ಮಂಗಳವಾರ, ಮೇ 24, 2022
30 °C

ಸಂವಾದದಿಂದ ಬೌದ್ಧಿಕ ಬೆಳವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸಂವಾದ ಕಾರ್ಯಕ್ರಮ ಗಳಿಂದ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟದ ಜತೆಗೆ ಕಲಿಯುವ ಆಸಕ್ತಿ ಹೆಚ್ಚಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ತಿಳಿಸಿದರು.ನಗರದ ಫರಾನ್ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರ ಜ್ಞಾನ ದಾರ್ಶನಿಕ ಸಮೂಹ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ವಿಜ್ಞಾನ ಜಾಗೃತಿ ಸಹಯೋಗದಲ್ಲಿ ಆಯೋಜಿ ಸಲಾದ ಎರಡು ದಿನಗಳ ವಿದ್ಯಾರ್ಥಿ- ವಿಜ್ಞಾನಿ ನೇರ ಸಂವಾದ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.ಮೂಲ ವಿಜ್ಞಾನವನ್ನು ಸರಿಯಾಗಿ ಮಾರ್ಗದರ್ಶನ ಮಾಡದಿದ್ದರೆ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯುತ್ತಾರೆ. ವೃತ್ತಿಪರ ಕೋರ್ಸ್‌ಗಳ ಹಾವಳಿಯಿಂದ ಮೂಲ ವಿಜ್ಞಾನವನ್ನು ಕಡೆಗಣಿಸುತ್ತಿದ್ದೇವೆ ಎಂದರು. ಸರ್ಕಾರದಿಂದ ಏನೇ ಸಹಾಯ ಬೇಕಾದರೂ ಮುಖ್ಯಮಂತ್ರಿ ಜತೆ ಸಮಾಲೋಚಿಸಿ ಈಡೇರಿಸುವ ಭರವಸೆ ನೀಡಿದರು.ಸಾರ್ವಜನಿಕ ಇಲಾಖೆ ಸಹನಿರ್ದೇಶಕ ಆಯುಕ್ತ ಎಸ್.ಎಚ್.ಬಟ್ಟೂರ, ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ವಿಜ್ಞಾನ ಬೋಧನೆಯಾಗುತ್ತಿಲ್ಲ. ಪ್ರೌಢಶಾಲೆ ಶಿಕ್ಷಕರು, ಉಪನ್ಯಾಸಕರು ತಿಂಗಳಿಗೆ ಒಮ್ಮೆಯಾದರೂ ಪ್ರಾಥಮಿಕ ಶಾಲಾ ಮಕ್ಕಳಿಗೆ ವಿಜ್ಞಾನ ಪಾಠ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಿ  ಎಂದು ಸಲಹೆ ನೀಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಷತ್‌ನ ಖಜಾಂಚಿ ಗಿರೀಶ ಕಡ್ಲೇವಾಡ, ವಿಜ್ಞಾನವನ್ನು ಸರಳೀಕರಣಗೊಳಿಸಿ, ಮೂಲ ವಿಜ್ಞಾನವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋ ಜಿಸಲಾಗಿದೆ. ಅಲ್ಲದೇ ವಿದ್ಯಾರ್ಥಿ ಗಳಲ್ಲಿರುವ ವಿಜ್ಞಾನ ಬಗೆಗಿನ ಕಠಿಣ ನಿಲುವನ್ನು ಸಡಿಲಗೊಳಿಸುವ ಪ್ರಯತ್ನ ಇದಾಗಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಹಮೀದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ವಿಜಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಬಾಲ ಕೃಷ್ಣ ಅಡಿಗ, ಖಜಾಂಚಿ ಮಹ್ಮದ್ ರಫಿಕ್, ಕಾರ್ಯದರ್ಶಿ ಅಬ್ದುಲ್ ವಹೀದ್, ಪ್ರಾಚಾರ್ಯೆ ಸೈಯಿದಾ ಮಮೂದಿ ಹಾಜರಿದ್ದರು. ಪರಿಷತ್‌ನ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀಶೈಲ ಘೂಳಿ ಸ್ವಾಗತಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.