ಅಬಕಾರಿ ದಾಳಿ: 2610 ಲೀ ಮದ್ಯ ವಶ, ಐವರ ಬಂಧನ

ಮಂಗಳವಾರ, ಏಪ್ರಿಲ್ 23, 2019
33 °C

ಅಬಕಾರಿ ದಾಳಿ: 2610 ಲೀ ಮದ್ಯ ವಶ, ಐವರ ಬಂಧನ

Published:
Updated:

ಚಾಮರಾಜನಗರ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ಗುರುವಾರ 19 ಕಡೆ ದಾಳಿ ನಡೆಸಿ ₹9.93 ಲಕ್ಷ ಮೌಲ್ಯದ 2,610.72 ಲೀಟರ್‌ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. 

ಎಂಟು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಐವರನ್ನು ಬಂಧಿಸಿದ್ದಾರೆ. ಎರಡು ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. 

ಇವುಗಳಲ್ಲಿ 2 ಘೋರ, ಕಲಂ 12(ಎ)ರಡಿ 5 ಮೊಕದ್ದಮೆಗಳನ್ನು ದಾಖಲಿಸಲಾಗಿದೆ.

ಒಂದು ಪ್ರಕರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಕಲ್ಪತರು ಬ್ರಿವರಿಸ್ ಆಂಡ್ ಡಿಸ್ಟಿಲರೀಸ್ ಇವರಿಂದ ಚಾಮರಾಜನಗರದ ಕೆ.ಎಸ್.ಬಿ.ಸಿ.ಎಲ್ ಡಿಪೋಗೆ ಸರಬರಾಜಾಗಿರುವ ಮದ್ಯದ ಪ್ರಮಾಣವು 3027.600 ಲೀ. ಎಂದು ಪರವಾನಗಿಯಲ್ಲಿ ನಮೂದಾಗಿದೆ. ಆದರೆ, ವಾಹನದಲ್ಲಿದ್ದ ಮದ್ಯದ ಪ್ರಮಾಣ 2595.600 ಲೀ. ಇದೆ. ಇದರಿಂದ 432.000 ಲೀ. ಮದ್ಯ ಕಡಿಮೆ ಇದ್ದು, ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಬಕಾರಿ ಉಪ ಆಯುಕ್ತರ ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕರಾದ ಎಂ.ಬಿ. ಉಮಾಶಂಕರ್ ಅವರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !