ಶುಕ್ರವಾರ, ಮೇ 7, 2021
25 °C

ಬಡವರ ಮೇಲೆ ಬೆಲೆ ಏರಿಕೆ ಬರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಅಗತ್ಯ ವಸ್ತುಗಳ ಬೆಲೆ ಏರಿಕೆ, ಬಡತನ, ನಿರುದ್ಯೋಗ, ಹಣದುಬ್ಬರ ಸಮಸ್ಯೆಗಳಿಂದ ಜನತೆ ತತ್ತರಿಸುತ್ತಿರುವ ಮಧ್ಯೆಯೇ  ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಕೇಂದ್ರ ಸರ್ಕಾರವು ಪೆಟ್ರೋಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ   (ಕಮ್ಯುನಿಸ್ಟ್) ಸದಸ್ಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಎಚ್.ದಿವಾಕರ್, `ಕೇಂದ್ರ ಸರ್ಕಾರವು ಮೂರು ವರ್ಷದಲ್ಲಿ ಒಂಬತ್ತು ಬಾರಿ ತೈಲ ಬೆಲೆ ಏರಿಕೆ ಮಾಡಿದೆ. ಆ ಮೂಲಕ ಜನವಿರೋಧಿ ಸರ್ಕಾರ ಎಂಬುದನ್ನು ಸಾಬೀತು ಮಾಡಿದೆ. ವ್ಯಾಪಕವಾಗಿರುವ ಭ್ರಷ್ಟಾಚಾರದ ನಡುವೆ ಪೆಟ್ರೋಲ್ ಬೆಲೆ ಏರಿಕೆಯು ಜನತೆಗೆ ಇನ್ನಷ್ಟು ಏಟು ನೀಡಿದೆ~ ಎಂದರು.ತೈಲ ಬೆಲೆಯ ಮೇಲಿನ ಸರ್ಕಾರದ ನಿಯಂತ್ರಣವನ್ನು ತೆಗೆದುಹಾಕುವ ಕೀರ್ತಿ-ಪಾರೇಖ್ ಸಮಿತಿಯ ಶಿಫಾರಸ್ಸನ್ನು ಜಾರಿಗೆ ತರುವ ಮೂಲಕ ಜನಜೀವನದ ಮೇಲೆ ಗಧಾಪ್ರಹಾರ ಮಾಡುತ್ತಿದೆ. ಖಾಸಗಿ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶಕ್ಕಾಗಿ `ತೈಲ ಕಂಪೆನಿಗಳಿಗೆ ನಷ್ಟ~ ಉಂಟಾಗುತ್ತಿದೆ ಎಂಬ ನೆಪವೊಡ್ಡುತ್ತಿದೆ. ಒಂದೆಡೆ ತೋರಿಕೆಗೆ ತೈಲ ಸರಬರಾಜಿಗೆ ಸಬ್ಸಿಡಿ ನೀಡುವ ಸರ್ಕಾರವು ಇನ್ನೊಂದೆಡೆ ಭಾರಿ ತೆರಿಗೆ ವಿಧಿಸುತ್ತಿದೆ. ಇಂತಹ ದ್ವಂದ್ವ, ನಯವಂಚಕ ನೀತಿಯನ್ನು ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಬಿಡಬೇಕು. ಸಾಮಾನ್ಯ ಜನತೆಯ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.  

ಜಿಲ್ಲಾ ಸಮಿತಿ ಸದಸ್ಯೆ ವಿ.ನಾಗಮ್ಮಾಳ್ ಮಾತನಾಡಿದರು.  ರಾಮಣ್ಣ ಎಸ್. ಇಬ್ರಾಹಿಂಪುರ, ಮಹೇಶ್ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.