ಶನಿವಾರ, 5–10–1968

7

ಶನಿವಾರ, 5–10–1968

Published:
Updated:

ನಾಗಾ–ಮಿಜೋ ದಂಗೆಕೋರರಿಗೆ ಪಾಕ್ ಶಸ್ತ್ರ, ತರಬೇತಿ: ಸರಕಾರದಿಂದ ದಾಖಲೆ ಚಿತ್ರಗಳ ಪ್ರಕಟನೆ

ನವದೆಹಲಿ, ಅ. 4– ನಾಗಾ ಮತ್ತು ಮಿಜೋ ದೌರ್ಜನ್ಯಕಾರರಿಗೆ ಎಲ್ಲ ರೀತಿಯ ನೆರವು ನೀಡುವುದರ ಮೂಲಕ ಪಾಕಿಸ್ತಾನವು ಭಾರತದ ಆಂತರಿಕ ವ್ಯವಹಾರದಲ್ಲಿ ನಿರಂತರ ಹಸ್ತಕ್ಷೇಪ ಮಾಡುತ್ತಿದೆ ಎಂಬುದು ದೌರ್ಜನ್ಯಕಾರರಿಂದ ವಶಪಡಿಸಿಕೊಂಡ ದಾಖಲೆ ಪತ್ರಗಳಿಂದ ದೃಢಪಟ್ಟಿದೆ.

ನಾಗಾ ಮತ್ತು ಮಿಜೋ ದಂಗೆಕಾರರಿಂದ ವಶಪಡಿಸಿಕೊಳ್ಳಲಾದ ದಾಖಲೆಪತ್ರಗಳ ಫೋಟೋ ಸ್ಟ್ಯಾಟ್ ಪ್ರತಿಗಳನ್ನು ಕೇಂದ್ರ ವಿದೇಶಾಂಗ ಖಾತೆ ಇಂದು ಇಲ್ಲಿ ಬಿಡುಗಡೆ ಮಾಡಿತು.

ಭಾರತದ ಪ್ರಜಾಸತ್ತೆ, ಶಾಂತಿ ಮತ್ತು ಸ್ವತಂತ್ರ ನೀತಿ ಬಗ್ಗೆ ಚಿಲಿ ಅಧ್ಯಕ್ಷರ ಪ್ರಶಂಸೆ

ಸ್ಯಾಂಟಿಯಾಗೊ, ಅ. 4– ಸ್ವಾತಂತ್ರ್ಯ, ಶಾಂತಿ ಮತ್ತು ಪ್ರಜಾಪ್ರಭುತ್ವದ ಸ್ಪಷ್ಟ ಸಿದ್ಧಾಂತವನ್ನು ಅನುಷ್ಠಾನಕ್ಕೆ ತಂದಿರುವ ಏಕೈಕ ಬೃಹತ್ ರಾಷ್ಟ್ರ ಭಾರತ ಎಂದು ಚಿಲಿ ಅಧ್ಯಕ್ಷ ಎಡ್ಯುರ್ಡೋ ಫ್ರೈ ಅವರು ನಿನ್ನೆ ಇಲ್ಲಿ ಬಣ್ಣಿಸಿದರು.

ಅನಾವೃಷ್ಟಿ: ಸ್ಥಿತಿ ಸುಧಾರಿಸಲು ಐದಾರು ವರ್ಷ ಬೇಕು

ಬೆಂಗಳೂರು, ಆ. 4– ಮೈಸೂರು ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಸರಿಯಾಗಿ ಮಳೆ ಬಾರದೆ ಆಗಿರುವ ಹಾನಿಯಿಂದ ಚೇತರಿಸಿಕೊಳ್ಳಲು ‘ಐದಾರು ವರ್ಷಗಳಾದರೂ’ ಬೇಕಾಗುವುದೆಂದು ಕಂದಾಯ ಇಲಾಖೆ ಕಾರ್ಯದರ್ಶಿ ಹಾಗೂ ಪರಿಹಾರ ಕಾಮಗಾರಿ ಕಮೀಷನರ್ ಶ್ರೀ ಎಂ.ಎಸ್. ಸ್ವಾಮಿನಾಥನ್‌ರವರು ಇಂದು ಇಲ್ಲಿ ತಿಳಿಸಿದರು.

ಪಂಪ್ ಕೊಳ್ಳಲು ರೈತರಿಗೆ ಸಾಲ ನೀಡಲು ಬ್ಯಾಂಕುಗಳಿಗೆ ಕೃಷಿ ಸಚಿವರ ಕರೆ

ಬೆಂಗಳೂರು, ಅ. 4– ಬಾವಿ ಪಂಪುಗಳನ್ನು ಕೊಳ್ಳಲು, ವಿಮಾ ಪಾಲಿಸಿಯನ್ನು ಆಧಾರವಾಗಿಟ್ಟುಕೊಂಡು, ಸಾಲ ನೀಡುವ ಸರ್ಕಾರದ ವಿಧಾನವನ್ನು, ಬ್ಯಾಂಕುಗಳೂ ಅನುಸರಿಸಬೇಕು ಎಂದು ಕೃಷಿಮಂತ್ರಿ ಶ್ರೀ ಬಿ. ರಾಚಯ್ಯ ಅವರು ಸಲಹೆ ನೀಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !