ಮಂಗಳವಾರ, 13–5–1969

ಶನಿವಾರ, ಮೇ 25, 2019
32 °C

ಮಂಗಳವಾರ, 13–5–1969

Published:
Updated:

ಅಲೀಘಡದ ಬಳಿ ಟ್ರೈನಿಗೆ ಡಿಕ್ಕಿ ಹೊಡೆದು ಬಸ್ಸಿಗೆ ಬೆಂಕಿ: 21 ಸಾವು

ನವದೆಹಲಿ, ಮೇ 12– ಉತ್ತರ ರೈಲ್ವೆಯ ಆಗ್ರ–ಬರೈಲಿ ವಿಭಾಗದಲ್ಲಿನ ಹರದ್ಗಂಜ್ ಲೆವೆಲ್ ಕ್ರಾಸಿಂಗಿನಲ್ಲಿ ಇಂದು ಬೆಳಿಗ್ಗೆ ಪ್ಯಾಸೆಂಜರ್ ಟ್ರೈನು ಮತ್ತು ಬಸ್ಸೊಂದಕ್ಕೆ ಡಿಕ್ಕಿ ಸಂಭವಿಸಿ, ಬಸ್ಸಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ 21 ಮಂದಿ ಸತ್ತು, 35 ಮಂದಿ ಗಾಯಗೊಂಡರು ಎಂದು ಇಲ್ಲಿಗೆ ಅಧಿಕೃತ ವರದಿ ಬಂದಿದೆ.

ಗಾಯಗೊಂಡವರನ್ನು ಅಲಿಘಡ ಸಿವಿಲ್ ಆಸ್ಪತ್ರೆಗೆ ಸೇರಿಸಲಾಗಿದೆ.

ಯು.ಪಿ. ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ

ಲಖನೌ, ಮೇ 12– ಕಾಂಗ್ರೆಸ್ಸಿನ ರಾಜಾ ವಿಜಯ್‌ ಕುಮಾರ್ ತ್ರಿಪಾಠಿ ಅವರು ಸರೋಜಿನಿ ನಗರ್ ಕ್ಷೇತ್ರದಿಂದ ಉತ್ತರ ಪ್ರದೇಶ ವಿಧಾನ ಸಭೆಗೆ ಇಂದು ಚುನಾಯಿತರಾದರು.

ಈ ಜಯದ ಫಲವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸ್ಪಷ್ಟ ಬಹುಮತ ಲಭಿಸಿದೆ. 425 ಸದಸ್ಯ ಬಲದ ವಿಧಾನ ಸಭೆಯಲ್ಲಿ ಕಾಂಗ್ರೆಸ್ಸು ಈಗ 213 ಸ್ಥಾನ ಗಳಿಸಿದೆ.

ರಾಣಿಖೇತ್ ಕ್ಷೇತ್ರದಿಂದಲೂ ಜಯಗಳಿಸಿದ ಮುಖ್ಯಮಂತ್ರಿ ಸಿ.ಬಿ. ಗು‍ಪ್ತ, ಈ ಕ್ಷೇತ್ರಕ್ಕೆ ರಾಜಿನಾಮೆ ಕೊಟ್ಟದ್ದೇ ಮರು ಚುನಾವಣೆಗೆ ಕಾರಣ.

ತೆಲಗಾಂಣ: ಕಾಂಗ್ರೆಸ್‌ಗೆ ಇನ್ನೊಂದು ತಲೆನೋವು

ಹೈದರಾಬಾದ್,  ಮೇ 12– ಎ.ಪಿ.ಸಿ.ಸಿ. ಅಧ್ಯಕ್ಷರು ಹಾಕಿದ ಶಿಸ್ತು ಕ್ರಮದ ಬೆದರಿಕೆಗೆ ಬಗ್ಗದೆ ಪ್ರತ್ಯೇಕತೆ ವಿಚಾರದಲ್ಲಿ ಅನಧಿಕೃತವಾಗಿ ’ಜನಮತ’ ಸಂಗ್ರಹಿಸಲು ತೆಲಂಗಾಣದ ಭಿನ್ನಮತೀಯ ಕಾಂಗ್ರೆಸ್ ನಾಯಕರು ನಿನ್ನೆ ಮೆಹಬೂಬ್ ನಗರದಲ್ಲಿ ಉಪಕ್ರಮಿಸಿದರು.

ಪಂಚಾಯಿತಿ ಚುನಾವಣೆಗಳಿಗಾಗಿ ರಾಜ್ಯ ಸರ್ಕಾರ ಸಿದ್ಧಪಡಿಸಿದ ಮತದಾರರ ಪಟ್ಟಿ ಆಧಾರದ ಮೇಲೆ ಪಂಚಾಯಿತಿ ಅಧ್ಯಕ್ಷರು ಜನಮತಗಣನೆ ನಡೆಸುತ್ತಾರೆ. ಪಂಚಾಯಿತಿ ಚುನಾವಣೆಗಳನ್ನು ಸರ್ಕಾರವು ತೆಲಂಗಾಣದ ಅಸ್ಥಿಮಿತ ಪರಿಸ್ಥಿತಿ ಕಾರಣ ಮುಂದೂಡಿದೆ.

ಸಹಿ ಸಂಗ್ರಹಣೆ: ಮೆಹಬೂಬ್‌ನಗರ ಜಿಲ್ಲೆಯ ಭಿನ್ನಮತೀಯ ಕಾಂಗ್ರೆಸ್ ನಾಯಕರು ಮಾಜಿ ಕೇಂದ್ರ ಸಚಿವ ಶ್ರೀ ಎಂ. ಚೆನ್ನಾರೆಡ್ಡಿ ಅವರ ನಾಯಕತ್ವದಲ್ಲಿ ಪಂಚಾಯಿತಿ ಅಧ್ಯಕ್ಷರಿಗೆ ನಿನ್ನೆ ಸಭೆಯೊಂದರಲ್ಲಿ ಮತದಾರರ ಪಟ್ಟಿಗಳನ್ನು ಹಂಚಿ ಇನ್ನೆರಡು ವಾರಗಳಲ್ಲಿ ಸಹಿ ಸಂಗ್ರಹಿಸುವಂತೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !