ಸೋಮವಾರ, 9–9–1968

7

ಸೋಮವಾರ, 9–9–1968

Published:
Updated:
Deccan Herald

12ರಂದು ಅಸ್ಸಾಂನಲ್ಲಿ ತೀವ್ರ ಗಲಭೆ, ಹಿಂಸಾಕೃತ್ಯ ಸಂಭವ

ಇಂದೂರು, ಸೆ. 8– ‘ಅಸ್ಸಾಂ ಪುನರ್ವಿಂಗಡಣೆ ಬಗ್ಗೆ ಕೇಂದ್ರ ಅಂತಿಮ ನಿರ್ಧಾರ ಪ್ರಕಟಿಸುವ ಸಂಭವವಿರುವ ಈ ತಿಂಗಳ 12ರಂದು ಅಸ್ಸಾಂ ರಾಜ್ಯದಾದ್ಯಂತ ಹಿಂಸಾಕೃತ್ಯ ಹಾಗೂ ಗಲಭೆಯುಂಟುಮಾಡಲು ಚೀನ ಮತ್ತು ಪಾಕಿಸ್ತಾನದಿಂದ ಉತ್ತೇಜಿತರಾದ ಕೆಲವು ಮಂದಿ ಒಳಸಂಚು
ನಡೆಸುತ್ತಿದ್ದಾರೆ’ ಎಂದು ಕೇಂದ್ರ ಸರ್ಕಾರಕ್ಕೆ ಜನಸಂಘದ ನಾಯಕ ಶ್ರೀ ಎ.ಬಿ. ವಾಜಪೇಯಿ ಎಚ್ಚರಿಕೆ ನೀಡಿದ್ದಾರೆಂದು ನಂಬಲರ್ಹವಾಗಿ ತಿಳಿದುಬಂದಿದೆ.

ಭಾರತೀಯ ಜನಸಂಘದ ರಾಷ್ಟ್ರೀಯ ಮಂಡಳಿಯ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಈಗ ಇಲ್ಲಿರುವ ಶ್ರೀ ವಾಜಪೇಯಿ ಅವರು ಕೇಂದ್ರ ಗೃಹಮಂತ್ರಿ ಶ್ರೀ ವೈ.ಬಿ. ಚವಾಣ್‌ ಅವರಿಗೆ ಪತ್ರವೊಂದನ್ನು ಬರೆದು ಈ ಅಂಶ ತಿಳಿಸಿದ್ದಾರೆ.

ಜೀವನಕ್ಕೆ ನಿಕಟವಾದ ಶಿಕ್ಷಣ ಪದ್ಧತಿಗೆ ರಾಷ್ಟ್ರಪತಿ ಒತ್ತಾಯ

ಅಣ್ಣಾಮಲೈ ನಗರ, ಸೆ. 8– ಜನರ ಜೀವನ, ಅಗತ್ಯ, ಆಶೋತ್ತರಗಳಿಗೆ ನಿಕಟವಾದ ಹಾಗೂ ರಾಷ್ಟ್ರೀಯ ಅಭಿವೃದ್ಧಿಗೆ ಪ್ರಬಲ ಸಾಧನವಾಗುವಂಥ ಸಮಗ್ರ ಶಿಕ್ಷಣದ ರಾಷ್ಟ್ರೀಯ ಪದ್ಧತಿಯನ್ನು ರೂಪಿಸಬೇಕೆಂದು ರಾಷ್ಟ್ರಪತಿ ಡಾ. ಜಾಕಿರ್‌ ಹುಸೇನ್‌ ಇಂದು ಕರೆಯಿತ್ತರು.

ಚುನಾವಣಾ ಮೈತ್ರಿಗೆ ಜನಸಂಘ ನಿರಾಸಕ್ತಿ

ಇಂದೂರ, ಸೆ. 8 – ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗಳಲ್ಲಿ ಜನಸಂಘವು ಬೇರಾವುದೇ ರಾಜಕೀಯ ಪಕ್ಷದೊಡನೆ ಮೈತ್ರಿ ಒಪ್ಪಂದ ಮಾಡಿಕೊಳ್ಳುವುದಿಲ್ಲ.

ಇಂದು ಇಲ್ಲಿ ಮುಕ್ತಾಯವಾದ ಅಖಿಲ ಭಾರತೀಯ ಜನಸಂಘ ರಾಷ್ಟ್ರೀಯ ಮಂಡಳಿಯ ಎರಡು ದಿನಗಳ ಅಧಿವೇಶನವು ತನ್ನ ಸಿದ್ಧಾಂತ, ಕಾರ್ಯಕ್ರಮ ಮತ್ತು ಚುನಾವಣೋತ್ತರ ಅವಧಿಯಲ್ಲಿ ತನ್ನ ಕಾರ್ಯನಿರ್ವಹಣೆ ಆಧಾರದಮೇಲೆ ಎಲ್ಲ ಚುನಾವಣೆಗಳಲ್ಲೂ ಭಾಗವಹಿಸಲು ನಿರ್ಧರಿಸಿತು.

ಫ್ರಾನ್ಸ್‌ನ ಮತ್ತೊಂದು ಎಚ್‌– ಬಾಂಬ್‌ ಸ್ಫೋಟ

ಪ್ಯಾರಿಸ್‌, ಸೆ.8– ಫ್ರಾನ್ಸ್‌ ಇಂದು ನೈಋತ್ಯ ಪೆಸಿಫಿಕ್‌ ಪ್ರದೇಶದಲ್ಲಿ ತನ್ನ ಎರಡನೇ ಜಲಜನಕ ಬಾಂಬನ್ನು ಸ್ಫೋಟಗೊಳಿಸಿದುದಾಗಿ ರಕ್ಷಣಾ ಸಚಿವ ಶಾಖೆ ಪ್ರಕಟಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !