ಶುಕ್ರವಾರ, 16–5–1969

ಶನಿವಾರ, ಮೇ 25, 2019
28 °C

ಶುಕ್ರವಾರ, 16–5–1969

Published:
Updated:

ಹಳೆಯ ಮೈಸೂರನ್ನು ಸರ್ಕಾರ ನಿರ್ಲಕ್ಷಿಸಿಲ್ಲ ಎಂದು ಮುಖ್ಯಮಂತ್ರಿ

ಬೆಂಗಳೂರು, ಮೇ 15– ಕರ್ನಾಟಕ ರಚನೆಯಾದಂದೀಚೆಗೆ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ‘ಹಳೆಯ ಮೈಸೂರು ಪ್ರದೇಶವನ್ನು ಸರಕಾರ ನಿರ್ಲಕ್ಷಿಸಿಲ್ಲ’ ಎಂಬುದನ್ನು ಮನದಟ್ಟು ಮಾಡಿಕೊಡುವ ಅಂಕಿ, ಅಂಶಗಳನ್ನು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಇಂದು ಶಾಸನಸಭಾ ಕಾಂಗ್ರೆಸ್ ಪಕ್ಷದ ಕಾರ್ಯ ಸಮಿತಿಗೆ ವಿವರಿಸಿದರು.

‘ಹಳೆಯ ಮೈಸೂರನ್ನು ನಿರ್ಲಕ್ಷಿಸಿಲ್ಲ. ಕರ್ನಾಟಕದ ವಿವಿಧ ಪ್ರದೇಶಗಳ ನಡುವೆ ಇರುವ ಅಸಮಾನತೆಗಳನ್ನು ನಿವಾರಿಸಲು ಪ್ರಯತ್ನ ನಡೆದಿಲ್ಲ. ವಿಲೀನ ಪ್ರದೇಶಗಳಲ್ಲಿ ಏನಾದರೂ ಅಭಿವೃದ್ಧಿ ಕಾರ್ಯ ನಡೆದಿದ್ದರೆ ಹಳೆಯ ಮೈಸೂರಿನ ಅಭಿವೃದ್ಧಿಯನ್ನು ಕೈಬಿಟ್ಟು ಆಗಿರುವ ಕೆಲಸವಲ್ಲ’ ಮುಖ್ಯಮಂತ್ರಿಗಳ ವಿವರಣೆಯಿಂದ ಈ ಮೂರು ಅಂಶಗಳು ಎದ್ದು ಕಾಣುತ್ತವೆಂದು ಸಮಿತಿ ಸಭೆ ಮುಗಿದ ನಂತರ ಪಕ್ಷದ ವಕ್ತಾರರೊಬ್ಬರು ತಿಳಿಸಿದರು.

ವಿಯಟ್ನಾಂನಿಂದ ಎಲ್ಲ ವಿದೇಶಿ ಸೇನೆಯ ವಾಪಸಿಗೆ ನಿಕ್ಸನ್ ಕರೆ

ವಾಷಿಂಗ್ಟನ್, ಮೇ 15– ಮುಂದಿನ ಹನ್ನೆರಡು ತಿಂಗಳಲ್ಲಿ ದಕ್ಷಿಣ ವಿಯಟ್ನಾಮಿನಿಂದ ಎಲ್ಲ ವಿದೇಶೀ ಪಡೆಗಳನ್ನೂ ಹಂತ ಹಂತವಾಗಿ ವಾಪಸ್ ಕರೆಸಿಕೊಳ್ಳುವ ಸಲಹೆಗೆ ಒಪ್ಪಬೇಕೆಂದು ಅಮೆರಿಕದ ಅಧ್ಯಕ್ಷ ನಿಕ್ಸನ್ ಅವರು ಹಾನಾಯ್‌ಗೆ ಮನವಿ ಮಾಡಿಕೊಂಡಿದ್ದಾರೆ.

ಅಂತರರಾಷ್ಟ್ರೀಯ ಮೇಲ್ವಿಚಾರಣೆಗೊಳಪಟ್ಟ ಕದನ ವಿರಾಮದ ವ್ಯವಸ್ಥೆಗೂ ಒಪ್ಪಬೇಕೆಂದು ನಿಕ್ಸನ್, ಉತ್ತರ ವಿಯಟ್ನಾಂಗೆ ಸಲಹೆ ಮಾಡಿದ್ದಾರೆ.

ಎಚ್.ಎಫ್. 24 ವಿಮಾನ ಮತ್ತಷ್ಟು ಅಭಿವೃದ್ಧಿಪಡಿಸಲು ಸುಬ್ರಹ್ಮಣ್ಯಂ ಸಮಿತಿ ಶಿಫಾರಸು

ನವದೆಹಲಿ, ಮೇ 15– ಎಚ್.ಎಫ್. 24 ಫೈಟರ್ ವಿಮಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕೆಂದು ಕೇಂದ್ರದ ಮಾಜಿ ಸಚಿವ ಶ್ರೀ ಸಿ. ಸುಬ್ರಹ್ಮಣ್ಯಂ ಅವರ ಅಧ್ಯಕ್ಷತೆಯಲ್ಲಿನ ಏರೋನಾಕ್ಸ್ ಸಮಿತಿ ಶಿಫಾರಸು ಮಾಡಿದೆ.

‌1970ರಿಂದ 1980ರವರೆಗಿನ ಅವಧಿಯ ಉತ್ತರಾರ್ಧದ ವೇಳೆಗೆ ವಿಮಾನ ಪಡೆಯ ಅಗತ್ಯಗಳನ್ನು ಪೂರೈಸಲು ಮತ್ತು ಹೆಚ್ಚು ಮುಂದುವರಿದ ತಾಂತ್ರಿಕ ಕೌಶಲದಿಂದ ಹೊಸ ವಿಮಾನವೊಂದನ್ನು ದೇಶದಲ್ಲಿಯೇ ರೂಪಿಸಲು ಶಿಫಾರಸು ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !