ಗುರುವಾರ, 3–7–1969

ಮಂಗಳವಾರ, ಜೂಲೈ 23, 2019
20 °C
50 ವರ್ಷಗಳ ಹಿಂದೆ

ಗುರುವಾರ, 3–7–1969

Published:
Updated:

ಗಾಂಧಿ ಶತಮಾನೋತ್ಸವ

ನವದೆಹಲಿ, ಜುಲೈ 2– ಗಾಂಧಿ ಶತಮಾನೋತ್ಸವ ಸಂದರ್ಭದಲ್ಲಿ ಅಂಚೆ ಮತ್ತು ತಂತಿ ಇಲಾಖೆಯು ಮುಂದಿನ ಅಕ್ಟೋಬರ್ 2ರಂದು ನಾಲ್ಕು ವಿಶೇಷ ಸ್ಮಾರಕ ಅಂಚೆ ಚೀಟಿಗಳನ್ನು ಮಾರಾಟಕ್ಕೆ ಬಿಡುಗಡೆ ಮಾಡಲಿದೆ.

20 ಪೈಸೆಯ ಅಂಚೆ ಚೀಟಿಯಲ್ಲಿ ಗಾಂಧೀಜಿ ಮತ್ತು ಕಸ್ತೂರಬಾ ಚಿತ್ರ ಮುದ್ರಿಸಲಾಗಿದೆ. ನವದೆಹಲಿಯಶ್ರೀ ಸುರಜ್ ಸದನ್ ಅವರು ಈ ವಿನ್ಯಾಸ ರಚಿಸಿದ್ದಾರೆ. ಭಾರತದ ಸೆಕ್ಯೂರಿಟಿ ಪ್ರೆಸ್‌ನ ಕಲಾವಿದರು ರಚಿಸಿರುವ 75 ಪೈಸೆ ಬೆಲೆಯ ಅಂಚೆ ಚೀಟಿಯಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ಮುದ್ರಿಸಲಾಗಿದೆ. ಮಹಾತ್ಮ ಗಾಂಧಿಯವರ ದಂಡಿ ಯಾತ್ರೆಯನ್ನು ಚಿತ್ರಿಸುವ ನಂದಲಾಲ್ ಬೋಸ್ ಅವರ ಕೆತ್ತನೆಯ ಕೃತಿಯ ಪ್ರತಿರೂಪ ಒಂದು ರೂಪಾಯಿ ಬೆಲೆಯ ಅಂಚೆ ಚೀಟಿಯಲ್ಲಿದೆ.

ಗಾಂಧೀಜಿಯವರು ಚರಕದಲ್ಲಿ ನೂಲುತ್ತಿರುವುದು 5 ರೂಪಾಯಿ ಬೆಲೆಯ ಅಂಚೆ ಚೀಟಿಯ ಚಿತ್ರವಸ್ತುವಾಗಿದೆ. ಇದರ ವಿನ್ಯಾಸವನ್ನು ನವದೆಹಲಿಯ ಶ್ರೀ ಸಿ.ಆರ್. ಪಕ್ರಾಷಿ ಅವರು ರಚಿಸಿದ್ದಾರೆ.

ಬಿಹಾರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್: ಒಪ್ಪಿಗೆ ಸಂಭವ

ನವದೆಹಲಿ, ಜುಲೈ 2– ಬಿಹಾರ ರಾಜ್ಯದ ವಿಧಾನಸಭೆಯನ್ನು ರದ್ದುಪಡಿಸಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಬೇಕೆಂದು ರಾಜ್ಯಪಾಲ ಶ್ರೀ ನಿತ್ಯಾನಂದ ಕನುಂಗೋರವರು ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಿರುವರು.

ಈ ಬಗೆಗಿನ ಅವರ ವರದಿ ಇಂದು ಸಂಜೆ ಇಲ್ಲಿ ತಲುಪಿದೆ. ಅವರ ಶಿಫಾರಸನ್ನು ಕೇಂದ್ರ ಸರ್ಕಾರ ಅಂಗೀಕರಿಸುವ ಸಂಭವವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !