ಮಂಗಳವಾರ, ಮೇ 11, 2021
27 °C

ದೇವಸ್ಥಾನ ಸಮಿತಿಯಿಂದ ಜಪ್ತಿ: ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಡಿ: ಪಟ್ಟಣ ಸಮೀಪದ ಇಂಗಳಗಿ ಗ್ರಾಮದ ವೀರಭದ್ರೇಶ್ವೇರ ದೇವಸ್ಥಾನ ಹತ್ತಿರ ಮಕ್ಕಳ ಸಲುವಾಗಿ ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ ಅಂಗನವಾಡಿ ಕೇಂದ್ರವನ್ನು ದೇವಸ್ಥಾನ ಸಮಿತಿ ಮುಖಂಡರು ಅಕ್ರಮವಾಗಿ ತಮ್ಮ ವಶಕ್ಕೆ ತೆಗೆದು ಕೊಂಡು, ಮಕ್ಕಳ ಪಾಠ ಪ್ರವಚನಕ್ಕೆ ವಿನಾಹ ಕಾರಣ ಅಡ್ಡಿಉಂಟು ಮಾಡುತ್ತಿದ್ದಾರೆ ಎಂದು ವಾಡಿ ಘಟಕದ ಜೈಕರ್ನಾಟಕ ವೇದಿಕೆ ಅಧ್ಯಕ್ಷ ಪಿ.ವಿ ನಾಗರಾಜ ದೂರಿದ್ದಾರೆ.ಜಿಲ್ಲಾ ಪಂಚಾಯಿತಿ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ 2008-09ರಲ್ಲಿ ಅಂಗನವಾಡಿ ಕೇಂದ್ರ-4 ನಿರ್ಮಿಸಲಾಗಿದೆ. ನಂತರ  ದೇವಸ್ಥಾನ ಸಮಿತಿ ಈ ಕಟ್ಟಡ ಬಳಸಿಕೊಂಡು ಈಗ ಅಂಗನವಾಡಿ ಕೇಂದ್ರ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಹಿಂದೆ ಸ್ಥಳೀಯ ಜ್ಞಾನ ಭಾರತಿ ಶಿಕ್ಷಣ ಸಂಸ್ಥೆಗೆ ಬಾಡಿಗೆ ಆಧಾರದ ಮೇಲೆ ಕಟ್ಟಡ ನೀಡಿದ್ದರು. ಇದನ್ನು ಪ್ರಶ್ನಿಸಿ ಚಿತ್ತಾಪುರ ಶಿಸು ಅಭಿವೃದ್ಧಿ ಯೋಜನಾಧಿಕಾರಿಗೆ ದೂರು ನೀಡದ. ಪರಿಣಾಮ ಅಧಿಕಾರಿ ಗ್ರಾಮಕ್ಕೆ ಬಂದು ಕೇಂದ್ರವನ್ನು ಅಂಗನವಾಡಿ ಕಾರ್ಯಕರ್ತೆ ಪಾರ್ವತಿಗೆ ವಹಿಸಿಕೊಟ್ಟರು.ನಂತರ ಸಮಿತಿ ಮುಖಂಡರು ಮತ್ತೆ ಈಗ ಕೇಂದ್ರಕ್ಕೆ ಕಾನೂನು ಬಾಹಿರವಾಗಿ ಬೀಗ ಹಾಕಿದ್ದಾರೆ. ಕೇಳಿದರೆ ಇದು ದೇವಸ್ಥಾನ ಕಟ್ಟಡ ಎಂದು ಹೇಳುತ್ತಿದ್ದಾರೆ. ಗ್ರಾಮ ಪಂಚಾಯಿತಿಗೆ ಕೇಳಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಪಿಸಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಬರೆದ ಪತ್ರದಲ್ಲಿ ಸಂಘಟನೆ ಕಾರ್ಯಕರ್ತರು ದೂರಿದ್ದಾರೆ.ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿದ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿದ್ದಯ್ಯಾ ಸ್ವಾಮಿಗೆ ಕೇಳಿದರೆ ಇದು ನಮ್ಮ ವ್ಯಾಪ್ತಿಗೆ ಬರುವದಿಲ್ಲ. ಎಂದು ಹಾರಿಕೆ ಉತ್ತರ ನೀಡಿ, ಪದೇ ಪದೇ ಕಚೇರಿಗೆ ಬಂದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬೇದರಿಕೆ ಹಾಕುತ್ತಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ತಿಳಿಸಿದರು.ಸರ್ಕಾರದ ಅನುದಾನ ಸಂಪೂರ್ಣ ದುರ್ಬಳಕೆಯಾಗಿದ್ದು ಸ್ಪಷ್ಟವಾಗಿ ಕಂಡುಬಂದಿದೆ. ಆದರೂ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ಇದನ್ನು ನೋಡಿದರೇ ಅಧಿಕಾರಿಗಳು ಕೂಡ ಇದರಲ್ಲಿ ಭಾಗಿಯಾಗಿರುವುದು ಖಚಿತವಾಗಿದೆ. ನಿರ್ಲಕ್ಷ್ಯ ವಹಿಸಿದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಪತ್ರದಲ್ಲಿ ಕಾರ್ಯಕರ್ತರು ಎಚ್ಚರಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.