ಮಂಗಳವಾರ, ಅಕ್ಟೋಬರ್ 15, 2019
26 °C
1969

ಶನಿವಾರ, 4–10–1969

Published:
Updated:

ಹಿಂಸಾಚಾರಕ್ಕೆ ಪ್ರತಿಭಟನೆ: ಗಡಿನಾಡು ಗಾಂಧಿ ಅವರಿಂದ ಮೂರು ದಿನಗಳ ನಿರಶನ ಆರಂಭ

ನವದೆಹಲಿ, ಅ. 3– ದೇಶದಲ್ಲಿ ಹಿಂಸಾಚಾರ ಹೆಚ್ಚುತ್ತಿರುವುದರ ವಿರುದ್ಧ ಪ್ರತಿಭಟನೆ ಸೂಚಿಸಲು ಗಡಿನಾಡು ಗಾಂಧಿ ಖಾನ್ ಅಬ್ದುಲ್ ಗಫಾರ್ ಖಾನ್‌ ಅವರು ಇಂದು ಬೆಳಿಗ್ಗೆ 7 ಗಂಟೆಗೆ ಮೂರು ದಿನಗಳ ಉಪವಾಸವನ್ನು ಪ್ರಾರಂಭಿಸಿದರು.

ರಾಜೇಂದ್ರ ಪ್ರಸಾದ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿನ ಮುಖ್ಯ ಕೋಣೆಯಲ್ಲಿ ಮಹಾತ್ಮ ಗಾಂಧಿ ಅವರ ಭಾವಚಿತ್ರಕ್ಕೆ ನವಸುಮಗಳನ್ನು ಸಮರ್ಪಿಸಿ, ಅದರ ಪದತಲದಲ್ಲಿಯೇ ಗಡಿನಾಡು ಗಾಂಧಿ ಉಪವಾಸ ಕುಳಿತರು.

‘ಬಾಪೂ, ಗಡಿನಾಡು ಗಾಂಧಿ ತೋರಿದ ಮಾರ್ಗ ದೇಶದ ಪ್ರಗತಿಗೆ ಸಹಾಯಕ’

ನವದೆಹಲಿ, ಅ. 3– ಮಹಾತ್ಮ ಗಾಂಧಿ ಮತ್ತು ಅವರ ಪ್ರಿಯ ಅನುಯಾಯಿ ಖಾನ್ ಅಬ್ದುಲ್ ಗಫಾರ್‌ ಖಾನ್‌ರು ತೋರಿದ ಪ್ರೀತಿ ಮತ್ತು ಐಕಮತ್ಯದ ಮಾರ್ಗವನ್ನು ಜನತೆ ಅನುಸರಿಸಿದರೆ ಮಾತ್ರ ಭಾರತ ಪ್ರಗತಿ ಹೊಂದುವುದು ಸಾಧ್ಯ ಎಂದು ರಾಷ್ಟ್ರಪತಿ ಶ್ರೀ ವಿ.ವಿ. ಗಿರಿ ಮತ್ತು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ಒತ್ತಿ ಹೇಳಿದರು.

Post Comments (+)