ಗುರುವಾರ, 22–5–1969

ಬುಧವಾರ, ಜೂನ್ 19, 2019
26 °C

ಗುರುವಾರ, 22–5–1969

Published:
Updated:

ಅಪೊಲೊಗೆ ಚಂದ್ರನ ಗುರುತ್ವಾಕರ್ಷಣೆ

ಹೂಸ್ಟನ್, ಮೇ 21– ಚಂದ್ರ ಗ್ರಹದ ಗುರುತ್ವಾಕರ್ಷಣೆಗೆ ಒಳಗಾಗಿ ‘ಭಾರಿ ಹರ್ಷಚಿತ್ತ’ದಿಂದಿರುವ ಅಪೊಲೊ 10ರ ಅಂತರಿಕ್ಷ ಯಾತ್ರಿಗಳು ಇಂದು ಚಂದ್ರ ಗ್ರಹದತ್ತ ಸಾಗಿ ಚಂದ್ರ ಗ್ರಹದ ಸುತ್ತ ತಿರುಗುವ ಅತ್ಯಂತ ಅಪಾಯಕಾರಿ ಕಾರ್ಯಕ್ರಮಕ್ಕೆ ಸಜ್ಜಾಗಿದ್ದರು.

ಮಧ್ಯಾಹ್ನ 12.16ರ ವೇಳೆಯಲ್ಲಿ (ಭಾರತೀಯ ಕಾಲಮಾನ) ಅವರು ಚಂದ್ರ ಗ್ರಹಕ್ಕೆ 38,710 ಮೈಲಿ ದೂರದಲ್ಲಿದ್ದು ಗಂಟೆಗೆ 2,590 ಮೈಲಿ ವೇಗದಲ್ಲಿ ಸಂಚರಿಸುತ್ತಿದ್ದರು.

ಅಸಾಧಾರಣ ವೃತ್ತಪತ್ರಿಕೆ

ನವದೆಹಲಿ, ಮೇ 21– ವೃತ್ತಪತ್ರಿಕೆಗಳಲ್ಲೇ ಬಹುಶಃ ಅತ್ಯಂತ ಅನುಪಮವಾದ ವೃತ್ತಪತ್ರಿಕೆಯೊಂದು ಪ್ಯಾರಿಸ್‌ನಲ್ಲಿ ಮುದ್ರಿತವಾಗುತ್ತಿದೆ.

ಆ ಪತ್ರಿಕೆಯಲ್ಲಿ ಛಾಯಾಚಿತ್ರಗಳಿರುವುದಿಲ್ಲ. ಅದರ ಪುಟಗಳಲ್ಲಿ ಜಾಹೀರಾತುಗಳಿರುವುದು ತೀರಾ ಅಪರೂಪ. ಇಷ್ಟಾದರೂ ಆ ಪತ್ರಿಕೆಯ ಯಶಸ್ಸಿನ ಭರವಸೆಯಿದೆ.

ಅದರಲ್ಲಿ ಪ್ರಕಟವಾಗುವ ಸುದ್ದಿಗಳು ವಿದ್ವತ್ಪೂರ್ಣ ಪ್ರಬಂಧಗಳಂತಿರುತ್ತವೆ. 

ಗೋಹತ್ಯೆ ನಿಷೇಧಕ್ಕೆ ಒತ್ತಾಯ ಪ್ರಧಾನಮಂತ್ರಿ ನಿವಾಸದ ಮುಂದೆ ಜನಸಂಘ ಸದಸ್ಯರ ಉಪವಾಸ ಮುಷ್ಕರ

ನವದೆಹಲಿ, ಮೇ 21– ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಒತ್ತಾಯಪಡಿಸಲು, ದೆಹಲಿಯಲ್ಲಿನ ಜನಸಂಘದ ಸಂಸತ್ ಸದಸ್ಯರು ದೆಹಲಿ ಮೆಟ್ರೊಪಾಲಿಟನ್ ಕೌನ್ಸಿಲ್ ಮತ್ತು ಪುರಸಭಾ ಕಾರ್ಪೊರೇಷನ್‌ನಲ್ಲಿರುವ ಜನಸಂಘದ ಸದಸ್ಯರು ಪ್ರಧಾನಮಂತ್ರಿಯವರ ನಿವಾಸದ ಮುಂದೆ ಇಂದು 24 ಗಂಟೆಗಳ ಉಪವಾಸ ಮುಷ್ಕರವನ್ನು ಆರಂಭಿಸಿದರು.

ದೆಹಲಿ ಜನಸಂಘದ ಅಧ್ಯಕ್ಷ ಡಾ. ಮಹಾವೀರ್ ಅವರು ಈ ಮುಷ್ಕರದ ನಾಯಕತ್ವ ವಹಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !