ಶುಕ್ರವಾರ, ಜನವರಿ 21, 2022
30 °C

ದಸರೆಗೆ ನಾಲ್ಕು ಆನೆಗಳ ಆಯ್ಕೆ, ಹೋಗುವುದು ಯಾವಾಗ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಬಂಡೀಪುರ ಮತ್ತು ಬಿಳಿಗಿರಿರಂಗನಾಥಸ್ವಾಮಿ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶಗಳ ಶಿಬಿರಗಳಲ್ಲಿರುವ ನಾಲ್ಕು ಆನೆಗಳನ್ನು ಮೈಸೂರು ದಸರೆಯಲ್ಲಿ ಪಾಲ್ಗೊಳ್ಳುವುದಕ್ಕೆ ಆಯ್ಕೆ ಮಾಡಲಾಗಿದೆ. 

ವಿಶ್ವವಿಖ್ಯಾತ ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆ ಗುರುವಾರವೇ ಮೈಸೂರು ತಲುಪಿದೆ. ಆದರೆ ಜಿಲ್ಲೆಯಲ್ಲಿರುವ ಆನೆಗಳನ್ನು ಯಾವಾಗ ಕರೆದುಕೊಂಡು ಹೋಗಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳಲ್ಲೂ ಮಾಹಿತಿ ಇಲ್ಲ. 

ಬಂಡೀಪುರದ ಶಿಬಿರದಲ್ಲಿರುವ ಜಯಪ್ರಕಾಶ್‌, ರೋಹಿತ್‌ ಮತ್ತು ಲಕ್ಷ್ಮಿ ಹಾಗೂ ಬಿಆರ್‌ಟಿ ವ್ಯಾಪ್ತಿಯ ಕೆ.ಗುಡಿಯ ಶಿಬಿರದಲ್ಲಿರುವ ದುರ್ಗಾಪರಮೇಶ್ವರಿ ಆನೆಗಳನ್ನು ಮೈಸೂರಿನ ಅಧಿಕಾರಿಗಳ ತಂಡ ಬಂದು ತಪಾಸಣೆ ನಡೆಸಿ ದಸರಾದಲ್ಲಿ ಪಾಲ್ಗೊಳ್ಳಲು ಆಯ್ಕೆ ಮಾಡಿದ್ದಾರೆ. 

‘ನಮ್ಮಲ್ಲಿಂದ ದುರ್ಗಾಪರಮೇಶ್ವರಿ ಆನೆಯನ್ನು ಆಯ್ಕೆ ಮಾಡಿದ್ದಾರೆ. ಕಳುಹಿಸಿಕೊಡಲು ಸಿದ್ಧತೆ ನಡೆಸಿದ್ದೇವೆ. ಕರೆದುಕೊಂಡು ಹೋಗಲು ಯಾವಾಗ ಬರುತ್ತಾರೆ ಎಂಬ ಮಾಹಿತಿ ಇಲ್ಲ’ ಎಂದು ಬಿಆರ್‌ಟಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ಶಂಕರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಮೂರು ಆನೆಗಳನ್ನು ಆಯ್ಕೆ ಮಾಡಿರುವುದು ನಿಜ. ಆದರೆ, ಕರೆದುಕೊಂಡು ಹೋಗುವ ಬಗ್ಗೆ ಇದುವರೆಗೆ  ಯಾವುದೇ ಮಾಹಿತಿ ಬಂದಿಲ್ಲ. ಬೇರೆ ಕಡೆಗಳಿಂದ ಮೈಸೂರಿಗೆ ಈಗಾಗಲೇ ಆನೆಗಳು ಬಂದಿವೆ. ಈ ವಿಚಾರದಲ್ಲಿ ಇನ್ನೂ ಗೊಂದಲವಿದೆ’ ಎಂದು ಬಂಡೀಪುರದ ಅರಣ್ಯ ಅಧಿಕಾರಿಗಳು ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು