ಶನಿವಾರ, ಮೇ 15, 2021
23 °C

ನಿರ್ಗತಿಕ ಮಕ್ಕಳಿಗೆ ದೊರಕಲಿದೆ ಆಸರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಿರ್ಗತಿಕ ಮಕ್ಕಳಿಗೆ ನೆರವು ನೀಡುವ ಸಾಮಾಜಿಕ ಸಂಘಟನೆ `ಸೋಕೇರ್ ಇಂಡ್~ ತನ್ನ ಕಾರ್ಯಚಟುವಟಿಕೆಗಳನ್ನು ಗುಲ್ಬರ್ಗ ಜಿಲ್ಲೆಗೂ ವಿಸ್ತರಿಸಿದೆ. ಭಾನುವಾರ ಸಂಜೆ ನಗರದ ರಾಮೇಶ್ವರ ಸಭಾಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಲ್ಬರ್ಗ ಜಿಲ್ಲಾ ಘಟಕವನ್ನು ಪ್ರಾದೇಶಿಕ ಆಯುಕ್ತ ಡಾ. ರಜನೀಶ ಗೋಯಲ್ ಉದ್ಘಾಟಿಸಿದರು.ಸಮಾಜದಲ್ಲಿ ನಿರ್ಗತಿಕವಾಗಿರುವ ಕುಟುಂಬಗಳ ಮಕ್ಕಳಿಗೆ ನೆರವು ನೀಡುವುದು `ಸೋಕೇರ್ ಇಂಡ್~ ಉದ್ದೇಶ. ಅದರಲ್ಲೂ ಜೈಲಿನಲ್ಲಿರುವ ಅಪರಾಧಿಗಳ ಮಕ್ಕಳ ಏಳಿಗೆಎಗ ಹೆಚ್ಚಿನ ಮಹತ್ವ ಕೊಡುತ್ತಿದೆ. 1999ರಲ್ಲಿ ಕೇವಲ ಎರಡು ಮಕ್ಕಳಿಂದ ಶುರುವಾದ ಸಂಸ್ಥೆಯಲ್ಲಿ ಈಗ 172 ಮಕ್ಕಳು ಇವೆ ಎಂದು ಅಧ್ಯಕ್ಷ ವಿ.ಆರ್. ರಮೇಶ ಮಾಹಿತಿ ನೀಡಿದರು.“ಯಾವುದೋ ತಪ್ಪು ಮಾಡುವ ಜನರು ಜೈಲಿಗೆ ಹೋಗುತ್ತಾರೆ. ಆದರೆ ಅವರ ತಪ್ಪಿನಿಂದ ಮಕ್ಕಳ ಭವಿಷ್ಯ ಕಮರಬಾರದು. ಅವರ ಬದುಕು ಅನ್ಯಾಯಕ್ಕೆ ಈಡಾಗಬಾರದು. ಅವರು ಕೂಡ ಬೇರೆ ಮಕ್ಕಳಂತೆ ಶಿಕ್ಷಣ ಪಡೆದು, ಸಮಾಜದ ಮುಖ್ಯವಾಹಿನಿಗೆ ಸೇರಬೇಕು ಎಂಬುದು ಸಂಘಟನೆ ಉದ್ದೇಶ. ಶಂಗೇರಿ ಶಾರದಾ ಪೀಠವು ನಮ್ಮ ಸಂಸ್ಥೆಗೆ ಅಭಯ ನೀಡಿದೆ” ಎಂದು ರಮೇಶ ವಿವರಿಸಿದರು.ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ನಿವೃತ್ತ ಅಧಿಕಾರಿ ವೆಂಕಟರಾಘವಾಚಾರಿ ಮಣಿ ಅವರ ಸೇವಾ ಮನೋಭಾವ ಹಾಗೂ ಕಾಳಜಿಯ ಪ್ರತೀಕವಾಗಿ ಸಂಸ್ಥೆ ಪ್ರಾರಂಭಗೊಂಡಿದೆ.

 

ಗುಲ್ಬರ್ಗ ಕೇಂದ್ರ ಕಾರಾಗೃಹದಲ್ಲಿರುವ ಅಪರಾಧಿಗಳ ಮಕ್ಕಳೇ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹೀಗಾಗಿ ಗುಲ್ಬರ್ಗದಲ್ಲೇ ಶಾಖೆ ಆರಂಭಕ್ಕೆ ತೀರ್ಮಾನಿಸಲಾಯಿತು ಎಂದರು.ಸಂಸ್ಥೆಯ ಗುಲ್ಬರ್ಗ ಶಾಖೆ ಅಧ್ಯಕ್ಷ ಪ್ರಕಾಶ್ ಕುಲಕರ್ಣಿ, ವಿ. ಮಣಿ, ಧೋಂಡು ಜೋಶಿ, ವಿದ್ಯಾಸಾಗರ ಪಾಟೀಲ್ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.