ಭಾನುವಾರ, 11–5–1969

ಭಾನುವಾರ, ಮೇ 26, 2019
28 °C

ಭಾನುವಾರ, 11–5–1969

Published:
Updated:

ಪಕ್ಷದ ವಿಭಜನೆಗೆ ತಾವು ಸಲಹೆ ಮಾಡಿಲ್ಲ ಎಂದು ಎಸ್ಸೆನ್ ಸ್ಪಷ್ಟನೆ

ನವದೆಹಲಿ, ಮೇ 10– ‘ಪಕ್ಷವು ವಿಭಜಿತವಾದರೂ ಚಿಂತೆ ಇಲ್ಲ. ವಿಭಿನ್ನ ಪ್ರವೃತ್ತಿಗಳ ಧ್ರುವೀಕರಣವಾಗಬೇಕು’ ಎಂದು ತಾವು ಎಂದೂ ಹೇಳಲಿಲ್ಲವೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಇಲ್ಲಿ ತಿಳಿಸಿದರು.

‘ಹಾಗೆ ಹೇಳುವುದಾದರೆ ಪಕ್ಷದಲ್ಲಿ ಒಡಕುಂಟಾಗ ಕೂಡದು, ಪಕ್ಷ ದುರ್ಬಲಗೊಳ್ಳ ಕೂಡದು ಎಂಬುದೇ ಸದಾ ನನ್ನ ಇಚ್ಛೆ. ಪಕ್ಷದ ಸದಸ್ಯರೆಲ್ಲರೂ ಹೆಚ್ಚಿನ ಶ್ರದ್ಧೆಯಿಂದ ಒಟ್ಟುಗೂಡಬೇಕೆನ್ನುವುದೇ ನನ್ನ ಮನವಿ’ ಎಂದೂ ಅವರು ಹೇಳಿದರು.

ಎಂ.ಪಿ.ಗಳ ವೇತನ ಏರಿಕೆ ನಕಾರದಿಂದ ಅನಿರೀಕ್ಷಿತ ಪ್ರತಿಕ್ರಿಯೆ

ನವದೆಹಲಿ, ಮೇ 10– ಸಂಸತ್ ಸದಸ್ಯರ ವೇತನ ಮತ್ತಿತರ ಭತ್ಯಗಳನ್ನು ಹೆಚ್ಚಿಸಲು ಕೇಂದ್ರ ಸಂಪುಟ ನಿರಾಕರಿಸಿರುವುದು ಕೆಲವು ಅನಿರೀಕ್ಷಿತ ವಿಚಿತ್ರ ಬೆಳವಣಿಗೆಗಳಿಗೆ ಎಡೆ ಕೊಟ್ಟಿದೆ.

ಸಂಸತ್ ಕಾಂಗ್ರೆಸ್ ಪಕ್ಷದ ಕಾರ್ಯ ನಿರ್ವಾಹಕ ಸಮಿತಿಗೆ ಮುಂದಿನವಾರ ಚುನಾವಣೆಗಳು ನಡೆಯಬೇಕಾಗಿವೆ. ವೇತನ ಮತ್ತಿತರ ಭತ್ಯಗಳು ಹೆಚ್ಚಬೇಕೆಂಬ ತಮ್ಮ ಬೇಡಿಕೆಗೆ ಯಾರು ಬೆಂಬಲ ಕೊಡುತ್ತಾರೋ ಅವರಿಗೇ ಬೆಂಬಲ ನೀಡುವುದಾಗಿ ಅನೇಕ ಸಂಸತ್ ಕಾಂಗ್ರೆಸ್ ಸದಸ್ಯರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !