ರೋಲರ್ ಇಲ್ಲದೇ ರಸ್ತೆ ನಿರ್ಮಾಣ: ಕಳಪೆ ಕಾಮಗಾರಿಗೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ?

7

ರೋಲರ್ ಇಲ್ಲದೇ ರಸ್ತೆ ನಿರ್ಮಾಣ: ಕಳಪೆ ಕಾಮಗಾರಿಗೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ?

Published:
Updated:
ರೋಲರ್ ಇಲ್ಲದೇ ರಸ್ತೆ ನಿರ್ಮಾಣ: ಕಳಪೆ ಕಾಮಗಾರಿಗೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ?

ಚಿಂಚೋಳಿ: ಭಾಲ್ಕಿ ಚಿಂಚೋಳಿ ರಾಜ್ಯ ಹೆದ್ದಾರಿ ಹಾಗೂ ಫಿರೋಜಾಬಾದ್ ಕಮಲಾಪೂರ ರಾಜ್ಯ ಹೆದ್ದಾರಿಯ ಕೂಡು ರಸ್ತೆಯಾದ ತಾಲ್ಲೂಕಿನ ರಾಣಾಪೂರ ಕ್ರಾಸ್‌ನಿಂದ ರಾಣಾ ಪೂರ ಗ್ರಾಮದವರೆಗೆ 2ಕೀ.ಮೀ ರಸ್ತೆ ಕಾಮಗಾರಿ ಆಮೆವೇಗದಲ್ಲಿ ನಡೆ ಯುತ್ತಿದ್ದು, ಎಂಜಿನಿಯರ್ ನಿದ್ದೆ ಮಾಡುತ್ತಿರುವಂತೆ ಕಾಣುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.ಲೋಕೋಪಯೋಗಿ ಇಲಾಖೆ ಈ ರಸ್ತೆ 50:54 ಇತರ ರಸ್ತೆ ನಿರ್ಮಾಣ ಯೋಜನೆ ಅಡಿಯಲ್ಲಿ ಅಂದಾಜು 40 ಲಕ್ಷ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳ ಲಾಗಿದ್ದು, ಕಾಮಗಾರಿಯ ನಿರ್ಮಾ ಣದ ಹೊಣೆಯನ್ನು ಹೊತ್ತಿರುವ ಗುತ್ತಿಗೆದಾರರ ನಿರ್ಲಕ್ಷತನದಿಂದಾಗಿ ಕಾಮಗಾರಿ ಯಾವುದೇ ತಾಂತ್ರಿಕತೆ ಆಧಾರದಲ್ಲಿ ನಡೆಯುತ್ತಿಲ್ಲ. ಬದಲಾಗಿ ಒತ್ತಡಕ್ಕೆ ಮಣಿದು ಎಂಜಿನಿಯರ್‌ಗಳು ಕಾಮಗಾರಿಯ ಮೇಲ್ವಿಚಾರಣೆ ನಡೆಸುತ್ತಿಲ್ಲ ಎನ್ನಲಾಗಿದೆ.ಇಡಿ ರಸ್ತೆ ತುಂಬಾ ಗುಂಡಿ ನಿರ್ಮಾಣವಾಗಿದ್ದರಿಂದ ಹರಕು ಕೌದಿಯಂತಿದ್ದ ಟಾರ್ ರಸ್ತೆ ಅಗೆದು ಸಮದಟ್ಟು ಮಾಡಿ ಗುತ್ತಿಗೆದಾರ ಮಣ್ಣು ಹಾಕಿದ್ದರು. ಇದರಿಂದ ಬೇಸಿಗೆಯಲ್ಲಿ ಸಂಚಾರಕ್ಕೆ ತೊಂದರೆ ಯಾಗಿಲ್ಲ. ರಸ್ತೆಗೆ ಹಾಕಿದ ಮಣ್ಣು ಮಳೆ ನೀರು ನುಂಗುತ್ತಿದ್ದಂತೆ ಕೆಸರು ಗದ್ದೆ ಅಥವಾ ಕಂಬಳದಂತಾಗಿದ್ದು, ಪ್ರಯಾಣಿಕರು ಸಂಕಷ್ಟಕ್ಕೆ ತುತ್ತಾಗಿದ್ದಾರೆ.ಇದರಿಂದ ಎಚ್ಚೆತ್ತ ಲೋಕೋಪ ಯೋಗಿ ಇಲಾಖೆ ರಸ್ತೆಯ ಮೇಲೆ ಹಾಕಿದ ಮಣ್ಣಿನ ಮೇಲೆ ಈಗ ಮುರು ಮ್ ಹಾಕುತ್ತಿದ್ದು, ಕಾಮಗಾರಿ ನಡೆ ಯುತ್ತಿರುವ ರಸ್ತೆಯ ಉದ್ದಕ್ಕೂ ಟಿಪ್ಪ ರ್ ಹಾಗೂ ಜೆಸಿಬಿ ಯಂತ್ರ ಹೊರತು ಪಡಿಸಿದರೆ, ರೋಡ್ ರೋಲರ್ ಕಾಣಿಸಲೇ ಇಲ್ಲ.ಇದು ಸ್ಥಳೀಯರನ್ನು ಕೆರಳಿಸಿದ್ದು, ಬೀದಿಗಿಳಿದು ಹೋರಾಟ ಮಾಡಿದ್ದ ರಿಂದ ಮುರುಮ್ ಹಾಕುತ್ತಿದ್ದಾರೆ ಆದರೆ ರೋಲರ್ ಓಡಿಸದ ಕಾರಣ ಬೈಕ್‌ಗಳ ಸಂಚಾರ ಹೈರಾಣ ಎನ್ನು ವಂತಾದರೆ, ಜೀಪ್, ಟಂಟಂ ಸಂಚಾ ರಕ್ಕೆ ಚಾಲಕರು ಹಿಂಸೆ ಅನುಭವಿ ಸುತ್ತಿದ್ದಾರೆ.ಎಗ್ಗಿಲ್ಲದೇ ಸಾಗಿದ ಕಳಪೆ ಕಾಮಗಾರಿಗೆ ಮೇಲಧಿಕಾರಿಗಳು ಕಡಿವಾಣ ಹಾಕುತ್ತಿಲ್ಲ. ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್, ಸುಪರಿಟೆಂಡಿಂಗ್ ಎಂಜಿನಿಯರ್‌ಗಳು ಚಿಂಚೋಳಿಯ ಲೋಕೋಪಯೋಗಿ ಇಲಾಖೆಯ ಉಪ ವಿಭಾಗ ಮರೆತಿದ್ದಾರೆ ಎಂಬ ಆರೋಪ ದಟ್ಟವಾಗಿ ಕೇಳಿ ಬಂದಿದೆ.

 

ಕಾಮಗಾ ರಿಯ ಅಂದಾಜು ವೆಚ್ಚ, ಯೋಜನೆ ಮತ್ತಿತರ ಮಾಹಿತಿ ನೀಡು ವ ಒಂದೇ ಒಂದು ನಾಮ ಫಲಕ ಯೋಜನಾ ಪ್ರದೇಶದಲ್ಲಿ ಕಾಣದಿ ರುವುದು ಅನುಮಾನಗಳಿಗೆ ಕಾಮಗಾರಿ ತ್ವರಿತ ವಾಗಿ ಪೂರ್ಣಗೊಳಿಸಿ ಜನತೆಗೆ ನೆರವಾ ಗುವಂತೆ ಚಂದನಕೇರಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶರಣ ಗೌಡ ಪಾಟೀಲ್ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry