ಶನಿವಾರ, 3–8–1968

7
ವಾರ

ಶನಿವಾರ, 3–8–1968

Published:
Updated:

ಬ್ಯಾಂಕ್ ಮಸೂದೆ ಚರ್ಚೆ ಮುಂದಕ್ಕೆ: ವಿರೋಧ ಪಕ್ಷಗಳ ವಾದಕ್ಕೆ ವಿಜಯ

ನವದೆಹಲಿ, ಆ. 2– ಬ್ಯಾಂಕಿಂಗ್ ಶಾಸನ (ತಿದ್ದುಪಡಿ) ಮಸೂದೆಯನ್ನು ಚರ್ಚೆಗೆ ಎತ್ತಿಕೊಳ್ಳುವ ಕ್ರಮಬದ್ಧತೆ ಬಗ್ಗೆ ಎರಡು ದಿನಗಳು ತಿಕ್ಕಾಟ ನಡೆದು ಲೋಕಸಭೆಯಲ್ಲಿ ಇಂದು ವಿರೋಧ ಪಕ್ಷಗಳ ವಾದಕ್ಕೆ ವಿಜಯ ಲಭಿಸಿತು.

ಬ್ಯಾಂಕುಗಳ ಮೇಲೆ ಸಾಮಾಜಿಕ ನಿಯಂತ್ರಣ ತರಲು ಅಪೇಕ್ಷಿಸುವ ಈ ಮಸೂದೆ ಚರ್ಚೆಯನ್ನು ಡೆಪ್ಯುಟಿ ಸ್ಪೀಕರ್‌ ಆರ್‌.ಕೆ. ಖಾಡೀಲ್ಕರ್‌ ಮುಂದಕ್ಕೆ ಹಾಕಿದರು.

ಮತ್ತೊಂದು ತೆಲಂಗಾಣ ಹೋರಾಟ ನಾಗಿರೆಡ್ಡಿ ಬೆದರಿಕೆ

ಹೈದರಾಬಾದ್, ಆ. 2– ಕೈಬಿಟ್ಟು ಹೋಗಿರುವ ಸಾಧನೆಗಳನ್ನು ಮತ್ತೆ ಗಳಿಸುವುದಕ್ಕೆ ಮತ್ತೊಮ್ಮೆ ತೆಲಂಗಾಣ ಹೋರಾಟ ಹೂಡುವುದಾಗಿ ಉಗ್ರಗಾಮಿ ಕಮ್ಯುನಿಸ್ಟ್ ನಾಯಕ
ಶ್ರೀ ಟಿ. ನಾಗಿರೆಡ್ಡಿ ಅವರು ಇಂದು ಬೆದರಿಕೆ ಹಾಕಿದ್ದಾರೆ.

‘1948–50 ರಲ್ಲಿ ಸಶಸ್ತ್ರ ಹೋರಾಟಕ್ಕೆ ಕಮ್ಯುನಿಸ್ಟ್ ಪಕ್ಷದ ಈಗಿನ ಪರಿಷ್ಕರಣಾವಾದಿ ನಾಯಕತ್ವದಿಂದ ಮೋಸವಾಯಿತು. ಆದರೆ ಅದು ವಿಫಲವಾಗುವುದಿಲ್ಲ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರಾಜಧನ ರದ್ದಿಗೆ ಸರ್ಕಾರದ ನಿರ್ಧಾರ

ನವದೆಹಲಿ, ಆ. 2– ಮಾಜಿ ರಾಜರಿಗೆ ನೀಡಲಾಗುತ್ತಿರುವ ವೀಶೇಷ ಹಕ್ಕುಬಾಧ್ಯತೆ ಹಾಗೂ ರಾಜಧನ ರದ್ದು ಮಾಡುವುದನ್ನು ಕೇಂದ್ರ ಸರ್ಕಾರವು ತತ್ವಶಃ ನಿರ್ಧರಿಸಿದೆ ಎಂದು ಕೇಂದ್ರ ಗೃಹಮಂತ್ರಿ ಶ್ರೀ ವೈ.ಬಿ. ಚವಾಣ್ ಅವರು ಇಂದು ಲೋಕಸಭೆಗೆ ನೀಡಿದ ಲಿಖಿತ ರೂಪದ ಉತ್ತರದಲ್ಲಿ ತಿಳಿಸಿದರು.

ಒಂದು ವರ್ಷ ಕಳೆದರೂ ಮಹಾಜನ್ ಶಿಫಾರ್ಸ್ ಬಗ್ಗೆ ಸರ್ಕಾರದ ನಿರ್ಧಾರವಿಲ್ಲ

ನವದೆಹಲಿ, ಆ. 2– ಮೈಸೂರು – ಮಹಾರಾಷ್ಟ್ರ–ಕೇರಳ ಗಡಿ ವಿವಾದದ ಬಗ್ಗೆ ದಿವಂಗತ ಶ್ರೀ ಮಹಾಜನ್ ಅವರು ವರದಿ ಸಲ್ಲಿಸಿ ಸುಮಾರು ಒಂದು ವರ್ಷವಾದರೂ ಕೇಂದ್ರ ಸರ್ಕಾರವು ಶ್ರೀ ಮಹಾಜನ್‌ರ ಶಿಫಾರಸುಗಳ ಬಗ್ಗೆ ಇನ್ನೂ ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !