ಸೋಮವಾರ, 14–4–1969

ಶನಿವಾರ, ಏಪ್ರಿಲ್ 20, 2019
32 °C
1969

ಸೋಮವಾರ, 14–4–1969

Published:
Updated:

ಚಿಕ್ಕ ರೈತರಿಗೆ ಪುಟ್ಟ ಚೀಲ
ನವದೆಹಲಿ, ಏ. 13– ಬೀಜಗಳು, ರಾಸಾಯನಿಕ ಗೊಬ್ಬರ, ಕೀಟನಾಶಕಗಳು ಮತ್ತು ಅವುಗಳನ್ನು ಬಳಸುವ ಬಗೆ ಹೇಗೆ ಎಂಬುದನ್ನು ವಿವರಿಸುವ ಪುಸ್ತಿಕೆ. ಇವುಗಳನ್ನೊಳಗೊಂಡ ‘ಪುಟ್ಟ ಚೀಲ’ವೊಂದನ್ನು ದೇಶದಲ್ಲಿನ ಚಿಕ್ಕ ರೈತರಿಗೆ ಸದ್ಯದಲ್ಲೇ ಒದಗಿಸಲಾಗುವುದು.

ಕೃಷಿ ಸಂಶೋಧನಾ ಸಂಸ್ಥೆಯ ಭಾರತೀಯ ಮಂಡಲಿಯ ಆಶ್ರಯದಲ್ಲಿ ಕಳೆದ ವಾರ ಪ್ರತ್ಯಕ್ಷವಾಗಿ ಕೃಷಿ ಮಾಡಿ ತೋರಿಸುವ ವಿಧಾನವನ್ನು ಪ್ರದರ್ಶಿಸಿದಾಗ ಈ ಶಿಫಾರಸನ್ನು ಮಾಡಲಾಯಿತು.

ಸಣ್ಣಪುಟ್ಟ ರೈತರಿಗೆ ಇಂತಹ ಪುಟ್ಟ ಚೀಲಗಳನ್ನು ಸರಬರಾಜು ಮಾಡುವ ವ್ಯವಸ್ಥೆಯನ್ನು ಅಂತರ ರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಯು ಈಗಾಗಲೇ ಫಿಲಿಫೆನ್ಸ್‌ನಲ್ಲಿ ಪ್ರಾರಂಭಿಸಿದೆ.

ಭಾರತದಲ್ಲಿ ಈ ಯೋಜನೆಯನ್ನು ಮೊದಲು ಕೆಲವು ಕೇಂದ್ರಗಳಲ್ಲಿ ಪ್ರಾರಂಭಿಸಲಾಗುವುದು. ಅನಂತರ ದೇಶಾದ್ಯಂತ ವಿಸ್ತರಿಸಲಾಗುವುದು–ಪಿ.ಟಿ.ಐ.

ವಾಗ್ದಂಡನೆ ವಿಧಿಸಲು ಪಕ್ಷಕ್ಕೆ ಸಾಧ್ಯವಿಲ್ಲ: ಚಂದ್ರಶೇಖರ್
ಚಂಡಿಗಢ, ಏ. 13– ರಾಜ್ಯಸಭೆಯಲ್ಲಿ ತಾವು ಮಾಡಿದ ಭಾಷಣಕ್ಕಾಗಿ ಕಾಂಗ್ರೆಸ್ ಪಕ್ಷವು ತಮಗೆ ವಾಗ್ಡಂಡನೆ ವಿಧಿಸುವುದು ಸಾಧ್ಯವಿಲ್ಲವೆಂದು ಸಂಸತ್ತಿನ ಕಾಂಗ್ರೆಸ್ ಸದಸ್ಯರೂ ‘ಯಂಗ್ ಟರ್ಕ್’ನ ಗುಂಪಿನ ನಾಯಕರೂ ಆದ ಶ್ರೀ ಚಂದ್ರಶೇಖರ್ ಇಂದು ಇಲ್ಲಿ ತಿಳಿಸಿದರು.

ಸುದ್ದಿಗಾರರೊಡನೆ ಮಾತನಾಡುತ್ತಿದ್ದ ಅವರು ಸಂಸತ್ತಿನಲ್ಲಿ ಮಾಡಿದ ಭಾಷಣಗಳಿಗಾಗಿ ಮುಖ್ಯವಾಗಿ ಸಚಿವರೊಬ್ಬರ ವಿರುದ್ಧ ಆಪಾದನೆಗಳಿಗೆ ಸಂಬಂಧಿಸಿದ ವಿಷಯವನ್ನು ಕುರಿತ ಭಾಷಣಗಳಿಗಾಗಿ ಇದುವರೆಗೆ ದೇಶದಲ್ಲಿನ ಯಾವುದೇ ರಾಜಕೀಯ ಪಕ್ಷವೂ ಯಾವ ಸದಸ್ಯರ ವಿರುದ್ಧವೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ತಿಳಿಸಿದರು.

ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ವಾಜಪೇಯಿ ವಿರೋಧ
ಮಧುರೆ, ಏ. 13– ರಾಷ್ಟ್ರದಲ್ಲಿಯ ರಾಜ್ಯಗಳನ್ನು ಮತ್ತೆ ಒಡೆಯುವ ಯಾವುದೇ ಪ್ರಯತ್ನವನ್ನು ಜನಸಂಘದ ನಾಯಕ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ವಿರೋಧಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು  ‘ಆಂಧ್ರ ಪ್ರದೇಶದಲ್ಲಿ ಪ್ರತ್ಯೇಕ ತೆಲ್ಲಂಗಾಣ ರಾಜ್ಯ ರಚಿಸುವುದನ್ನು ಜನಸಂಘ ವಿರೋಧಿಸುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !