ಸೋಮವಾರ, 9–6–1969

ಸೋಮವಾರ, ಜೂನ್ 17, 2019
22 °C
ಸೋಮವಾರ

ಸೋಮವಾರ, 9–6–1969

Published:
Updated:

ವೃತ್ತಿ ಶಿಕ್ಷಣ: ಸಚಿವ ಸಂಪುಟ ನಿರ್ಧಾರ: ರಾಜ್ಯದ ವಿದ್ಯಾರ್ಥಿಗಳಿಗೆ ಒಟ್ಟು ಶೇ 70 ಸೀಟು

ಬೆಂಗಳೂರು, ಜೂನ್ 8– ವೃತ್ತಿಪರ ಕಾಲೇಜುಗಳಿಗೆ ಸೀಟು ಹಂಚಿಕೆಯ ಬಗ್ಗೆ ನೀತಿ ನಿಯಮಗಳನ್ನು ರೂಪಿಸಿದ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯು ವೈದ್ಯಕೀಯ ದಂತ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಇರುವ ಒಟ್ಟು ಸೀಟುಗಳಲ್ಲಿ ಶೇ 50 ರಷ್ಟನ್ನು ಅರ್ಹತಾಪಟ್ಟಿ ಆಧರಿಸಿ ಮತ್ತು ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಆಯೋಗದ ಶಿಫಾರಸಿನ ಅನ್ವಯ ಕರ್ನಾಟಕದ ವಿದ್ಯಾರ್ಥಿಗಳಿಗೇ ನೀಡಬೇಕೆಂಬ ನಿರ್ಧಾರ ಕೈಗೊಂಡಿತು.

 ಉಳಿದ ಶೇ 50 ರಷ್ಟು ಸೀಟುಗಳಲ್ಲಿ ಶೇ 15 ರಷ್ಟು ಅಖಿಲ ಭಾರತ ಪರೀಕ್ಷೆಯನ್ನು ತೆಗೆದುಕೊಂಡ ಕರ್ನಾಟಕದ ಹೊರಗಿನ ವಿದ್ಯಾರ್ಥಿಗಳಿಗೆ ಅರ್ಹತಾ ಪಟ್ಟಿಯ ಆಧಾರದ ಮೇಲೆ ಕೊಡಬೇಕು. ಶೇ 15 ರಷ್ಟು ಸೀಟುಗಳನ್ನು ಅನಿವಾಸಿ ಭಾರತೀಯರಿಗೆ, ಉಳಿದ ಶೇ 20 ರಷ್ಟು ಸೀಟುಗಳನ್ನು ಹೆಚ್ಚುವರಿ ಶುಲ್ಕದಲ್ಲಿ ಕರ್ನಾಟಕದವರಿಗೇ ನೀಡಬೇಕು ಎಂದು ತೀರ್ಮಾನಿಸಿತು.

ಚುನಾವಣೆ ಮಸೂದೆ: ಬೆಜೆಪಿ, ಸಿಪಿಐ ಶೇಷನ್ ಪರ

ನವದೆಹಲಿ, ಜೂನ್ 8 (ಯುಎನ್‌ಐ, ಪಿಟಿಐ)– ಮುಖ್ಯ ಚುನಾವಣಾ ಆಯುಕ್ತರ ಅಧಿಕಾರ ಮೊಟಕು ಮಾಡಿ ಎಲ್ಲ ಆಯುಕ್ತರಿಗೂ ಸಮಾನ ಅಧಿಕಾರ ನೀಡುವ ಚುನಾವಣಾ ಸುಧಾರಣೆ ಕುರಿತ ಸಂವಿಧಾನ ತಿದ್ದುಪಡಿ ಮಸೂದೆಯನ್ನು ವಿರೋಧಿಸಲು ಸಿಪಿಐ ಇಂದು ನಿರ್ಧರಿಸಿತು. ಈ ಮಧ್ಯೆ ಈ ಮಸೂದೆಯನ್ನು ಬಿಜೆಪಿ ವಿರೋಧಿಸುವುದು ಎಂದು ಪಕ್ಷದ ಅಧ್ಯಕ್ಷ ಎಲ್.ಕೆ. ಅಡ್ವಾಣಿ ಇಂದು ಬರೋಡಾದಲ್ಲಿ ಪುನರುಚ್ಚರಿಸಿದರು.

ಬುದ್ಧ ಭಿಕ್ಷೆ ಎತ್ತಿದ ಮಣ್ಣಿನ ಮಡಕೆ ಪತ್ತೆ

ಬೆಂಗಳೂರು, ಜೂನ್ 8– ‘ಆಸೆಯೇ ದುಃಖಕ್ಕೆ ಮೂಲ’ ಎಂಬ ಸತ್ಯವನ್ನು ಅರಿತು ಸುಖ–ಸೋಪಾನದ ಬದುಕಿನ ಜತೆಗೆ ಸಾಮ್ರಾಜ್ಯವನ್ನೂ ತ್ಯಾಗಮಾಡಿ ಮಾನವೀಯತೆಯ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಅಲೆದಾಡಿದ ಗೌತಮ ಬುದ್ಧ ಭಿಕ್ಷೆ ಕೇಳಲು ಬಳಸುತ್ತಿದ್ದ ಎನ್ನಲಾದ ಮಣ್ಣಿನ ಮಡಕೆಯೊಂದು ಸುಮಾರು ಎರಡೂವರೆ ಸಾವಿರ ವರ್ಷದ ನಂತರ ಸಿಕ್ಕಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !