ಕೋಸಿ ದಂಡೆ ಒಡೆದು ಕನಿಷ್ಠ ಇನ್ನೂರು ಸಾವು

7

ಕೋಸಿ ದಂಡೆ ಒಡೆದು ಕನಿಷ್ಠ ಇನ್ನೂರು ಸಾವು

Published:
Updated:

ಕೋಸಿ ದಂಡೆ ಒಡೆದು ಕನಿಷ್ಠ ಇನ್ನೂರು ಸಾವು

ಪಟ್ನಾ, ಅ. 7– ದರ್ಭಾಂಗ ಜಿಲ್ಲೆಯಲ್ಲಿರುವ ಕೋಸಿ ನದಿಯ ಅತ್ಯಂತ ಮುಖ್ಯವಾದ ಪಶ್ಚಿಮ ದಂಡೆಯು ಅಭೂತಪೂರ್ವ ಪ್ರವಾಹದಿಂದ ಐದು ಕಡೆ ಒಡೆದಿದೆ.

ಕೋಸಿ ನದಿ ಪ್ರವಾಹದಲ್ಲಿ ಕನಿಷ್ಠ 200 ಮಂದಿ ನಾಶವಾಗಿದ್ದಾರೆಂದು ಬಿಹಾರ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ರಾಜೇಂದ್ರ ಮಿಶ್ರ ಅವರು ಹೇಳಿದ್ದಾರೆ.

***

ಸಾರ್ವಜನಿಕ ವ್ಯಕ್ತಿಗಳ ಆಸ್ತಿ ತನಿಖೆಗೆ ಶಾಸನ ಅಗತ್ಯವೆಂದು ಸಿದ್ಧವೀರಪ್ಪ

ಬೆಂಗಳೂರು, ಅ. 7– ಸಾರ್ವಜನಿಕ ಕ್ಷೇತ್ರದಲ್ಲಿ ದುಡಿಯುವ ಜನರ ಆಸ್ತಿಪಾಸ್ತಿಗಳನ್ನು ತನಿಖೆ ನಡೆಸಬೇಕೆಂಬ ಸಂಬಂಧದಲ್ಲಿ ಜನ ದೂರು ನೀಡಲನುವಾಗುವಂತೆ ಕಾನೂನು ಮಾಡುವುದು ಅಗತ್ಯವೆಂದು ಜನತಾ ಪಕ್ಷದ ಕಾರ್ಯಾಧ್ಯಕ್ಷ ಶ್ರೀ ಎಚ್. ಸಿದ್ಧವೀರಪ್ಪ ಅವರು ಇಂದು ಇಲ್ಲಿ ಪತ್ರಿಕಾ ವರದಿಗಾರರಿಗೆ ತಿಳಿಸಿದರು.

ದೂರು ನೀಡುವವರಿಗೆ ಕಾನೂನು ರಕ್ಷಣೆ ಇರುವುದು ಅಗತ್ಯವೆಂದು ತಿಳಿಸಿದ ಶ್ರೀ ಸಿದ್ಧವೀರಪ್ಪ ಅವರು, ಸುಳ್ಳು ದೂರು ನೀಡುವವರನ್ನು ಶಿಕ್ಷಿಸಲು ಕಾನೂನಿನಲ್ಲಿ ಅವಕಾಶವಿರಬೇಕೆಂದು ಹೇಳಿದರು.

***

ಪುದುಚೇರಿಯ ಲೆ. ಗೌರ್‍ನರಾಗಿ ಶ್ರೀ ಬಿ.ಡಿ. ಜತ್ತಿ 

ನವದೆಹಲಿ, ಅ. 7– ಶ್ರೀ ಬಸಪ್ಪ ದಾನಪ್ಪ ಜತ್ತಿ ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗೌರ್‍ನರಾಗಿ ನೇಮಕ ಮಾಡಲಾಗಿದೆ ಎಂದು ರಾಷ್ಟ್ರಪತಿ ಭವನ ಇಂದು ಹೊರಡಿಸಿದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಏಷ್ಯದಲ್ಲೇ ಅತಿದೊಡ್ಡ ಕೋಳಿ ಸಾಕಣೆ ಶಾಲೆ ಹೆಸರಘಟ್ಟದಲ್ಲಿ

ಬೆಂಗಳೂರು, ಅ. 7– ಹೆಸರಘಟ್ಟದಲ್ಲಿ ‘ಭಾರತದ ಏಕೈಕ, ಏಷ್ಯದ ಅತಿದೊಡ್ಡ ಕೋಳಿ ಸಾಕಣೆ ಶಾಲೆಯನ್ನು ಕೇಂದ್ರ ಸರಕಾರವು ತೆರೆಯಲಿದೆ.

ಹೆಸರಘಟ್ಟದಲ್ಲಿ ಕೇಂದ್ರದ ಕೋಳಿ ಸಾಕಣೆ ಕ್ಷೇತ್ರ ಒಂದು ಈಗಾಗಲೇ ಇದ್ದು ಅದರ ಅಂಗವಾಗಿಯೇ ಈ ತರಪೇತು ಶಾಲೆ ತೆರೆಯುವುದು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !