ಬುಧವಾರ 11–9–1968

7
ವಾರ

ಬುಧವಾರ 11–9–1968

Published:
Updated:

ರಾಜ್ಯಕ್ಕೆ ಕೂಡಲೆ 20 ಕೋಟಿ ರೂ. ನೆರವು: ಕೇಂದ್ರ ಸರ್ಕಾರಕ್ಕೆ ವಿಧಾನಮಂಡಲದ ಸರ್ವಾನುಮತ ಒತ್ತಾಯ

ಬೆಂಗಳೂರು, ಸೆ. 10– ಮುಂದಿನ ಮಳೆಗಾಲ ಆರಂಭವಾಗುವುದರೊಳಗೆ ರಾಜ್ಯ ಅಭಾವ ಪರಿಸ್ಥಿತಿಯನ್ನು ಹತೋಟಿಗೆ ತಂದು, ಜನರ ಬವಣೆಯನ್ನು ನೀಗಲು, ಕೂಡಲೇ 20 ಕೋಟಿ ರೂಪಾಯಿಗಳನ್ನು ಒದಗಿಸಿಕೊಡಬೇಕು ಎಂದು ವಿಧಾನ ಮಂಡಲದ ಉಭಯ ಸದನಗಳು ಇಂದು, ಏಕಕಂಠದಿಂದ ಕೇಂದ್ರ ಸರ್ಕಾರವನ್ನು ಒತ್ತಾಯಪಡಿಸಿದವು.

ಸಹಕಾರ ಸಂಘಗಳಿಗೆ ಮೂರಕ್ಕಿಂತ ಹೆಚ್ಚು ನಾಮಕರಣಕ್ಕೆ ವಿರೋಧ

ಬೆಂಗಳೂರು, ಸೆ. 10– ಸಹಕಾರ ಸಂಘಗಳಿಗೆ ಮೂರಕ್ಕಿಂತ ಹೆಚ್ಚು ಮಂದಿಯನ್ನು ನಾಮಕರಣ ಮಾಡಲು ಸರ್ಕಾರಕ್ಕೆ ಅವಕಾಶವಿರುವುದನ್ನು ವಿರೋಧಿಸಿ ಜನತಾ ಪಕ್ಷದ ಶ್ರೀ ಕೆ.ಎಚ್. ಪಾಟೀಲ್ ಅವರು ಇಬ್ಬರನ್ನು ಮಾತ್ರ ಅದರಲ್ಲೂ ಅಧಿಕಾರಿಗಳನ್ನು ಮಾತ್ರ ನಾಮಕರಣ ಮಾಡಲು ಅವಕಾಶವಿರುವಂತೆ ಸಹಕಾರ ಸಂಘಗಳ ಶಾಸನಕ್ಕೆ ತಿದ್ದುಪಡಿ ಮಸೂದೆಯನ್ನು ಇಂದು ವಿಧಾನ ಸಭೆಯಲ್ಲಿ ಮಂಡಿಸಿದರು.

‘ನೇತ್ರದಾನಿ’ ಡಾ. ಮೋದಿ ಬಗ್ಗೆ ಮುರಾರಜಿ ಪ್ರಶಂಸೆ

ಬೆಂಗಳೂರು, ಸೆ. 10– ದೀಪವನ್ನು ಬೆಳಗಿಸಿ, ಅಂಧರಿಗೆ ಬೆಳಕನ್ನು ನೀಡುವ ಡಾ. ಎಂ.ಸಿ. ಮೋದಿ ಅವರ ಉಚಿತ ನೇತ್ರ ಚಿಕಿತ್ಸಾ ಶಿಬಿರವೊಂದನ್ನು ಉಪ ಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ಇಂದು ಇಲ್ಲಿ ಉದ್ಘಾಟಿಸಿದರು.

ಬಸವನಗುಡಿಯ ವಾಸವಿ ಧರ್ಮಶಾಲೆಯ ನಗರದ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಶಿಬಿರವನ್ನು ಏರ್ಪಡಿಸಲಾಗಿದೆ.

ಕಳೆದ 25 ವರ್ಷಗಳಿಂದ ದೃಷ್ಟಿ ಕಳೆದುಕೊಂಡ ಅದೃಷ್ಟಹೀನರಿಗೆ ಆಶೆಯ ಬೆಳಕಾಗಿ ಸೇವೆ ಸಲ್ಲಿಸುತ್ತಿರುವ ‘ನೇತ್ರದಾನಿ’ ಮಾನವೀಯತೆಯನ್ನು ಕೊಂಡಾಡಿದ ಶ್ರೀ ದೇಸಾಯಿ ಅವರು ‘ಡಾ. ಮೋದಿಯ ಸೇವೆ ಗ್ರಾಮಾಂತರ ಪ್ರದೇಶದ ಬಡ ಜನರಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವಂತಾ
ಗಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !