ಸೂರಿಲ್ಲದೆ ಸೊರಗುತ್ತಿದೆ ಅಗ್ನಿಶಾಮಕ ಠಾಣೆ

ಶನಿವಾರ, ಜೂಲೈ 20, 2019
22 °C

ಸೂರಿಲ್ಲದೆ ಸೊರಗುತ್ತಿದೆ ಅಗ್ನಿಶಾಮಕ ಠಾಣೆ

Published:
Updated:

ಸೇಡಂ: ಇಲ್ಲಿಯ ಅಗ್ನಿ ಶಾಮಕ ಠಾಣೆ ಕಚೇರಿ ದುಃಸ್ಥಿತಿಯಲ್ಲಿದೆ. ವಾಹನಗಳ ನಿಲುಗಡೆಯ ಶೆಡ್‌ನ ಛಾವಣಿಯ ಶೀಟ್ ಹಾರಿ ಹೋಗಿವೆ. ಮಳೆ ಬಂದರೆ ಕಚೇರಿ ಕೊಠಡಿಗಳಲ್ಲಿ ನೀರೆ ನೀರು. ಮುರಿದ ಬಾಗಿಲು. ಆಸರೆ ಇಲ್ಲದೆ ಸಿಬ್ಬಂದಿಗಳ ಪರದಾಟ. ದಿನದ 24 ಗಂಟೆಗಳ ಕಾಲ ಸೇವೆ ಸಲ್ಲಿಸುವ ಸಿಬ್ಬಂದಿ ಮಳೆ, ಗಾಳಿ, ಬೆಂಕಿ ಎದುರಿಸುವ ಶಕ್ತಿ ಹೊಂದಿದ್ದರೂ ಸಹ ಭಯದ ನೆರಳಲ್ಲಿ ಜೀವನ ಸಾಗಿಸುತ್ತಿದ್ದಾರೆ.ಈ ದಿಸೆಯಲ್ಲಿ ಸರ್ಕಾರ 52 ಲಕ್ಷ ರೂ.ಗಳ ಅನುದಾನದಲ್ಲಿ ಕಳೆದ 3 ವರ್ಷಗಳಿಂದ ನೂತನ ಕಟ್ಟಡ ನಿರ್ಮಿಸಲು ಲೋಕೋಪಯೋಗಿ ಇಲಾಖೆಗೆ ಒಪ್ಪಿಸಿತು.  ಆದರೆ ಇಲಾಖೆಯ ದಿವ್ಯ ನಿರ್ಲಕ್ಷದಿಂದ ಕಳೆದ 6 ತಿಂಗಳುಗಳಿಂದ ಕಾಮಗಾರಿ ಒಂದು ಹಂತಕ್ಕೆ ನಿಂತಿದೆ. ಈಗಿರುವ ಕಟ್ಟಡದ ಗೋಡೆಗಳ ಪ್ಲಾಸ್ಟರ್ ಇಲ್ಲದೇ ನೀರಲ್ಲಿ ತಂಪಾಗಿ ಉರಳಿ ಬೀಸುವ ಹಂತದಲ್ಲಿದೆ. ಇಲಾಖೆಯ ಮೇಲಾಧಿಕಾರಿಗಳ ಪತ್ರಕ್ಕೂ ಮಾನ್ಯತೆ ನೀಡದ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ಮೇಲೆ ಕ್ರಮ ಇಲ್ಲವೇ ಒತ್ತಾಯಿಸುವ ಹಂತಕ್ಕೂ ಮುಂದಾಗುತ್ತಿಲ್ಲ.ತಾತ್ಕಾಲಿಕವಾಗಿ ನಿರ್ಮಿಸಿರುವ ಪ್ರಸಕ್ತದ ಶೆಡ್ ಗಾಳಿಗೆ ಹಾರಿ ಹೋಗಿರುವುದರಿಂದ ಬೆಲೆ ಬಾಳುವ ವಾಹನ ನಾಶವಾಗುವ ಸಾಧ್ಯತೆ ಹೆಚ್ಚಿದೆ. ಮೇಲಾಗಿ ಸೇಡಂ ಠಾಣೆಗೆ ಇನ್ನೊಂದು ವಾಹನ ಮಂಜೂರು ಆಗಿದ್ದರೂ ಸಹ ಸೂಕ್ತ ರಕ್ಷಣೆ ಇಲ್ಲದೇ ಕಳುಹಿಸುವಲ್ಲಿ ಹಿಂದೇಟು ಹಾಕಿದೆ. ಮಾರ್ಚ್ ತಿಂಗಳಲ್ಲಿ 40 ಅಗ್ನಿ ಕರೆಗಳು ಸಂಭವಿಸಿದ್ದು ಒಂದು ಜಲ ವಾಹನ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಹೀಗೆ ಹತ್ತು ಹಲವಾರು ಸಮಸ್ಯೆಗಳ ಮಧ್ಯೆ ಸಿಬ್ಬಂದಿ ತನ್ನ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ನೂತನ ಕಟ್ಟಡ ಈ ಕೂಡಲೇ ಪೂರ್ಣಗೊಳಿಸಿ ಅಗ್ನಿ ಶಾಮಕ ಠಾಣೆಗೆ ಹಸ್ತಾಂತರಿಸಿದಲ್ಲಿ ಇನ್ನೊಂದು ವಾಹನ ಬರಮಾಡಿಕೊಂಡು ಹೆಚ್ಚಿನ ಒತ್ತಡದಲ್ಲಿ ಉತ್ತಮ ಸೇವೆ ಸಲ್ಲಿಸಲು ಸಾಧ್ಯ ಎಂಬುದು ಅಧಿಕಾರಿ ಮತ್ತು ಸಿಬ್ಬಂದಿಆಶಯ. ಕಾದು ನೋಡೋಣ ಲೋಕೋಪಯೋಗಿ ಇಲಾಖೆ ಕಟ್ಟಡ ಕಾಮಗಾರಿ ಸಂಪೂರ್ಣಗೊಳಿಸುವಲ್ಲಿ ಆಸಕ್ತಿ ವಹಿಸುವುದೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry