ಮಂಗಳವಾರ, 20–5–1969

ಮಂಗಳವಾರ, ಜೂನ್ 25, 2019
27 °C
1969

ಮಂಗಳವಾರ, 20–5–1969

Published:
Updated:

ರಾಜಕೀಯ ಪಕ್ಷಗಳಿಗೆ ಕಂಪನಿ ಕಾಣಿಕೆ ನಿಷೇಧ: ಮಸೂದೆಗೆ ಸಂಸತ್ ಒಪ್ಪಿಗೆ

ನವದೆಹಲಿ, ಮೇ 19– ರಾಜಕೀಯ ಪಕ್ಷಗಳಿಗೆ ಕಂಪನಿಗಳ ಕಾಣಿಕೆಯನ್ನು ನಿಷೇಧಿಸುವ ಹಾಗೂ ಮ್ಯಾನೇಜಿಂಗ್ ಏಜೆನ್ಸಿ ವ್ಯವಸ್ಥೆಯನ್ನು 1970ರ ಏಪ್ರಿಲ್ 3ರಿಂದ ರದ್ದುಗೊಳಿಸುವ ಸರ್ಕಾರದ ಮಸೂದೆಗೆ ಸಂಸತ್ ಇಂದು ತನ್ನ ಒಪ್ಪಿಗೆ ನೀಡಿತು.

ಕಳೆದ ವಾರ ಲೋಕಸಭೆ ಅನುಮೋದಿಸಿದ ಈ ಮಸೂದೆಯನ್ನು ರಾಜ್ಯಸಭೆ ಇಂದು ಅನುಮೋದಿಸಿತು.

ರಾಷ್ಟ್ರಪತಿ ಸ್ಥಾನಕ್ಕೆ ಜಗಜೀವನರಾಂ ಒಲವಿಲ್ಲ

ಡೆಹ್ರಾಡೂನ್, ಮೇ 19– ತಾವು ರಾಷ್ಟ್ರಪತಿ ಸ್ಥಾನಕ್ಕೆ ಆಕಾಂಕ್ಷಿ ಅಲ್ಲವೆಂದು ಕೇಂದ್ರ ಆಹಾರ ಸಚಿವ ಶ್ರೀ ಜಗಜೀವನರಾಂ ಇಂದು ಇಲ್ಲಿ ತಿಳಿಸಿದರು.

ಹರಿಜನರ ಬಹಿರಂಗ ಸಭೆಯೊಂದರಲ್ಲಿ ಮಾತನಾಡಿದ ಶ್ರೀ ಜಗಜೀವನರಾಂ ಅವರು, ‘ನಾನು ಜನಸಾಮಾನ್ಯರಿಗೆ ಸೇರಿದವನು, ದೀನದಲಿತರ ಸೇವೆಗಾಗಿ ಅವರ ನಡುವೆಯೇ ಇರಬಯಸುತ್ತೇನೆ’ ಎಂದರು.

ಭಾಷಾ ಸಮಸ್ಯೆಗೆ ತ್ರಿಭಾಷಾ ಸೂತ್ರವೇ ಸೂಕ್ತ ಪರಿಹಾರ: ಇಂದಿರಾ

ತಿರುವನಂತಪುರ, ಮೇ 19– ತ್ರಿಭಾಷಾ ಸೂತ್ರವೇ ತಮ್ಮ ನಿಲುವೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಇಂದು ಇಲ್ಲಿ ಖಚಿತವಾಗಿ ಹೇಳಿದರು.

ಭಾಷಾ ಸಮಸ್ಯೆಗೆ ಇದಕ್ಕೂ ಉತ್ತಮ ಪರಿಹಾರವನ್ನು ಯಾರೂ ಸೂಚಿಸಿಲ್ಲ ಎಂಬುದು ಅವರ ಹೇಳಿಕೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !