ಭಾನುವಾರ, 8–9–1968

7

ಭಾನುವಾರ, 8–9–1968

Published:
Updated:

ಉತ್ಕಟ ಕ್ಷಾಮ ಪರಿಸ್ಥಿತಿ: ಜನಕ್ಕೆ ಅನ್ನ–ನೀರಿಲ್ಲ, ದನಕ್ಕೆ ಮೇವಿಲ್ಲ
ಬೆಂಗಳೂರು, ಸೆ. 7–
‘ಜನಕ್ಕೆ ಅನ್ನ ನೀರಿಲ್ಲ ದನಕ್ಕೆ ಮೇವಿಲ್ಲ’. ಬರದ ಬೇಗೆಯನ್ನು ವಿಧಾನ ಸಭೆಯಲ್ಲಿ ಇಂದು ವರ್ಣಿಸಿದ ಸದಸ್ಯರು ಉತ್ಕಟ ಪರಿಸ್ಥಿತಿಯನ್ನು ನಿವಾರಿಸಲು ಕೆರೆಗಳ ದುರಸ್ತಿ ಪ್ರಾರಂಭಿಸಿ ಪರಿಹಾರ ಕಾಮಗಾರಿಗಳಲ್ಲಿ ಕೊಂಚವೂ ವಿಳಂಬವಾಗದ ರೀತಿಯಲ್ಲಿ ಅಧಿಕಾರಿಗಳು ವರ್ತಿಸುವಂತೆ ಮಾಡಬೇಕೆಂದು ಸರಕಾರಕ್ಕೆ ಸಲಹೆ ಮಾಡಿದರು.

ವಿದ್ಯಾರ್ಥಿ ಮುಷ್ಕರ ಕಾರಣ ರಾಜಸ್ತಾನ್ ವಾರ್ಸಿಟಿ ಬಂದ್
ಜಯಪುರ, ಸೆ. 7–
ರಾಜಸ್ತಾನ್ ವಿಶ್ವ ವಿದ್ಯಾನಿಲಯವನ್ನು ಅನಿರ್ದಿಷ್ಟ ಕಾಲ ಮುಚ್ಚಲಾಗಿದೆಯೆಂದು ವಿಶ್ವ ವಿದ್ಯಾನಿಲಯದ ವಕ್ತಾರರೊಬ್ಬರು ಇಂದು ರಾತ್ರಿ ಪ್ರಕಟಿಸಿದರು. ವಿದ್ಯಾರ್ಥಿ ಮುಷ್ಕರದಿಂದ ಉದ್ಭವಿಸಿರುವ ದುರದೃಷ್ಟಕರ ಪರಿಸ್ಥಿತಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜಸ್ತಾನ್‌ ವಿಶ್ವವಿದ್ಯಾನಿಲಯಕ್ಕೆ ಸೇರಿದ ಎಲ್ಲ ಸ್ಥಳೀಯ ಕಾಲೇಜುಗಳೂ ಬಂದ್ ಆಗಲಿವೆಯೆಂದೂ ವಕ್ತಾರರು ನುಡಿದರು.

ಕಡ್ಡಾಯ ಮತದಾನ ಕಾನೂನು ಅನುಚಿತ
ಉದಕಮಂಡಲ, ಸೆ. 7
– ಮತ ಚಲಾಯಿಸಲು ಇಚ್ಛೆ ಇಲ್ಲದಿರುವ ವ್ಯಕ್ತಿಯನ್ನು ಒತ್ತಾಯಪಡಿಸುವುದು ಪ್ರಯೋಜನವಿಲ್ಲವೆಂಬ ಕಾರಣದ ಮೇಲೆ ಕಾನೂನು ಮೂಲಕ ಮತದಾನ ಕಡ್ಡಾಯಪಡಿಸುವುದನ್ನು ಇಲ್ಲಿ ಸಭೆ ಸೇರಿರುವ ಮುಖ್ಯ ಚುನಾವಣಾಧಿಕಾರಿಗಳು ಸಾಮಾನ್ಯವಾಗಿ ವಿರೋಧಿಸಿದರು.

10 ರಂದು ಅಮೆರಿಕಕ್ಕೆ ಅಣ್ಣಾದೊರೆ
ಮದ್ರಾಸ್, ಸೆ. 7–
ಗಂಟಲಲ್ಲಿ ಬೆಳೆದಿರುವ ದುರ್ಮಾಂಸದ ಶಸ್ತ್ರ ಚಿಕಿತ್ಸೆಗಾಗಿ ಮದ್ರಾಸ್ ಮುಖ್ಯಮಂತ್ರಿ ಸಿ.ಎನ್. ಅಣ್ಣಾ ದೊರೆ ಅವರು ಸೆಪ್ಟೆಂಬರ್ 10 ರಂದು ಅಮೆರಿಕಕ್ಕೆ ಹೋಗುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !