50 ವರ್ಷಗಳ ಹಿಂದೆ- 25-5-1969

ಗುರುವಾರ , ಜೂನ್ 27, 2019
29 °C

50 ವರ್ಷಗಳ ಹಿಂದೆ- 25-5-1969

Published:
Updated:

ಭೂಗ್ರಹದತ್ತ ಅಪೊಲೊ ಸಾಹಸಿಗಳು

ಸ್ಪೇಸ್ ಸೆಂಟರ್ (ಹೂಸ್ಟನ್‌) ಮೇ 24– ಚಂದ್ರನಲ್ಲಿ ಮಾನವ ಇಳಿಯುವ ಜಾಗವನ್ನು ಪತ್ತೆಹಚ್ಚುವ ಪೂರ್ವ ಪ್ರಯೋಗವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದ ಅಪೊಲೊ–10 ನೌಕೆಯ ಗಗನಯಾತ್ರಿಗಳು ಚಂದ್ರಕಕ್ಷೆಯನ್ನು ತೊರೆದು ಇಂದು ಭೂ ಗ್ರಹದತ್ತ ತಮ್ಮ ದೀರ್ಘ ಪ್ರಯಾಣವನ್ನು ಆರಂಭಿಸಿದ್ದಾರೆ.

ಚಂದ್ರನ ಗುರುತ್ವಾಕರ್ಷಣೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ಅಪೊಲೊ–10ರ ಎಂಜಿನ್ನನ್ನು ಭಸ್ಮಗೊಳಿಸಿ ಟಾಮ್ ಸ್ಟಾಫರ್ಡ್ ಜಾನ್, ಯಂಗ್, ಯುಜೀನ್ ಸೆರ್ನನ್ ಅವರು ಇಂದು ಬೆಳಗಿನ ಜಾವ 3.55 ಗಂಟೆಗೆ ಭೂ ಗ್ರಹದತ್ತ 54 ಗಂಟೆಗಳ ಪ್ರಯಾಣ ಆರಂಭಿಸಿದರು.

ಬಾಹ್ಯಾಕಾಶ ಯಾತ್ರಿಕರಿಗೆ ಕೆಮ್ಮು

ಹೂಸ್ಟನ್‌, ಮೇ 24– ಕಳೆದ ಮೂರು ದಿನಗಳಿಂದ ತಮಗೆ ಮೈತುರಿ, ಸೀನು, ಕೆಮ್ಮು ಉಂಟಾಗಿದೆಯೆಂದು ಅಪೊಲೊ–10ರ ಬಾಹ್ಯಾಂತರಿಕ್ಷ ಯಾತ್ರಿಗಳು ನಿನ್ನೆ ಮೊತ್ತಮೊದಲ ಬಾರಿಗೆ ತಿಳಿಸಿದರು.

ಬಾಹ್ಯಾಕಾಶಕೋಶದಲ್ಲಿ ಒಡೆದಿರುವ ಫೈಬರ್‌ಗ್ಲಾಸ್‌ ಚೂರುಗಳಿಂದ ಅವರಿಗೆ ಈ ಅವಸ್ಥೆ ಉಂಟಾಗಿದೆ.

ಬಿನ್ನಿಮಿಲ್ ಲಾಕೌಟ್ ತೆಗೆಯುವ ಸಂಧಾನ ಮಾತುಕತೆ ವಿಫಲ

ಬೆಂಗಳೂರು, ಮೇ 24– ಬಿನ್ನಿಮಿಲ್ಸ್‌ನ ಲಾಕೌಟ್‌ ತೆಗೆಯುವ ಸಂಬಂಧದಲ್ಲಿ ಅಸಿಸ್ಟೆಂಟ್ ಕಾರ್ಮಿಕ ಕಮೀಷನರ್ ಶ್ರೀ ಐ. ನಾಗಪ್ಪ ಅವರ ಮುಂದೆ ಇಂದು ನಡೆದ ಸಂಧಾನದ ಮಾತುಕತೆಗಳು ವಿಫಲವಾದವು.

ಬಿನ್ನಿಮಿಲ್ಸ್‌ ನೌಕರರ ಸಂಘದ ಉಪಾಧ್ಯಕ್ಷ ಶ್ರೀ ಎಸ್. ವೆಂಕಟರಾಂ ಹಾಗೂ ಕಾರ‍್ಯದರ್ಶಿ ಶ್ರೀ ಮುನಿರತ್ನಂ ಸಂಧಾನದ ಮಾತುಕತೆಗಳಲ್ಲಿ ಭಾಗವಹಿಸಿದ್ದರು. ಕಾರ್ಮಿಕ ಸಂಘಕ್ಕೆ ತಾನು ಮನ್ನಣೆ ನೀಡಿಲ್ಲವೆಂದು ಆಡಳಿತ ವರ್ಗದವರು ಕಾರ್ಮಿಕ ಅಸಿಸ್ಟೆಂಟ್ ಕಮೀಷನರಿಗೆ ಪತ್ರ ಬರೆದಿದ್ದರು. ಆಡಳಿತ ವರ್ಗದ ಪ್ರತಿನಿಧಿಗಳು ಸಂಧಾನ ಮಾತುಕತೆಗಳಿಗೆ
ಹಾಜರಾಗಲಿಲ್ಲ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !