ರೂ. 5 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು

7

ರೂ. 5 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು

Published:
Updated:

ಅಫಜಲಪುರ: ವಿಶ್ವ ಬ್ಯಾಂಕ್‌ನ ನೆರವಿನಲ್ಲಿ ಹೆಚ್ಚುವರಿ ಅನುದಾನದ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಗೌರ(ಬಿ) ಮತ್ತು ಬಳೂರ್ಗಿ ಗ್ರಾಪಂಗಳಿಗೆ ರೂ.5 ಕೋಟಿ  ವೆಚ್ಚದಲ್ಲಿ ಭೀಮಾ ನದಿಯಿಂದ ಶಾಶ್ವತ ಶುದ್ಧ ಕುಡಿಯುವ ನೀರು ಯೋಜನೆ ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಕೆಲಸ ಆರಂಭವಾಗಲಿದೆ ಎಂದು ನಿಕೇತನ ಕನಸ್ಟ್ರಕ್ಷನ್ ಅಭಿವೃದ್ಧಿ ತಜ್ಞ ಸುಬ್ರಮಣ್ಯಂ ತಿಳಿಸಿದರು.ತಾಲ್ಲೂಕಿನ ಅಳ್ಳಗಿ(ಕೆ) ಗ್ರಾಮದಲ್ಲಿ ನಿಕೇತನ ಕನಸ್ಟ್ರಕ್ಷನ್ ಹಾಗೂ ಜಿಲ್ಲಾ ಪಂಚಾಯತಿ ನೆರವು ಘಟಕ ಯೋಜನೆ ಅಡಿಯಲ್ಲಿ ವಿಶ್ವಬ್ಯಾಂಕ್ ನೆರವಿನಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಕುರಿತು ನೀರು ಬಳಿಕೆ ಗ್ರಾಮ ಘಟಕ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಯೋಜನೆ ಅಡಿಯಲ್ಲಿ ಬಳೂರ್ಗಿ, ನಂದರ್ಗಿ, ಭಂಕಲಗಾ, ಗೌರ(ಬಿ), ಅಳ್ಳಗಿ(ಕೆ), ಶಿರವಾಳ, ಬಳೂಂಡಗಿ 7 ಗ್ರಾಮಗಳು ಆಯ್ಕೆಯಾಗಿವೆ. ಇದರ ವೆಚ್ಚ ತಾತ್ಕಲಿಕವಾಗಿ 5 ಕೋಟಿ ರೂ. ಮಂಜೂರು ಮಾಡಲಾಗಿದ್ದು, ಆದರೂ ಕ್ರಿಯಾ ಯೋಜನೆಗೆ ತಕ್ಕಂತೆ ಯೋಜನಾ ವೆಚ್ಚ ಹೆಚ್ಚಾಗಬಹುದು ಎಂದು ಅವರು ಹೇಳಿದರು.ಈ ಯೋಜನೆ ಅಡಿಯಲ್ಲಿ ಗ್ರಾಮಸ್ಥರು ಶೇ.10, ರಾಜ್ಯ ಸರ್ಕಾರ ಶೇ.5 ಮತ್ತು ವಿಶ್ವಬ್ಯಾಂಕ್ ಶೇ.85 ರಷ್ಟು ಅನುದಾನ ಭರಿಸಲಿವೆ. ನೀರು ಪೂರೈಕೆಯಾಗುವ ಗ್ರಾಮಗಳಲ್ಲಿ ನೀರು ನಿರ್ವಹಣೆ ಸಭೆ ರಚನೆ ಮಾಡಲಾಗುವುದು. ಆ ಸಭೆಯ ಸದಸ್ಯರೆ ಗ್ರಾಮಗಳಿಂದ ವಂತಿಗೆ ವಸೂಲಿ ಮಾಡಬೇಕು ಎಂದು ಹೇಳಿದರು. ಸಭೆಯಲ್ಲಿ ಬಿ.ಎಸ್.ಚಿಟಗಿ ಹಾಗೂ ಸಿದ್ದಪ್ಪ ಝಳಕಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry