ಭಾನುವಾರ, 18–5–1969

ಶುಕ್ರವಾರ, ಮೇ 24, 2019
22 °C

ಭಾನುವಾರ, 18–5–1969

Published:
Updated:

ಗಡಿನಾಡು ಗಾಂಧಿಗೆ ನೆಹರೂ ಪ್ರಶಸ್ತಿ

ನವದೆಹಲಿ, ಮೇ 17– ಅಂತರರಾಷ್ಟ್ರೀಯ ತಿಳಿವಳಿಕೆಗಾಗಿ 1967ರ ಜವಾಹರಲಾಲ್ ನೆಹರೂ ಪ್ರಶಸ್ತಿಯನ್ನು ಖಾನ್ ಅಬ್ದುಲ್ ಗಫಾರ್ ಖಾನರಿಗೆ ನೀಡಲಾಗಿದೆ.

ಸ್ವಾತಂತ್ರ್ಯ ಸಮರದ ಗಣ್ಯ ಯೋಧರಾದ ಖಾನ್ ಅಬ್ದುಲ್ ಗಫಾರ್ ಖಾನರು ಈಗ ಅಫ್ಗಾನಿಸ್ತಾನ ಹಾಗೂ ಪಾಕಿಸ್ತಾನದ ಗಡಿಯಲ್ಲಿ ಪಾಶ್ತೊ ಭಾಷಾ ಜನರಿಗೆ ಸ್ವಯಂ ನಿರ್ಧಾರದ ಹಕ್ಕು ದೊರಕಿಸಲು
ಹೋರಾಡುತ್ತಿದ್ದಾರೆ.

ನಗರದ ಬದಲಾದ ಹವಾ: ವೀರೇಂದ್ರರ ವಿಶ್ಲೇಷಣೆ

ಬೆಂಗಳೂರು, ಮೇ 17– ‘ಈ ಮಹಾನಗರದ ಮಧ್ಯದಲ್ಲಿದ್ದ ಕೆರೆಗಳು ಬತ್ತಿ ಹೋದವು. ಮನೆಗಳ ಆವರಣದಲ್ಲಿದ್ದ ಗಿಡಗಳು ಕತ್ತರಿಸಲ್ಪಟ್ಟು ಮನೆಗಳು ನಿರ್ಮಾಣವಾದವು. ಹಿಂದೆ ಹಸಿರು ಆವರಿಸಿದ್ದ ಜಮೀನುಗಳಲ್ಲಿ ಕಾರ್ಖಾನೆಗಳು ತಲೆ ಎತ್ತಿದವು.

ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ಬದಲಾಗಿರುವ ಬೆಂಗಳೂರಿನ ಪರಿಸ್ಥಿತಿಯನ್ನು ‍ಪ್ರಸ್ತಾಪಿಸಿ ‘ಇವುಗಳೆಲ್ಲಾ ನಗರದ ಹವಾಗುಣದ ಮೇಲೆ ಪರಿಣಾಮ ಮಾಡಿರಬಹುದು’ ಎಂದರು.

ಮಂಚನಬೆಲೆ ಯೋಜನೆ ಈ ವರ್ಷದಲ್ಲೇ ಆರಂಭ: ಎಂ.ವಿ. ರಾಜಶೇಖರನ್‌ರಿಗೆ ಮುಖ್ಯಮಂತ್ರಿ ಪತ್ರ

ನವದೆಹಲಿ, ಮೇ 17– ರಾಜ್ಯದ ನಾಲ್ಕನೆ ಯೋಜನೆಯಲ್ಲಿ ಮಂಚನಬೆಲೆ ಯೋಜನೆಯನ್ನು ಅಡಕ ಮಾಡಲಾಗುವುದೆಂದೂ, ಅಲ್ಲದೆ ಈ ವರ್ಷದಲ್ಲೇ ಕಾರ್ಯ ಆರಂಭಿಸಲು ಪ್ರಯತ್ನ ಮಾಡಲಾಗುವುದೆಂದೂ ತಿಳಿಸಿ, ಮೈಸೂರು ರಾಜ್ಯದ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರು ಸಂಸತ್ ಸದಸ್ಯ ಶ್ರೀ ಎಂ.ವಿ. ರಾಜಶೇಖರನ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.

ಶ್ರೀ ರಾಜಶೇಖರನ್ ಅವರು ಈ ಯೋಜನೆ ಬಗ್ಗೆ ತೀವ್ರ ಆಸಕ್ತಿ ವಹಿಸಿ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರನ್ನು ಅನೇಕ ಬಾರಿ ಭೇಟಿಯಾಗಿದ್ದರಲ್ಲದೆ ಈ ಯೋಜನೆ ಬಗ್ಗೆ ಆಡಳಿತದ ಒಪ್ಪಿಗೆ ಪಡೆಯುವುದಕ್ಕೆ ಪತ್ರ ವ್ಯವಹಾರ ನಡೆಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !