ಮುಂಗಾರು ಬೆಳೆಗೆ ಮಳೆ ಟಾನಿಕ್

7

ಮುಂಗಾರು ಬೆಳೆಗೆ ಮಳೆ ಟಾನಿಕ್

Published:
Updated:
ಮುಂಗಾರು ಬೆಳೆಗೆ ಮಳೆ ಟಾನಿಕ್

ಅಫಜಲಪುರ: ಪ್ರಸಕ್ತ ವರ್ಷ ಅಫಜಲಪುರ ತಾಲ್ಲೂಕಿನಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಸುರಿಯದ ಕಾರಣ ರೈತರು ಒಂದು ತಿಂಗಳು ತಡವಾಗಿ ಬಿತ್ತನೆ ಮಾಡಿದ್ದು, ನಂತರ ಸಹ ಮಳೆ ಇಲ್ಲದೆ ಬೆಳೆಗಳು ಬಾಡುವ ಹಂತಕ್ಕೆ ತಲುಪಿದ್ದವು. ಇನ್ನೇನು ಮತ್ತೆ ಬರಗಾಲ ಬಿದ್ದೀತು ಎಂಬುವಷ್ಟರಲ್ಲೇ 15 ದಿನಗಳ ನಂತರ ಮಳೆ ಬೀಳುತ್ತಿರುವುದರಿಂದ ಬೆಳೆ ಚೇತರಿಸಿಕೊಳ್ಳುತ್ತಿವೆ.ಮಳೆಯಿಂದ ಚೇತರಿಸಿಕೊಂಡ ಬೆಳೆಗಳು ಸದ್ಯ ಚೆನ್ನಾಗಿವೆ. ಸೂರ್ಯಕಾಂತಿ ಬೆಳೆ ಹೆಚ್ಚು ಕಡಿಮೆ ಕಟಾವಿಗೆ ಬರಬಹುದಾಗಿದೆ. ಆದರೆ ತೊಗರಿ ಆರು ತಿಂಗಳ ಬೆಳೆಯಾಗಿದ್ದರಿಂದ ಇನ್ನೂ ಮೂರು ನಾಲ್ಕು ತಿಂಗಳು ಕಾಯಬೇಕಾಗುತ್ತದೆ.

 

ಈಗ ತುಂತುರು ಮಳೆಯಾಗುತ್ತಿದ್ದು ನೀರು ಹರಿಯದಿದ್ದರೂ ಭೂಮಿ ತೇವಾಂಶ ಮಾತ್ರ ಸಾಕಷ್ಟು ಆಗಿದೆ. ಹೀಗಾಗಿ ಬೆಳೆಗಳಿಗೆ ತಿಂಗಳವರೆಗೆ ಚಿಂತೆಯಿಲ್ಲ ಎಂದು ರೈತರು ಹೇಳುತ್ತಾರೆ.ಪ್ರಸಕ್ತ ವರ್ಷದ ಜೂನ್ ತಿಂಗಳಲ್ಲಿ ತಾಲ್ಲೂಕಿನಲ್ಲಿ 160.4 ಮಿ.ಮೀ. ಮಳೆಯಾಗಬೇಕಾಗಿತ್ತು , ಆದರೆ 125.8 ಮಿ.ಮೀ. ಮಳೆಯಾಗಿದೆ. 34.6 ಮಿ.ಮೀ ಮಳೆ ಕೊರತೆಯಾಗಿದೆ.ಕೃಷಿ ಇಲಾಖೆ ಪ್ರಕಾರ, ಜೂನ್ ತಿಂಗಳಲ್ಲಿ ತೊಗರಿ ಬಿತ್ತನೆಯಾದರೆ ಇಳುವರಿ ಹೆಚ್ಚಾಗುತ್ತದೆ ಮತ್ತು ಕೀಟಗಳ ಬಾಧೆ ಕಡಿಮೆಯಾಗುತ್ತದೆ. ಪ್ರಸಕ್ತ ವರ್ಷ ಮಳೆಗಾಲ ಆರಂಭವಾಗಿ ಮೂರು ತಿಂಗಳು ಕಳೆದರೂ ಈವರೆಗೂ ಯಾವುದೇ ಹಳ್ಳ, ಕೆರೆ ಮತ್ತು ಹೊಲಗದ್ದೆಗಳಲ್ಲಿ ನೀರು ಸಂಗ್ರಹವಾಗಿಲ್ಲ.ಅಫಜಲಪುರದ ವಾರ್ಷಿಕ ಸರಾಸರಿ ಮಳೆ 667.2 ಮಿ.ಮೀ. ಆಗಿದ್ದು ಕಳೆದ ವರ್ಷ ಶೇ. 10ರಷ್ಟು ಮಳೆ ಸರಾಸರಿಗಿಂತ ಹೆಚ್ಚಾಗಿತ್ತು ಎಂದು ಕೃಷಿ ಇಲಾಖೆಯವರು ಹೇಳುತ್ತಾರೆ.ಬಿತ್ತನೆ ಕ್ಷೇತ್ರ: ಮುಂಗಾರಿಯಲ್ಲಿ ಒಟ್ಟು 75,275 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು, ಆ ಪೈಕಿ ಶೇ. 80ರಷ್ಟು ಬಿತ್ತನೆ ಮಾಡಲಾಗಿದೆ. ರೈತರು ಕಳೆದ ವರ್ಷಕ್ಕಿಂತಲೂ ತೊಗರಿ ಮತ್ತು ಸೂರ್ಯಕಾಂತಿ ಕಡಿಮೆ ಕ್ಷೇತ್ರದಲ್ಲಿ ಬಿತ್ತನೆ ಮಾಡಿದ್ದಾರೆ. ಕಾರಣ ಮಳೆ ವಿಳಂಬ ಮತ್ತು ಮಾರುಕಟ್ಟೆಯಲ್ಲಿ ಕುಸಿಯುತ್ತಿರುವ ತೊಗರಿ ಬೆಲೆ ಎಂದು ಹೇಳಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry