ಮಂಗಳವಾರ, ಮೇ 11, 2021
23 °C

3 ಬಾಲಕಾರ್ಮಿಕರು ಅಧಿಕಾರಿಗಳ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಡಿ: ಪಟ್ಟಣ ಸಮೀಪದ ನಾಲವಾರ ಹಾಗೂ ಕುಂಬಾರಹಳ್ಳಿ ಗ್ರಾಮದ ಅಂಗಡಿಗಳ ಮೇಲೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ಇಲಾಖೆ ಅಧಿಕಾರಿಗಳು ಶುಕ್ರವಾರ ದಿಢೀರ್ ದಾಳಿ ನಡೆಸಿದರು.ಇಲಾಖೆಯ ಜಿಲ್ಲಾ ಹಿರಿಯ ಅಧಿಕಾರಿ ಶ್ರೀಹರಿ ಹಾಗೂ ತಾಲ್ಲೂಕು ಅಧಿಕಾರಿ ರಮೇಶ ನೇತೃತ್ವದಲ್ಲಿ ಹೋಟೆಲ್, ಕಿರಾಣಾ ಅಂಗಡಿ, ವೈನ್ ಶಾಪ್‌ಗಳ ಮೇಲೆ ಶುಕ್ರವಾರ ದಿಢೀರ್ ದಾಳಿ ನಡೆಯಿತು. ಕೆಲಸ ಮಾಡುತ್ತಿದ್ದ ಮೂರು ಬಾಲಕಾರ್ಮಿಕ ಮಕ್ಕಳನ್ನು ವಶಕ್ಕೆ ತೆಗೆದುಕೊಂಡರು.ಬಾಲಕಾರ್ಮಿಕ ಪದ್ಧತಿ ನಿಷೇಧ ಕಾನೂನಿನ ವಿರುದ್ಧವಾಗಿ ಮಕ್ಕಳನ್ನು ಕೇಲಸದಲ್ಲಿ ತೊಡಗಿಸಿದ್ದ ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡು ನೋಟಿಸ್ ನೀಡಿದರು.ನಾಲವಾರ ಶಾಲೆಗೆ ಎರಡು ಮಕ್ಕಳನ್ನು ಸೇರಿಸಲಾಗಿದೆ. ಆದರೆ ಕುಂಬರಹಳ್ಳಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರೊಂದಿಗೆ ಚರ್ಚಿಸಲು ಶಾಲೆಗೆ ಹೋದರೆ ಶಾಲೆಗೆ ಬೀಗ ಹಾಕಿತ್ತು. ಆದ್ದರಿಂದ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.ಪೋಷಕರ ರೋದನ:
ಅಧಿಕಾರಿಗಳ ವಶದಲ್ಲಿದ್ದ ಬಾಲಕರನ್ನು ಬಿಟ್ಟು ಬಿಡುವಂತೆ ಪೋಷಕರು ಅಂಗಲಾಚಿದರು. ನಾವು ಬಡವರು ಮನೆಯವರೆಲ್ಲರೂ ದುಡಿದರೂ ಹೊಟ್ಟೆಗೆ ಗಂಜಿ ಸಿಗುವುದಿಲ್ಲ. ಮಕ್ಕಳೇ ನಮಗೆ ಆಸರೆ. ಸರ್ಕಾರ ನಮಗೆ ಇಲ್ಲಿಯವರೆಗೆ ಯಾವುದೇ ಸೌಲಭ್ಯ ಒದಗಿಸಿಕೊಟ್ಟಿಲ್ಲ. ಆದ್ದರಿಂದ ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಕಳಿಸಿದ್ದೇವೆ ಎಂದು ನೋವು ತೋಡಿಕೊಂಡರು.ದಾಳಿ ನಡೆಸಿದ ಸಂದಂರ್ಭದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ವಾಡಿ ವಲಯದ ಮಕ್ಕಳ ಮಾರ್ಗದರ್ಶಿ ಸಂಸ್ಥೆ (ಚೈಲ್ಡ್ ಲೈನ್) ಆನಂದರಾಜ್, ಸುಂದರ್ ಮತ್ತು ರವೀಂದ್ರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.