ಭಾನುವಾರ, ಸೆಪ್ಟೆಂಬರ್ 22, 2019
22 °C
ಗುರುವಾರ

ಗುರುವಾರ, 15–5–1969

Published:
Updated:

ನಗರದಲ್ಲಿ ಸಂಸತ್ ಸಭೆ ಸದ್ಯಕ್ಕೆ ಅಸಾಧ್ಯ: ಪಾರ್ಲಿಮೆಂಟ್ ಸಮಿತಿ ವರದಿ

ನವದೆಹಲಿ, ಮೇ 14– ಬೆಂಗಳೂರು ಅಥವಾ ತಿರುವನಂತಪುರದಲ್ಲಿ ವಾರ್ಷಿಕವಾಗಿ ಸಂಸತ್ತಿನ ಒಂದು ಅಧಿವೇಶನ ನಡೆಸಬೇಕೆಂಬುದು ಸದ್ಯದಲ್ಲಿ ಸಾಧ್ಯವಾಗದ ಕೆಲಸ ಎಂದು ಸಂಸತ್ ಸಮಿತಿ ಇಂದು ವರದಿ ಮಾಡಿತು.

ಆದರೆ, ಕೆ. ಹನುಮಂತಯ್ಯನವರೂ ಸೇರಿ, ನಾಲ್ಕು ಸದಸ್ಯರು ಭಿನ್ನಮತ ವ್ಯಕ್ತಪಡಿಸಿದರು. 1968ರ ಮೇ 10ರಂದು ಎಸ್.ಆರ್. ರಾಣೆ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿ ಲೋಕಸಭೆಗೆ ಇಂದು ತನ್ನ ವರದಿ ಸಲ್ಲಿಸಿತು. ದಕ್ಷಿಣ ಭಾರತದಲ್ಲಿ ಅಧಿವೇಶನ ನಡೆಸುವುದಾದರೆ 15ರಿಂದ 16 ಕೋಟಿ ರೂ.ರಷ್ಟು ಆರಂಭ ವೆಚ್ಚವೂ, ಒಂದೂ ಕಾಲು ಕೋಟಿ ರೂ.ಗಳಷ್ಟು ಆವರ್ತ ವೆಚ್ಚವೂ ಅಗತ್ಯವಾಗುತ್ತದೆ, ಅಲ್ಲದೆ, ಸಿದ್ಧತೆಗಳಿಗೆ 3ರಿಂದ 4 ವರ್ಷ ಕಾಲಾವಧಿಯೂ ಅಗತ್ಯ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಕೃತಿಗಳನ್ನು ಮಾರಿ ರಾಜರತ್ನಂರಿಗೆ ಸನ್ಮಾನ

ಬೆಂಗಳೂರು, ಮೇ 14– ಸಾಹಿತ್ಯವನ್ನು ಮಾರಿ ಸಾಹಿತಿಗೆ ಸನ್ಮಾನ.

ಸಾಹಿತಿಯ ಕೃತಿಗಳನ್ನು ಮಾರಿ ಸನ್ಮಾನಿಸುವುದು, ಗೃಹಗಳು ಮತ್ತು ಸಂಘ ಸಂಸ್ಥೆಗಳಿಗೆ ಸಾಹಿತ್ಯದ ಪ್ರವೇಶ. ಈ ಎರಡೂ ಉದ್ದೇಶಗಳನ್ನು ಸಾರ್ಥಕಗೊಳಿಸಿರುವ ಈ ನವೀನ ವಿಧಾನವನ್ನು ಅನುಸರಿಸಿರುವ ಸನ್ಮಾನ ಸಮಿತಿ, ಜುಲೈ ಮೊದಲನೇ ವಾರದಲ್ಲಿ ಪ್ರಸಿದ್ಧ ಸಾಹಿತಿ ಶ್ರೀ ಜಿ.ಪಿ. ರಾಜರತ್ನಂ ಅವರಿಗೆ ಸುಮಾರು 15 ಸಾವಿರ ರೂಪಾಯಿಯ ನಿಧಿಯನ್ನು ಅರ್ಪಿಸಲಿದೆ.

Post Comments (+)