠೆ ವೇದಿಕೆ): ಜಾತಿಯ ಮೂಲ ಬೇರು ಕಿತ್ತೆಸೆಯಲು ಉತ್ಕೃಷ್ಟ ತಳಹದಿಯನ್ನು ಒದಗಿಸಿಕೊಟ್ಟ ಕನ್ನಡ ಭಾಷಾ ಸಾಹಿತ್ಯ ಆಂಗ್ಲಭಾಷೆ ಅಂಬೆಗಾಲಿಡುವ ಹೊತ್ತಲ್ಲಿ ಪ್ರೌಢಾವಸ್ಥೆ ತಲುಪಿದ್ದ ಕನ್ನಡ ಭಾಷೆಗೆ ಅದ್ಭುತವಾದ ಹಿನ್ನೆಲೆ-ಪರಂಪರೆ ಇದೆ. ಇದನ್ನು ಉಳಿಸುವ ಕಾರ್ಯ ಕನ್ನಡಗಿರಿಂದ ಆಗಬೇಕಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ ಹೇಳಿದರು.ಇಲ್ಲಿನ ಕನ್ನಡ ಭವನದ ಬಾಪೂಗೌಡ ದರ್ಶನಾಪುರ ರಂಗಮಂದಿರದಲ್ಲಿ ಭಾನುವಾರ 12ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಕಾಯಕ-ದಾಸೋಹ ಪರಂಪರೆಯನ್ನು ಅನುಷ್ಠಾನಗೊಳಿಸಿದ ಪ್ರದೇಶವಾದ ಈ ಕಲ್ಯಾಣ ಕರ್ನಾಟಕ ಭಾಗದಲ್ಲಿ ದಾಸವರೇಣ್ಯರ ಸಾಹಿತ್ಯವೂ ಸೃಷ್ಟಿಯಾಗಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ ಎಂದರು.ಪರಸ್ಪರ ಹೃದಯ ಒಂದಾಗಿಸುವ ಅದಮ್ಯ ಶಕ್ತಿ ಸಾಹಿತ್ಯದಿಂದ ಮಾತ್ರ ಸಾಧ್ಯ. ಕನ್ನಡ ಕಟ್ಟುವ ಕೆಲಸಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ತಿಳಿಸಿದರು.ಮುಖ್ಯ ಅತಿಥಿಯಾಗಿದ್ದ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಜಯಪ್ರಕಾಶ ಪಾಟೀಲ ಮಾತನಾಡಿ, ಜಗತ್ತಿಗೆ ಸತ್ಯದ ದರ್ಶನ ಮಾಡಿಸಿದ ವಚನ, ದಾಸ ಸಾಹಿತ್ಯ, ವಿಜ್ಞಾನೇಶ್ವರರ ಮಿತಾಕ್ಷರ, ಶ್ರೀವಿಜಯನ ಕವಿರಾಜ ಮಾರ್ಗ ಇತ್ಯಾದಿಗಳ ಕುರಿತು ಅಧ್ಯಯನ ಮತ್ತು ಸಂಶೋಧನೆ ನಡೆಸಲು ಸರ್ಕಾರ ಅಂತರಾಷ್ಟ್ರೀಯ ಮಟ್ಟದ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಶಿಫಾರಸು ಮಾಡಿದರು.ನಿಕಟಪೂರ್ವ ಅಧ್ಯಕ್ಷ ಲಿಂಗಣ್ಣ ಸತ್ಯಂಪೇಟೆ ಅವರು ಸಮ್ಮೇಳನಾಧ್ಯಕ್ಷ ಚಂದ್ರಕಾಂತ ಕುಸನೂರ ಅವರಿಗೆ ಧ್ವಜ ಹಸ್ತಾಂತರ ಮಾಡಿ, ಕನ್ನಡದ ಬಗ್ಗೆ ಕೇವಲ ಮಾತನಾಡಿದರೆ ಸಾಲದು. ಅದು ‘ಉದ್ಯೋಗ ಭಾಷೆ’ ಆದಾಗ ಮಾತ್ರ ಕನ್ನಡ ಬದುಕುಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.ಶಾಸಕ ದೊಡ್ಡಪ್ಪಗೌಡ ಪಾಟೀಲ ಹೆಜ್ಜೆ ಗುರುತು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ,  ಶಾಸಕ ಶಶೀಲ ನಮೋಶಿ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ ಪ್ರಾಸ್ತಾವಿಕ ಮಾತನಾಡಿದರು.ಆರಂಭದಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ‘ಹಚ್ಚೇವು ಕನ್ನಡದ ದೀಪ’ ಎನ್ನುವ ಕವನಕ್ಕೆ ವರ್ಣಸಿಂಧು ಕಲಾ ತಂಡದ ಸದಸ್ಯರು ನೃತ್ಯಗೀತೆ ಪ್ರದರ್ಶಿಸಿದರು. ಪ್ರೇಮಚಂದ ಚವ್ಹಾಣ ಕಾರ್ಯಕ್ರಮ ನಿರೂಪಿಸಿದರು.ಅಮೃತಾ ಕಟಕೆ, ವಿಜಯಕುಮಾರ ಪರೂತೆ, ಶ್ರೀಶೈಲ ಘೂಳಿ, ಸೂರ್ಯಕಾಂತ ಪಾಟೀಲ, ಸಿದ್ಧಲಿಂಗಪ್ಪ ಆನೇಗುಂದಿ,ಸೂರ್ಯಕಾಂತ ನಾಕೇದಾರ, ಬಸವಂತರಾಯ ಮಾಲಿಪಾಟೀಲ ಹಾಗೂ  ಪದಾಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry