ಗುರುವಾರ , ಫೆಬ್ರವರಿ 25, 2021
24 °C

ಸಣ್ಣ ಭಿನ್ನಾಭಿಪ್ರಾಯ ಬಿರುಕಿಗೆ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಣ್ಣ ಭಿನ್ನಾಭಿಪ್ರಾಯ ಬಿರುಕಿಗೆ ಕಾರಣ

ಗುಲ್ಬರ್ಗ: ವಚನಕಾರರಿಗೆ, ತತ್ವಪದಕಾರರಿಗೆ ‘ಸಂಸಾರ’ ಎನ್ನುವುದು ಹೇಯವಾಗಿ ಕಂಡಿದೆ. ಅದೇ ಜಿಜ್ಞಾಸೆ ಇಂದಿಗೂ ಮುಂದುವರಿದಿದೆ ಎಂದು ಡಾ. ಮೀನಾಕ್ಷಿ ಬಾಳಿ ಅಭಿಪ್ರಾಯಪಟ್ಟರು.12ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಂಗವಾಗಿ ಗುಲ್ಬರ್ಗದ ಕನ್ನಡ ಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸಂಕಿರಣ ಗೋಷ್ಠಿ-4ರಲ್ಲಿ ಕೌಟುಂಬಿಕ ಸಮಸ್ಯೆ-ಸವಾಲುಗಳು ಎಂಬ ವಿಷಯ ಕುರಿತು ವಿಷಯ ಮಂಡಿಸಿ, ಆಧುನಿಕೋತ್ತರ ಜೀವನಶೈಲಿ, ಸಾಂಪ್ರದಾಯಿಕ ಮೌಲ್ಯದ ನಂಬಿಕೆ ಎಂಬ ವೈರುಧ್ಯಗಳಿಂದ ಕೂಡಿದ ಬದುಕಿನಲ್ಲಿ ಇಂದು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ.

 

ಸಣ್ಣ-ಪುಟ್ಟ ಸಮಸ್ಯೆಗಳೂ ನಮ್ಮನ್ನು ಹರಿದು ತಿನ್ನುತ್ತಿವೆ. ಯಾವು ಸಮಸ್ಯೆ ಆಗಬಾರದೋ ಅವು ಸಮಾಸ್ಯೆಯಾಗಿ ಕಾಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ತಿಳಿಸಿದರು.ಶೈಕ್ಷಣಿಕ ಸಮಸ್ಯೆ ಸವಾಲುಗಳು ಎಂಬ ವಿಷಯ ಕುರಿತು ಪ್ರಬಂಧ ಮಂಡಿಸಿದ ಪ್ರೊ. ಎಂ.ಬಿ. ಅಂಬಲಗಿ, ಇಂಗ್ಲಿಷ್‌ನ ಅತಿಯಾದ ವ್ಯಾಮೋಹದಿಂದಾಗಿ ಮತ್ತು ಶಿಕ್ಷಣದ ವ್ಯಾಪಾರೀಕರಣದಿಂದಾಗಿ ಅನೇಕ ಶೈಕ್ಷಣಿಕ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದ್ದು, ಸರ್ಕಾರದ ಸೂಕ್ತ ನಿರ್ವಹಣೆಯಿಂದ ಈ ಸಮಸ್ಯೆ ಬಗೆಹರಿಯಲಿದೆ ಎಂದು ಅನೇಕ ಸಲಹೆಗಳನ್ನು ನೀಡಿದರು.ಉದ್ಯೋಗದಲ್ಲಿ ಶೇ 10ರಿಂದ 15ರಷ್ಟು ಕನ್ನಡ ಮಾದ್ಯಮದವರಿಗೆ ಮೀಸಲಿಡಬೇಕು, ವೃತ್ತಿಪರ ಕೋರ್ಸ್‌ಗಳಲ್ಲಿ  ಕನ್ನಡ ಮಾದ್ಯಮ ಓದಿದವರಿಗೆ  ಹೆಚ್ಚಿನ ಆದ್ಯತೆ ನೀಡಬೇಕು, ಪ್ರೌಢ ಮತ್ತು ಪದವಿಪೂರ್ವ ಹಂತದಲ್ಲಿನ ಶಿಕ್ಷಣಕ್ಕೆ ಹೆಚ್ಚಿನ ಸೌಲಭ್ಯ ಒದಗಿಸಬೇಕೆಂದರು.ಡಾ. ಶಕುಂತಲಾ ದುರ್ಗಿ ಅಧ್ಯಕ್ಷತೆ ವಹಿಸಿದ್ದರು. ಸೂರ್ಯಕಾಂತ ಪಾಟೀಲ ನಿರೂಪಿಸಿದರು. ಶೋಭಾ ರಂಜೋಳಕರ ಸ್ವಾಗತಿಸಿದರು. ವಿಶ್ವನಾಥ ಭಕರೆ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.