ಭಾನುವಾರ, 4–8–1968

7

ಭಾನುವಾರ, 4–8–1968

Published:
Updated:
Deccan Herald

ಲೋಕಸಭೆಗೆ ಫರ್ನಾಂಡೀಸ್ ರಾಜೀನಾಮೆ

ಮುಂಬಯಿ, ಆ. 3– ಮುಂಬಯಿ ದಕ್ಷಿಣ ಕ್ಷೇತ್ರದಲ್ಲಿ ಶ್ರೀ ಎಸ್.ಕೆ. ಪಾಟೀಲರನ್ನು ಪರಾಭವಗೊಳಿಸಿದ ಎಸ್.ಎಸ್.ಪಿ. ನಾಯಕ ಶ್ರೀ ಜಾರ್ಜ್ ಫರ್ನಾಂಡೀಸ್ ಅವರು ತಮ್ಮ ಲೋಕಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಜನರ ನಡುವೆ ದುಡಿಯಲು ಆಲೋಚಿಸುತ್ತಿದ್ದಾರೆ.

ಮಹಾಜನ್‌ ವರದಿ ಬದಿಗಿಟ್ಟರೆ ಉಗ್ರ ವಿರೋಧ: ಕೇಂದ್ರ ಸರ್ಕಾರಕ್ಕೆ ರಾಜ್ಯದ ಬಿಚ್ಚು ಮಾತು

ಬೆಂಗಳೂರು, ಆ.3- ಮಹಾಜನ್‌ ವರದಿಯನ್ನು ಬದಿಗೊತ್ತಲು ಪ್ರಯತ್ನಿಸಿದರೆ ರಾಜ್ಯ ಸರ್ಕಾರ ಅದನ್ನು ಖಡಾಖಂಡಿತವಾಗಿ ವಿರೋಧಿಸಿ, ಪ್ರತಿಭಟಿಸುವುದಲ್ಲದೆ, ಇಡೀ ಕರ್ನಾಟಕದಾದ್ಯಂತ ಉಗ್ರ ಚಳವಳಿ ಖಂಡಿತ.

ಇದು ರಾಜ್ಯ ಸರ್ಕಾರ ಕೇಂದ್ರಕ್ಕೆ ಇತ್ತಿರುವ ಎಚ್ಚರಿಕೆ.

ಬಡ ಮಕ್ಕಳಿಗೆ, ಗರ್ಭಿಣಿಯರಿಗೆ ಆಹಾರ ಹಂಚಿಕೆ

ಬೆಂಗಳೂರು, ಆ. 3– ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಬಡಮಕ್ಕಳು, ಗರ್ಭಿಣಿಯರು ಮುಂತಾದವರಿಗೆ ಆಹಾರ ಪದಾರ್ಥಗಳನ್ನು ಹಂಚುವ ಯೋಜನೆಗೆ ಒಳಪಟ್ಟಿರುವವರ ಸಂಖ್ಯೆ ಅಕ್ಟೋಬರ್ ವೇಳೆಗೆ 9,50,000ಕ್ಕೆ ಏರಲಿದೆ.

ವಿಧಾನ ಸೌಧದ ಮೇಲೆ ಸಚಿವಾಲಯ ನಿರ್ಮಾಣ: 1 ತಿಂಗಳಲ್ಲಿ ನಿರ್ಧಾರ

ಬೆಂಗಳೂರು, ಆ. 3– ವಿಧಾನ ಸೌಧದ ಕೊನೆ ಅಂತಸ್ತಿನಲ್ಲಿ ಎಲ್ಲಾ ಸಚಿವರಿಗೂ ಕಚೇರಿಗಳನ್ನು ಒದಗಿಸಿ ಅದನ್ನು ಸಚಿವಾಲಯವನ್ನಾಗಿ ಪರಿವರ್ತಿಸುವ ಯೋಜನೆಯು ಇನ್ನೊಂದು ತಿಂಗಳೊಳಗಾಗಿ ಈಡೇರಲಿದೆಯೆಂದು ಲೋಕೋಪಯೋಗಿ ಉಪಸಚಿವ ಶ್ರೀ ಬಿ.ವಿ. ಮಾಗಾವಿ ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !