ಒಲಿಂಪಿಕ್ ಹಾಕಿ: ನ್ಯೂಜಿಲೆಂಡಿಗೆ ಜಯ

7
ಸೋಮವಾರ

ಒಲಿಂಪಿಕ್ ಹಾಕಿ: ನ್ಯೂಜಿಲೆಂಡಿಗೆ ಜಯ

Published:
Updated:
Deccan Herald

ಒಲಿಂಪಿಕ್ ಹಾಕಿ: ನ್ಯೂಜಿಲೆಂಡಿಗೆ ಜಯ

ವರದಿ: ಕೆ.ಎ. ನೆಟ್ಟಕಲ್ಲಪ್ಪ

ಮೆಕ್ಸಿಕೊ ನಗರ, ಅ. 13– ವಿಶ್ವ ಹಾಗೂ ಒಲಿಂಪಿಕ್ಸ್ ಚಾಂಪಿಯನ್ನರೆಂದು ಹೆಸರುಗಳಿಸಿರುವ ಭಾರತದ ಹಾಕಿ ತಂಡವನ್ನು ಒಲಿಂಪಿಕ್ಸ್‌ ಹಾಕಿ ಟೂರ್ನಮೆಂಟಿನಲ್ಲಿ ಇಂದು ನ್ಯೂಜಿಲೆಂಡ್‌ 2–1 ಗೋಲುಗಳಿಂದ ಪರಾಭವಗೊಳಿಸಿ ದಿಗ್ಭ್ರಮೆ ಉಂಟುಮಾಡಿತು.

ಏಳು ಸಲ ಒಲಿಂಪಿಕ್ಸ್‌ ಹಾಕಿ ಚಾಂಪಿಯನ್ನರಾಗಿದ್ದು ಚಿನ್ನದ ಪದಕವನ್ನು ಹೊಂದಿದ್ದ ಭಾರತ ಪೂರ್ವಭಾವಿ ಸ್ಪರ್ಧೆಯಲ್ಲಿ ಸೋತಿರುವುದು ಇದೇ ಮೊದಲು.

ಎಚ್.ಎ.ಎಲ್. ಅಭಿವೃದ್ಧಿಗೆ ಕ್ರಮ

ನವದೆಹಲಿ, ಅ. 13– ಕಡಿಮೆ ಉತ್ಪಾದನೆಯ ‘ಅತೃಪ್ತಿಕರ’ ವಿದ್ಯಮಾನಗಳನ್ನು ಸರಿಪಡಿಸಲು ಹಿಂದೂಸ್ಥಾನ್ ಏರ್‌ಕ್ರಾಫ್ಟ್‌ನ ಬೆಂಗಳೂರು ವಿಭಾಗದಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ಜನಸಂಘದ ನಿರ್ಗಮನ ಖಚಿತ

ತುಮಕೂರು, ಅ. 13– ಮಧ್ಯಪ್ರದೇಶದ ಸಂಯುಕ್ತ ವಿಧಾಯಕ ದಳದಿಂದ ಜನಸಂಘವು ಹೊರಬರುವುದು ಅಲ್ಲಿನ ಪ್ರಕೃತ ರಾಜಕೀಯ ಪರಿಸ್ಥಿತಿ ಪ್ರಕಾರ ಹೆಚ್ಚು ಕಡಿಮೆ ಖಚಿತ.

ಆ 24 ರಿಂದ ಭೂಪಾಲದಲ್ಲಿ ನಡೆಯುವ ಜನಸಂಘದ ನಾಯಕರ ಸಭೆಯಲ್ಲಿ ಈ ಬಗ್ಗೆ ನಿರ್ಧಾರಕ್ಕೆ ಬರುವ ನಿರೀಕ್ಷೆ ಇದೆ.

ಹೃದಯ ಸ್ನಾಯುವಿಗೆ ಶಕ್ತಿ ವರ್ಧಕ

ಮುಂಬೈ, ಅ. 13– ಹೃದಯದ ಚಟುವಟಿಕೆ ಮತ್ತು ಶಕ್ತಿಗುಂದದಂತೆ ನಿರ್ವಹಿಸುವ ಹಾಗೂ ಹೃದಯದ ಸ್ನಾಯುವಿಗೆ ಯಾವ ತೊಂದರೆಯೂ ಆಗದಂತೆ ತಡೆಯುವ ವಸ್ತುವೊಂದನ್ನು ರಾಸಾಯನಿಕ, ಔದ್ಯಮಿಕ ಹಾಗೂ ವೈದ್ಯಕೀಯ ಪ್ರಯೋಗ ಶಾಲೆಗಳ ವಿಜ್ಞಾನಿಗಳು ಯಶಸ್ವಿಯಾಗಿ ಸಿದ್ಧಗೊಳಿಸಿದ್ದಾರೆ.

ಸಸ್ತನಿಗಳ ಹೃದಯದ ಸಾರದಿಂದ ತಯಾರಿಸಲಾದ ಈ ವಸ್ತುವು ಹೃದಯ ರೋಗಗಳಿಗೆ ನಿವಾರಣೆಯಲ್ಲ, ಆದರೆ ಹೃದಯ ಸ್ನಾಯುವಿನ ಪೋಷಕವಸ್ತು ಎಂದು ಈ ವಿಜ್ಞಾನಿಗಳು ಹೇಳಿದ್ದಾರೆ.

ಭಾರತ ಮತ್ತು ಸ್ವಿಸ್ ರಾಷ್ಟ್ರಗಳಲ್ಲಿ ಈ ವಸ್ತುವನ್ನು ವೈದ್ಯರು ಪ್ರಯೋಗಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !