ಹೆದ್ದಾರಿ ಸೇತುವೆ ನಿರ್ಮಾಣಕ್ಕೆ ಒತ್ತಾಯ

7

ಹೆದ್ದಾರಿ ಸೇತುವೆ ನಿರ್ಮಾಣಕ್ಕೆ ಒತ್ತಾಯ

Published:
Updated:

ಆಳಂದ:  ವಾಗ್ದರಿ ಮತ್ತು ರಿಬ್ಬನ್‌ಪಲ್ಲಿ ಹೆದ್ದಾರಿಗೆ ಬರುವ ಶಕಾಪೂರ ಹಾಗೂ ಮಳಖೇಡ ಸೇತುವೆ ತೀರಾ ಹಳೆಯದಾಗಿವೆ. ಈಗಾಗಲೇ ಕೈಗೆತ್ತಿಕೊಂಡ ಈ ಹೆದ್ದಾರಿ ಕಾಮಗಾರಿಯ ಜೊತೆಗೆ ಈ ಎರಡೂ ಸೇತುವೆಗಳು ನಿರ್ಮಸಬೇಕು ಎಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ ಬಿ.ಆರ್. ಪಾಟೀಲ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.



ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸಿರುವ ಅವರು, ವಾಗ್ದರಿ-ರಿಬ್ಬನ್‌ಪಲ್ಲಿ ಜಿಲ್ಲೆಯ ಮಹತ್ವದ ಹೆದ್ದಾರಿಯಾಗಿದೆ. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಈ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಒಟ್ಟು 241 ಕಿ.ಮೀ. ಉದ್ದದ ಹೆದ್ದಾರಿ ನಿರ್ಮಾಣಕ್ಕೆ 224ಕೋಟಿ ವೆಚ್ಚದಲ್ಲಿ ಆಂಧ್ರ-ಮಹಾರಾಷ್ಟ್ರದ ಸಂಪರ್ಕ ಜೋಡಿಸುವ ಅತ್ಯಂತ ಮಹತ್ವದ ರಸ್ತೆ ಖಾಯಂ ಆಗಿ ಬಾಳುವಂತೆ ಆಗಬೇಕಾದರೆ ಶಕಾಪುರ ಹಾಗೂ ಮಳಖೇಡ ಸೇತುವೆಗಳು ಸಹ ಹೊಸದಾಗಿ ನಿರ್ಮಿಸಬೇಕು. ಈ ಸೇತುವೆ ರಸ್ತೆ ಕಾಮಗಾರಿ ಯೋಜನೆಗೆ ಸೇರಿಲ್ಲ ಎಂದು ವಿವರಿಸಿದ್ದಾರೆ.



ಎರಡೂ ಸೇತುವೆಗಳ ಅರ್ಧ ಶತಕಗಳಿಂದಲೂ ನೆನಗುದ್ದಿಗೆ ಬಿದ್ದಿವೆ. ರಸ್ತೆ ಪುನರ್‌ನಿರ್ಮಾಣದ ಸಂದರ್ಭದಲ್ಲೇ ಹೊಸದಾಗಬೇಕು. ಮಳಖೇಡ ಸೇತುವೆ ಕಾಗಿಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಶಕಾಪೂರ ಸೇತುವೆ ಅಮರ್ಜಾ ನದಿಗೆ ಅಡ್ಡಲಾಗಿ ಕಟ್ಟಲಾದ ಹಳೆಯ ಸೇತುವೆಗಳು ಈ ಯೋಜನೆಗೆ ಸೇರಿಲ್ಲ. ಬರಿ ದೊಡ್ಡ ಪ್ರಮಾಣದ ದುರಸ್ತಿ ಕಾರ್ಯ ಇಟ್ಟುಕೊಳ್ಳಲಾಗಿದೆ. ಆದರೆ ಹೊಸ ರಸ್ತೆಗೆ ಹಳೆ ಸೇತುವೆಗಳ ಇಟ್ಟುಕೊಂಡರೆ ಕೆಲವೇ ವರ್ಷಗಳಲ್ಲಿ ಅದರ ಶಕ್ತಿ ಕಡಿಮೆಯಾಗಿ ಕುಸಿದು ಬಿದ್ದು ರಸ್ತೆ ಸಂಪರ್ಕ ಕಡಿದು ಹೋಗುವ ಸಾಧ್ಯತೆ ಇರುತ್ತದೆ ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ.



 ಈ ಕುರಿತು ಗಂಭೀರವಾಗಿ ಚಿಂತಿಸಿ ಬರುವ 2011-12ರ ಬಜೇಟ್‌ನಲ್ಲಿ ಈ ಎರಡೂ ಸೇತುವೆಗಳಿಗೆ ಹೊಸದಾಗಿ ಹೆಚ್ಚುವರಿ ಅನುದಾನ ಒದಗಿಸಿ, ಬೇಕಾದರೆ ಕಾಮಗಾರಿ ಇದೇ ಗುತ್ತಿಗೆದಾರರಿಗೆ ಕೊಡಬಹುದು ಅಥವಾ ಬೇರೊಬ್ಬರಿಗೆ ವಹಿಸಬಹುದಾಗಿದೆ. ಇದರಿಂದ ಭವಿಷ್ಯದಲ್ಲಿ ಈ ಐತಿಹಾಸಿಕ ಕಾರ್ಯ ಶಾಶ್ವತವಾಗಿ ಉಪಯೋಗಕ್ಕೆ ಬರುತ್ತದೆ ಎಂದು ಪಾಟೀಲ ಸಲಹೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry