ಅಕ್ಷರ ಬಂದರೂ ಬಾರದ ಸಾಮಾಜಿಕ ಅರಿವು

ಗುರುವಾರ , ಮೇ 23, 2019
31 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಅಕ್ಷರ ಬಂದರೂ ಬಾರದ ಸಾಮಾಜಿಕ ಅರಿವು

Published:
Updated:

ಗುಲ್ಬರ್ಗ: ಅಕ್ಷರ ಬಂದರೂ ಸಾಮಾಜಿಕ ಅರಿವು ಬಂದಿಲ್ಲ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಎಚ್.ಟಿ.ಪೋತೆ ಹೇಳಿದರು.ನಗರದ ಡಾ. ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಡಾ.ಅಂಬೇಡ್ಕರ ವಿಚಾರ ವೇದಿಕೆಯು ಶುಕ್ರವಾರ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ `ಮಹಾತ್ಮ ಜ್ಯೋತಿಭಾ ಫುಲೆ ಮತ್ತು ಮಾತೋಶ್ರೀ ಶ್ರೀಮತಿ ಸಾವಿತ್ರಿಬಾಯಿ ಫುಲೆ ಜೀವನ ಮತ್ತು ಸಾಧನೆ~ ಕುರಿತು ಅವರು ಮಾತನಾಡಿದರು.ಬಸವಣ್ಣನ ಜೊತೆ ಭ್ರಷ್ಟ ರಾಜಕಾರಣಿಗಳ ಭಾವಚಿತ್ರ ಹಾಕಿ ಮೆರವಣಿಗೆ ಮಾಡುತ್ತಾರೆ. ಮನುಕುಲದ ಶಕ್ತಿಯಾಗಿರುವ ಅವರ ವಿಚಾರಧಾರೆಯನ್ನು ಬಿಟ್ಟು ಲಿಂಗಾಯತ, ವೀರಶೈವ ಎಂದು ಕೆಲವೇ ವರ್ಗಕ್ಕೆ ಸೀಮಿತಗೊಳಿಸುವ ಹುನ್ನಾರ ನಡೆಸುತ್ತಾರೆ ಎಂದು ವಿಷಾದಿಸಿದ ಅವರು, ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಫುಲೆ ಧ್ಯೇಯಗಳನ್ನು ರಾಜಕಾರಣಿಗಳು ಅನುಸರಿಸುತ್ತಿದ್ದರೆ, ಜೈಲಿನ ಯೋಗ ಬರುತ್ತಿರಲಿಲ್ಲ ಎಂದರು.

ಬ್ರಾಹ್ಮಣ್ಯ ಕೆಟ್ಟದೇ ಹೊರತು ಬ್ರಾಹ್ಮಣರಲ್ಲ. ಬ್ರಾಹ್ಮಣ್ಯ ಬಹುತೇಕ ಎಲ್ಲ ಜಾತಿಗಳಲ್ಲೂ ಇವೆ. ಅದನ್ನು ತೊಡೆದು ಹಾಕಬೇಕು. ವ್ಯಕ್ತಿಯನ್ನು ಹುಟ್ಟಿನ ಬದಲು ಯೋಗ್ಯತೆಯಿಂದ ಅಳೆಯಬೇಕು. ವಾಸ್ತವದಲ್ಲಿ ಜನಪರ ನಿಲುವಿಗೆ ಬದ್ಧನಾದ ವ್ಯಕ್ತಿಗೆ ಜಾತಿಯೇ ಇಲ್ಲ ಎಂದು ಬಣ್ಣಿಸಿದರು. ಹೆರಿಗೆ ಬೇನೆ ಹೆತ್ತಾಕೆಗೆ ಮತ್ತು ಅವಮಾನದ ಅರ್ಥ ಅಸ್ಪೃಶ್ಯತೆ ಅನುಭವಿಸದವರಿಗೆ ಗೊತ್ತು ಎಂದು ವ್ಯಾಖ್ಯಾನಿಸಿದ ಅವರು, 19ನೇ ಶತಮಾನದಲ್ಲಿ ಜಗತ್ತು ಯಂತ್ರಯುಗದಲ್ಲಿದ್ದರೆ, ಭಾರತ ಮಂತ್ರಕ್ಕೆ ಮೊರೆ ಹೋಗಿತ್ತು. ಇಂಥ ಸಂದರ್ಭದಲ್ಲಿ ಸಾಮಾಜಿಕ ಬದಲಾವಣೆ ತಂದವರು ಫುಲೆ ದಂಪತಿ ಎಂದು ವಿಶ್ಲೇಷಿಸಿದರು.ಫುಲೆ ದಂಪತಿ ಅಂದೇ ಸಾಮಾಜಿಕ ಪರಿವರ್ತನೆಗಳ ಕೃತಿ ರಚನೆ, ಸತ್ಯ ಶೋಧಕ ಸಮಾಜ ಸ್ಥಾಪನೆ, ಅನಾಥಾಶ್ರಮ ಆರಂಭ, ಅನೈತಿಕವಾಗಿ ಹುಟ್ಟಿದ ಮಗುವಿನ ದತ್ತು ಸ್ವೀಕಾರ, ಶೋಷಿತ ವರ್ಗಕ್ಕೆ -ಮಹಿಳೆಯರಿಗೆ ಶಿಕ್ಷಣದಂತಹ ಕಾರ್ಯಗಳನ್ನು ಮಾಡಿದರು. ವೈದಿಕ ಸಮಾಜದ `ವಿಧವಾ ಕೇಶಮುಂಡನೆ~ಯನ್ನು ವೈಜ್ಞಾನಿಕವಾಗಿ ವಿರೋಧಿಸಿದರು. ಆದರೂ ಇತ್ತೀಚೆಗೆ ರಾಯಚೂರಿನ ಹಳ್ಳಿಯೊಂದರಲ್ಲಿ ಈ ಕ್ರಮ ಜರಗಿರುವುದು ಖೇದಕರ ಎಂದರು. ತಳವಾರ ವೃತ್ತಿ ಮೂಲದ ಫುಲೆ ಕುಟುಂಬ ಮಹಾರಾಷ್ಟ್ರದಲ್ಲಿ ಹೂ ಮಾರುತ್ತಿತ್ತು. ಬ್ರಿಟೀಷರಿಂದಾಗಿ ಶೋಷಿತರಿಗೂ ಶಿಕ್ಷಣದ ಅವಕಾಶ ಬಂದಾಗ ಅವಮಾನ, ಹೋರಾಟಗಳ ನಡುವೆಯೇ ಶಿಕ್ಷಣ ಪಡೆದರು. ಪತ್ನಿಯನ್ನೂ ಶಿಕ್ಷಕಿಯನ್ನಾಗಿಸಿದರು ಎಂದು ಅವರ ಬದುಕಿನ ಬವಣೆಗಳ ಸಾಧನೆಯನ್ನು ಬಿಚ್ಚಿಟ್ಟರು.ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಾರುತಿರಾವ ಡಿ. ಮಾಲೆ ಮಾತನಾಡಿ, `ಓದು, ಓದು, ಓದು, ಜಗತ್ತು ನಿನ್ನ ಓದನ್ನು ಕಂಡು ಅಂಜಲಿ~ ಎಂಬ ಅಂಬೇಡ್ಕರ್ ಮಾತಿನಂತೆ ಶಿಕ್ಷಣಕ್ಕೆ ಒತ್ತು ನೀಡಿ. ಮೂಢನಂಬಿಕೆಗಳನ್ನು ಸುಟ್ಟು ಹಾಕಿ ಮುಂದುವರಿಯಿರಿ ಎಂದು ಹಿತವಚನ ಹೇಳಿದರು.ಪ್ರಾಚಾರ್ಯ ಬಸವರಾಜ ಕುಮ್ನೂರ, ಉಪನ್ಯಾಸಕರಾದ ಡಾ.ಐ.ಎಸ್.ವಿದ್ಯಾಸಾಗರ, ಚಂದ್ರಶೇಖರ ಶೀಲವಂತ, ಡಾ.ಜಿ.ಎಂ. ಲಿಂಬಾರೆ ಮತ್ತಿತರರು ಇದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry