ಗುರುವಾರ, 3–4–1969

ಶನಿವಾರ, ಏಪ್ರಿಲ್ 20, 2019
°C
ಗುರುವಾರ

ಗುರುವಾರ, 3–4–1969

Published:
Updated:

ಅಸ್ಪೃಶ್ಯತೆ: ಪುರಿ ಜಗದ್ಗುರು ನುಡಿಗೆ ಲೋಕಸಭೆ ಖಂಡನೆ

ನವದೆಹಲಿ, ಏ. 2– ಪುರಿ ಶಂಕರಾಚಾರ್ಯರು ಅಸ್ಪೃಶ್ಯತೆ ಬಗೆಗೆ ಆಡಿದ ನುಡಿ ಹಾಗೂ ವಿಶ್ವ ಹಿಂದೂ ಸಮ್ಮೇಳನದಲ್ಲಿ ರಾಷ್ಟ್ರಗೀತೆ ಹಾಡುವಾಗ ಅವರ ಸಭಾತ್ಯಾಗವನ್ನು ರೋಷೋದ್ರಿಕ್ತ ಲೋಕಸಭೆ ಇಂದು ಖಂಡಿಸಿ ಕೂಡಲೇ ಅವರನ್ನು ಬಂಧಿಸುವಂತೆ ಒತ್ತಾಯ ಮಾಡಿತು.

ಸದಸ್ಯರ ಭಾವನೆಗಳಿಗೆ ಗೃಹ ಸಚಿವ ಶ್ರೀ ಚವಾಣರೂ ಸಹಮತ ಸೂಚಿಸಿ ಈ ಬಗೆಗೆ ಬಿಹಾರ ಸರಕಾರದೊಡನೆ ದೃಢವಾಗಿ ಪರಿಶೀಲಿಸುವುದಾಗಿ ತಿಳಿಸಿದರು.

‘ಈ ವಿಷಯದಲ್ಲಿ ಖಂಡಿಸಬೇಕಾಗಿರುವುದು ಒಬ್ಬ ಶಂಕರಾಚಾರ್ಯರನ್ನಲ್ಲ, ಇಡೀ ಗತಕಾಲದ ಪದ್ಧತಿಯನ್ನು’ ಎಂದು ಶ್ರೀ ಚವಾಣ್ ಹೇಳಿದರು.

ಹರಿಜನರನ್ನು ಹೀಯಾಳಿಸಿ, ರಾಷ್ಟ್ರಗೀತೆಯನ್ನು ಅವಹೇಳನಗೊಳಿಸಿದುದಕ್ಕಾಗಿ ಶಂಕರಾಚಾರ್ಯರ ಬಂಧನ ಮತ್ತು ಶಿಕ್ಷೆಗಳಿಗಾಗಿ ಒಬ್ಬೊಬ್ಬರಾಗಿ ಸದಸ್ಯರು ಒತ್ತಾಯ ಮಾಡುತ್ತಿದ್ದಂತೆ ‘ನಾಚಿಕೆಗೇಡು, ನಾಚಿಕೆಗೇಡು’, ‘ಗಲ್ಲಿಗೇರಿಸಿ’ ಎಂದು ಪದೇ ಪದೇ ಕೂಗುತ್ತಿದ್ದುದು ಕೇಳಿಸುತ್ತಿತ್ತು.

ವಿಮಾನ ಕಾರ್ಖಾನೆಯಲ್ಲಿ ಹೆಚ್ಚು ಉತ್ಪಾದನೆ

ನವದೆಹಲಿ, ಏ. 2– ಹಿಂದೂಸ್ತಾನ್ ವಿಮಾನ ಕಾರ್ಖಾನೆಯು 1970–71ರ ವೇಳೆಗೆ ವರ್ಷಕ್ಕೆ ಒಂಬತ್ತು ವಿಮಾನಗಳನ್ನು ಉತ್ಪಾದಿಸುವ ಸಾಮರ್ಥ್ಯ ಪಡೆದಿರುವುದೆಂದು ರಕ್ಷಣಾ ಉತ್ಪಾದನೆ ಸ್ಟೇಟ್ ಸಚಿವ ಎಲ್.ಎನ್. ಮಿಶ್ರಾ ಇಂದು ಲೋಕಸಭೆಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !