ಶುಕ್ರವಾರ 4–7–1969

ಗುರುವಾರ , ಜೂಲೈ 18, 2019
28 °C

ಶುಕ್ರವಾರ 4–7–1969

Published:
Updated:

ಪ್ರತ್ಯೇಕ ತೆಲಂಗಾಣ ಬೇಡಿಕೆಗೆ ತಿರಸ್ಕಾರ

ನವದೆಹಲಿ, ಜುಲೈ 3– ಪ್ರತ್ಯೇಕ ತೆಲಂಗಾಣ ಬೇಡಿಕೆಯನ್ನು ಕಾಂಗ್ರೆಸ್‌ ಪಕ್ಷದ ಕೇಂದ್ರ ಪಾರ್ಲಿಮೆಂಟರಿ ಮಂಡಲಿ ಇಂದು ತಿರಸ್ಕರಿಸಿತು. ಈಗಿರುವ ಭಾಷಾವಾರು ರಾಜ್ಯಗಳ ವಿಭಜನೆ ಕೂಡದು ಎಂಬ ರಾಜಕೀಯ ನೀತಿ ನಿರ್ಧಾರ ತೆಗೆದು
ಕೊಳ್ಳಲಾಯಿತು.

ತೆಲಂಗಾಣ ಬಿಕ್ಕಟ್ಟು ಚರ್ಚಿಸಲು ಇಂದು ಸೇರಿದ ತುರ್ತು ಸಭೆ, ಮುಖ್ಯಮಂತ್ರಿಬ್ರಹ್ಮಾನಂದರೆಡ್ಡಿ ಅವರ ರಾಜೀನಾಮೆ ಬಗೆಗೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲಿಲ್ಲ. ಅದನ್ನು ಜುಲೈ 6ರಂದು ಹೈದ್ರಾಬಾದಿನಲ್ಲಿ ಸೇರಲಿರುವ ರಾಜ್ಯ ಶಾಸಕರ ಪಕ್ಷದ ನಿರ್ಧಾರಕ್ಕೆ ಬಿಟ್ಟುಕೊಟ್ಟಿತು. 

ರಷ್ಯಕ್ಕೆ ಭಾರತದ ಚದುರಂಗ

ಬೆಂಗಳೂರು, ಜುಲೈ 3– ರಾಳದ ಮೆರುಗಿನ, ಕರಕುಶಲ ಕಲೆಯ, ಭಾರತದ ಚದುರಂಗದ ಆಟದ ಸಾಮಗ್ರಿಗಳು ರಷ್ಯನ್ನರ ಒಲವನ್ನು ಸಂಪಾದಿಸಿವೆ. ಬಣ್ಣದ ಕೋಣೆಗಳ ಮಿನುಗುವ ಫಲಕ, ಅದಕ್ಕೊಪ್ಪುವ ಕಾಯಿಗಳುಳ್ಳ 25 ಮಾದರಿಗಳನ್ನು ಒಪ್ಪಿಗೆಗಾಗಿ ರಷ್ಯಕ್ಕೆ ಕಳುಹಿಸಿ ಕೊಡಲಾಗಿದೆ. ಅವರು ಸುಮಾರು 8,000 ಸೆಟ್ಟುಗಳನ್ನು ಕೊಳ್ಳುವ ನಿರೀಕ್ಷೆಯಿದ್ದು, ಪೂರೈಕೆ ಬಗ್ಗೆ ಒಪ್ಪಂದವಾದ ಕೂಡಲೇ ಚನ್ನಪಟ್ಟಣದ ಕರಕುಶಲ ಕರ್ಮಿಗಳಿಗೆ ಈ ಕೆಲಸಒಪ್ಪಿಸಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !