ಗುರುವಾರ , ಮೇ 19, 2022
21 °C

ವಿಶ್ವ ಬೆರಗಾಗುವ ವಿಜ್ಞಾನಿಗಳಾಗಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ನೀವು ಭವಿಷ್ಯದಲ್ಲಿ ವಿಶ್ವ ಬೆರಗಾಗು ವಂಥ ಶ್ರೇಷ್ಠ ವಿಜ್ಞಾನಿಗಳೇಕೆ ಆಗಬಾರದು ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಪ್ರಧಾನ ಗ್ರಂಥಪಾಲಕ ಡಾ.ಆರ್. ಬಿ.ಗದ್ದಗಿಮಠ ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು.ನಗರದ ದೊಡ್ಡಪ್ಪ ಅಪ್ಪ ಸ್ವತಂತ್ರ ವಸತಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಸೈನ್ಸ್ ವ್ಯಾಲಿಡಿಕ್ಟರಿ ವಾರ್ಷಿಕ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.ಪಿಯುಸಿ ಮುಗಿದ ನಂತರ ಎಲ್ಲರಂತೆ ಮೆಡಿಕಲ್, ಎಂಜಿನಿಯರಿಂಗ್ ಕಡೆ ಯೋಚಿಸುವುದನ್ನು ಬಿಟ್ಟು ಸ್ವಲ್ಪ ಭಿನ್ನವಾಗಿ ಆಲೋಚಿಸಿ. ವಿದ್ಯಾರ್ಥಿಗಳಿಗೆ ಉನ್ನತ ಗುರಿ ಹೊಂದುವ ಮಹತ್ವಾಕಾಂಕ್ಷೆ ಇರಬೇಕು ಜಗತ್ತು ಕಂಡ ಮಹಾನ್ ವಿಜ್ಞಾನಿಗಳಂತಾಗಲು ನೀವೂ ಕನಸು ಕಾಣಿರಿ ಎಂದು ಸಲಹೆ ನೀಡಿದರುವಿವಿ ಪ್ರಾಧ್ಯಾಪಕ ಅಂಬಿಕಾ ಪ್ರಸಾದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಂತ್ರಜ್ಞಾನ ಬೆಳವಣಿಗೆಯಿಂದ ಅಧ್ಯಯನಕ್ಕೆ ಹಲವು ಅನುಕೂಲಗಳಿವೆ. ಅವುಗಳನ್ನು ಸೂಕ್ತ ರೀತಿಯಲ್ಲಿ ಬಳಸಿ, ದೇಶವನ್ನು ಮೊದಲ ಸಾಲಿನಲ್ಲಿ ನಿಲ್ಲಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಕಿವಿಮಾತು ಹೇಳಿದರು.ವಾಷಿಕೋತ್ಸವ ಅಂಗವಾಗಿ ಹಮ್ಮಿಕೊಂಡ ಹಲವು ಕ್ರೀಡೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿ ಸಂಜಯ ಅವರಿಗೆ ವರ್ಷದ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ನೀಡಲಾಯಿತು. ಪ್ರಭಾರ ಪ್ರಾಚಾರ್ಯ ವಿನೋದ ಎಲ್.ಪತಂಗೆ, ಆನಂದ ಸಿದ್ದಾಮಣಿ, ಭಾಗ್ಯವಂತಿ ಹಾಜರಿದ್ದರು. ಸಂತೋಷ ಬೊರಟಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.