ಚಿಂಚೋಳಿ: ಕೋಲಿ ಸಮಾಜದ ರ‌್ಯಾಲಿ

7

ಚಿಂಚೋಳಿ: ಕೋಲಿ ಸಮಾಜದ ರ‌್ಯಾಲಿ

Published:
Updated:
ಚಿಂಚೋಳಿ: ಕೋಲಿ ಸಮಾಜದ ರ‌್ಯಾಲಿ

ಚಿಂಚೋಳಿ: ತಾಲ್ಲೂಕಿನಲ್ಲಿ ಕೋಲಿ ಸಮಾಜದವರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಟೋಕರೆ ಕೋಲಿ (ಕಬ್ಬಲಿಗ) ಸಮಾಜದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ವಿಠಲ್ ಹೇರೂರು ನೇತೃತ್ವದಲ್ಲಿ ಕೋಲಿ ಸಮಾಜ ಬಾಂಧವರು ಬುಧವಾರ ಪ್ರತಿಭಟನಾ ರ‌್ಯಾಲಿ ನಡೆಸಿದರು.ಟೋಕರೆ ಕೋಲಿ (ಕಬ್ಬಲಿಗ) ಸಮಾಜದ ತಾಲ್ಲೂಕು ಘಟಕ ಹಮ್ಮಿಕೊಂಡ ರ‌್ಯಾಲಿಯಲ್ಲಿ ಮಾತನಾಡಿದ ರಾಜ್ಯ ಅಧ್ಯಕ್ಷ ವಿಠಲ್ ಹೇರೂರು , ರಾಜ್ಯ ಸರ್ಕಾರ ಹಾಗೂ ಎಸ್.ಟಿ. ಪ್ರಮಾಣ ಪತ್ರ ನೀಡದ ತಹಸೀಲ್ದಾರರ ಕ್ರಮವನ್ನು ಲೇವಡಿ ಮಾಡಿದರು.ಢೋರ್‌ಕೋಲಿ, ಟೋಕ್ರೆ ಕೋಲಿ, ಪರ್ಯಾಯ ಪದ ಜಾತಿಗಳಾದ ಕಬ್ಬಲಿಗ, ಕುಬೇರಾ, ಕೋಲಿ, ತಳವಾರ, ಅಂಬಿಗ, ಬಾರ್ಕಿ ಮುಂತಾವುಗಳು ಪರಿಶಿಷ್ಟ ಪಂಗಡಗಳಲ್ಲಿ ಸೇರ್ಪಡೆ ಮಾಡಲು ಕೇಂದ್ರಕ್ಕೆ ಶಿಪಾರಸು ಮಾಡಬೇಕು.  ಪ್ರವರ್ಗ-1ರ ಜನಾಂಗಕ್ಕೆ ಶೈಕ್ಷಣಿಕವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸಿಗುವ ಸೌಲಭ್ಯಗಳೇ ಇರುವುದರಿಂದ ಸದರಿ ಸೌಲಭ್ಯ ದೊರೆಯುವಂತೆ ಕ್ರಮಕೈಗೊಳ್ಳಬೇಕು, ಚಿಂಚೋಳಿ ತಾಲ್ಲೂಕಿನಲ್ಲಿ ವಿವಿಧ ಶಾಲಾ ಕಾಲೇಜುಗಳಲ್ಲಿ ಪ್ರವರ್ಗ-1ರ ವಿದ್ಯಾರ್ಥಿಗಳಿಂದ ಪೂರ್ಣ ಶುಲ್ಕ ವಸೂಲಿ ಮಾಡುತ್ತಿದ್ದು ಇದು ನಿಲ್ಲಬೇಕು. ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಸರ್ಕಾರವೇ ಆಚರಿಸಬೇಕು ಮತ್ತಿತರ ಬೇಡಿಕೆ ಮುಂದಿಡಲಾಯಿತು.ಡಾ.ಬಿ.ಪಿ ಬುಳ್ಳಾ, ಲಕ್ಷ್ಮಣ ಆವುಂಟಿ, ಶ್ರೀಧರ ಘಾಲಿ, ಧನಂಜಯ ಹೊಡೇಬೀರನಹಳ್ಳಿ, ಲಕ್ಷ್ಮೀಕಾಂತ ನಾಯಕೋಡಿ, ರಾಮಲಿಂಗ ನಾಟಿಕಾರ, ಮಲ್ಲಿಕಾರ್ಜುನ ಕೋಟಪಲ್ಲಿ, ಅಣ್ಣಾರಾವ್ ನಾಟಿಕಾರ್,ರವಿಕುಮಾರ ಹುಸೆಬಾಯಿ, ಮಹಾದೇವಪ್ಪ ಸುಣಗಾರ, ಕಾಶಿನಾಥ ನಾಟಿಕಾರ, ಡಾ. ಬಸವರಾಜ ಶಿರೋಳ್ಳಿ, ಸುರೇಶ ಹುಡಗಿ, ಮಲ್ಲೇಶಪ್ಪ ಬೋಯಿನ್, ಗೋಪಾಲರಾವ್ ಗಾರಂಪಳ್ಳಿ ಮತ್ತಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry