ಇತಿಹಾಸದ ಈ ದಿನ: ಗುರುವಾರ, 8–8–1968

7

ಇತಿಹಾಸದ ಈ ದಿನ: ಗುರುವಾರ, 8–8–1968

Published:
Updated:
Deccan Herald

ಕೃಷ್ಣಾ ನೀರು ವಿವಾದ: ಶೀಘ್ರದಲ್ಲೇ ಮೂವರು ನ್ಯಾಯಾಧೀಶರ ಪಂಚಾಯಿತಿ ಮಂಡಲಿಗೆ

ನವದೆಹಲಿ, ಆ. 7– ಕೃಷ್ಣಾ–ಗೋದಾವರಿ ನದಿ ನೀರು ವಿವಾದವನ್ನು ಸೇವೆಯಲ್ಲಿರುವ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ಪಂಚಾಯಿತಿಗೆ ಶೀಘ್ರದಲ್ಲೇ ಒಪ್ಪಿಸಲಾಗುವುದೆಂದು ನೀರಾವರಿ ಮತ್ತು ವಿದ್ಯುತ್ ಸಚಿವ ಡಾ. ಕೆ.ಎಲ್. ರಾವ್ ಅವರು ಇಂದು ರಾಜ್ಯಸಭೆಯಲ್ಲಿ ಹೇಳಿದರು.

ಲಂಡನ್ನಿನಲ್ಲಿ ರಾಜ್ಯ ವಾಣಿಜ್ಯ ಪ್ರತಿನಿಧಿ: ಮುಂದುವರಿಕೆಗೆ ಕೇಂದ್ರ ವಿರೋಧವಿಲ್ಲ
ನವದೆಹಲಿ, ಆ. 7– ಲಂಡನ್ನಿನಲ್ಲಿ ಮೈಸೂರು ವಾಣಿಜ್ಯ ಪ್ರತಿನಿಧಿಯನ್ನು ಪರಿಮಿತ ಅವಧಿವರೆಗೆ ಮುಂದುವರಿಸುವುದಕ್ಕೆ ಕೇಂದ್ರ ಸರಕಾರ ಒಪ್ಪಬಹುದು.

ಈ ವ್ಯವಸ್ಥೆಯನ್ನು ಎಂದಿಗೂ ಮುಂದುವರೆಸಬಾರದೆಂಬ ಪ್ರಬಲ ಅಭಿಪ್ರಾಯವಿದೆ. ಆದರೆ ಮೈಸೂರು ಸರಕಾರಕ್ಕೆ ಅಹಿತ ಉಂಟು ಮಾಡುವಂಥ ಯಾವುದೇ ನಿರ್ಧಾರ ಕೈಗೊಳ್ಳಲು ಕೇಂದ್ರ ಇಚ್ಛಿಸಿಲ್ಲ.

ಗೋರಕ್ಷಣಾ ಸಮಿತಿ ಬಿಕ್ಕಟ್ಟು ಚರ್ಚೆಗೆ ಇಂದು ಕೇಂದ್ರ ಸಂಪುಟದ ಸಭೆ
ನವದೆಹಲಿ, ಆ. 7– ಶ್ರೀಮತಿ ಇಂದಿರಾ ಗಾಂಧಿಯವರು, ಕೇಂದ್ರ ಸಚಿವ ಸಂಪುಟದ ವಿಶೇಷ ಸಭೆಯನ್ನು ನಾಳೆ ಕರೆದಿದ್ದಾರೆ. ಗೋ ಸಂರಕ್ಷಣಾ ಸಮಿತಿಯಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ಕುರಿತು ಚರ್ಚಿಸಲಾಗುವುದೆಂದು ತಿಳಿದುಬಂದಿದೆ.

ವಿಶ್ವವಿದ್ಯಾಲಯ ಧನ ಆಯೋಗ ಮಸೂದೆಗೆ ರಾಜ್ಯ ಸಭೆ ಅಂಗೀಕಾರ

ನವದೆಹಲಿ, ಆ. 7– ವಿಶ್ವವಿದ್ಯಾಲಯ ಧನ ಆಯೋಗವು ಕೇಂದ್ರೀಕೃತ ಪ್ರಭುತ್ವ ಪಡೆಯಲೆಂದು ಶಿಕ್ಷಣ ಸಚಿವ ತ್ರಿಗುಣ ಸೇನರು ಆಶ್ವಾಸನೆ ಇತ್ತ ನಂತರ ರಾಜ್ಯ ಸಭೆಯು ಇಂದು ವಿಶ್ವವಿದ್ಯಾಲಯ ಧನ ಆಯೋಗ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !