ಗುರುವಾರ, 5–6–1969

ಸೋಮವಾರ, ಜೂನ್ 24, 2019
30 °C
ಗುರುವಾರ

ಗುರುವಾರ, 5–6–1969

Published:
Updated:

ಹೈದರಾಬಾದ್–ಸಿಕಂದರಾಬಾದ್‌ಗಳಲ್ಲಿ 15 ಕಡೆ ಗೋಲಿಬಾರ್; 9 ಸಾವು

ಹೈದರಾಬಾದ್, ಜೂನ್ 4– ತೆಲಂಗಾಣ ಚಳವಳಿಗೆ ಸಂಬಂಧಿಸಿದಂತೆ ಮೂರನೇ ದಿನವಾದ ಇಂದು ಸಹ ಹೈದರಾಬಾದ್ ಮತ್ತು ಸಿಕಂದರಾಬಾದ್ ನಗರಗಳಲ್ಲಿ ಹಿಂಸಾಚಾರ ಹಾಗೂ ಬೆಂಕಿ ಹಚ್ಚುವ ಪ್ರಕರಣಗಳು ನಡೆದು, ಸುಮಾರು ಹದಿನೈದು ಬಾರಿ ಗೋಲಿಬಾರ್ ಮಾಡಿದ ಪರಿಣಾಮವಾಗಿ ಕನಿಷ್ಠ ಒಂಬತ್ತು ಮಂದಿ ಸತ್ತು, 41 ಮಂದಿ ಗಾಯಗೊಂಡರು.

ಇಂದು ರಾತ್ರಿ 9 ಗಂಟೆಯಿಂದ 33 ಗಂಟೆಗಳ ಕಾಲ ಹೈದರಾಬಾದ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ಹೈದರಾಬಾದಿಗೆ ಪ್ರಧಾನಿ ಹಠಾತ್ ಆಗಮನ

ಹೈದರಾಬಾದ್, ಜೂನ್ 4– ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ಇಂದು ರಾತ್ರಿ ಇಲ್ಲಿಗೆ ಆಗಮಿಸಿದರು.

ತೆಲಂಗಾಣ ಚಳವಳಿಯ ಪ್ರಖರತೆ ಹೆಚ್ಚುತ್ತಿರುವುದೇ ಇಂದಿರಾ ಗಾಂಧಿಯವರ ಅಪ್ರಕಟಿತ ಭೇಟಿಗೆ ಮುಖ್ಯ ಕಾರಣ. 

ಅಸ್ಪೃಶ್ಯತೆ: ಪುರಿ ಶ್ರೀ ವಿರುದ್ಧ ಮೊಕದ್ದಮೆ ವಜಾ

ಪಟನಾ, ಜೂನ್ 4– ಪುರಿ ಜಗದ್ಗುರು ಶ್ರೀ ಶಂಕರಾಚಾರ್ಯ ಅವರ ಮೇಲೆ ಹೂಡಿದ್ದ ಮೊಕದ್ದಮೆಯನ್ನು ಇಲ್ಲಿಯ ಸಬ್ ಡಿವಿಜನಲ್ ಆಫೀಸರ್ ಶ್ರೀ ಗಣೇಶಪ್ರಸಾದ್ ಅವರು ಇಂದು ವಜಾ ಮಾಡಿದರು.

ಆಪಾದಿತರಾದ ಪುರಿ ಜಗದ್ಗುರುಗಳನ್ನು ನ್ಯಾಯಾಲಯಕ್ಕೆ ಕರೆಸುವುದಕ್ಕೆ ಹಾಗೂ ಅವರ ಮೇಲೆ ಹೂಡಿರುವ ಮೊಕದ್ದಮೆಯನ್ನು ಮುಂದುವರಿಸುವುದಕ್ಕೆ ಯಾವ ಆಧಾರವೂ ಇಲ್ಲವೆಂದು ತನಿಖಾ ಮ್ಯಾಜಿಸ್ಟ್ರೇಟ್ ಶ್ರೀ ಎಸ್.ಎನ್. ಸಹಾಯ್ ಅವರು ತಮ್ಮ ವರದಿಯಲ್ಲಿ ತೀರ್ಪು ಕೊಟ್ಟಿರುವುದೇ ಪುರಿ ಶ್ರೀಗಳ ಮೇಲಿನ ಮೊಕದ್ದಮೆ ವಜಾ ಆಗುವುದಕ್ಕೆ ಕಾರಣ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !