ಶುಕ್ರವಾರ, 4–4–1969

ಶುಕ್ರವಾರ, ಏಪ್ರಿಲ್ 19, 2019
31 °C
1969

ಶುಕ್ರವಾರ, 4–4–1969

Published:
Updated:

ಚಂದ್ರಶೇಖರ್‌ಗೆ ಛೀಮಾರಿ ಹಾಕಲು ನಿರ್ಧಾರ: ರೀತಿ ನೀತಿ ಪ್ರಧಾನಿ ತೀರ್ಮಾನ

ನವದೆಹಲಿ, ಏ. 3– ರಾಜ್ಯಸಭೆಯಲ್ಲಿ ಉಪ‍ ಪ್ರಧಾನಮಂತ್ರಿ ಮುರಾರಜಿ ದೇಸಾಯಿ ಅವರ ವಿರುದ್ಧ ಕೆಲವು ಆಪಾದನೆಗಳನ್ನು ಮಾಡಿದ್ದಕ್ಕಾಗಿ ‘ಯಂಗ್ ಟರ್ಕ್’ ಗುಂಪಿನ ಪ್ರಮುಖರಲ್ಲೊಬ್ಬರಾದ ಚಂದ್ರಶೇಖರ್ ಅವರಿಗೆ ‘ಛೀಮಾರಿ ಹಾಕಲು’ ಇಂದು ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷದ ಕಾರ್ಯಕಾರಿ ಸಮಿತಿಯು ನಿರ್ಧರಿಸಿತು.

ತೊಂಬತ್ತು ನಿಮಿಷಗಳ ಸಭೆಯ ನಂತರ ಈ ನಿರ್ಧಾರಕ್ಕೆ ಬಂದ ಕಾರ್ಯ ಸಮಿತಿಯು ಚಂದ್ರಶೇಖರ್ ಅವರ ವಾದವನ್ನು ಕೇಳಿತು. ಚಂದ್ರಶೇಖರ್ ಅವರನ್ನು ಈ ದಿನದ ಸಭೆಗೆ ವಿಶೇಷವಾಗಿ ಆಹ್ವಾನಿಸಲಾಗಿತ್ತು.

ಕಾರ್ಯಕಾರಿ ಸಮಿತಿ ಕೈಕೊಂಡಿರುವ ನಿರ್ಧಾರವನ್ನು ಕಾರ್ಯಾನುಷ್ಠಾನಕ್ಕೆ ತರುವ ವಿಧಾನವನ್ನು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರಿಗೆ ಬಿಡಲಾಯಿತು.

ಅಶಿಸ್ತಿನಿಂದ ತಾವು ನಡೆದುಕೊಂಡಿಲ್ಲವೆಂದು ತಮಗೆ ಮನವರಿಕೆಯಾಗಿದೆ. ಭ್ರಷ್ಟಾಚಾರ ಮತ್ತು ಏಕಸ್ವಾಮ್ಯದ ವಿರುದ್ಧ ಹೋರಾಡುವುದು ಶಿಸ್ತಿನ ಭಂಗವೆಂದು ಪಕ್ಷದ ಸಂವಿಧಾನ ಹೇಳಿಲ್ಲ ಎಂದು ಚಂದ್ರಶೇಖರ್ ಕಾರ್ಯಸಮಿತಿಗೆ ತಿಳಿಸಿದರು.

ಮುಖ್ಯಮಂತ್ರಿಗಳ ಜೊತೆ ಮುರಾರಜಿ ಚರ್ಚೆ ವಿಫಲ - ಕೃಷ್ಣಾ ವಿವಾದ ಪಂಚಾಯಿತಿಗೆ

ನವದೆಹಲಿ, ಏ. 3– ಕೃಷ್ಣಾನದಿ ನೀರು ಹಂಚಿಕೆಗೆ ಸಂಬಂಧಿಸಿದ ವಿವಾದವನ್ನು ಪಂಚಾಯಿತಿಗೊಪ್ಪಿಸಲು ಮೈಸೂರು, ಮಹಾರಾಷ್ಟ್ರ ಮತ್ತು ಆಂಧ್ರ ಮುಖ್ಯಮಂತ್ರಿಗಳು ಇಂದು ಒಪ್ಪಿದರು.

‘ಮುಂದಿನ ಕೆಲವು ದಿನಗಳೊಳಗಾಗಿ’ ಪಂಚಾಯಿತಿಗೆ ಸಂಬಂಧಿಸಿದ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆಯಿದೆ.

ಇದಕ್ಕೆ ಮುನ್ನ ಮೈಸೂರು, ಆಂಧ್ರ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಉಪ‍ ಪ್ರಧಾನಿ ಮುರಾರಜಿ ದೇಸಾಯಿರವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ, ‘ವಿವಾದವನ್ನು ನ್ಯಾಯಾಲಯದ ಬಾಗಿಲಿಗೆ ಒಯ್ಯದೆ’ ಬಗೆಹರಿಸುವ ಸಾಧ್ಯತೆ ಬಗೆಗೆ ಕೊನೆಯ ಪ್ರಯತ್ನವಾಗಿ ನಡೆಸಿದ ಮಾತುಕತೆ ವಿಫಲವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !